
ಶಿವಮೊಗ್ಗ : ನಗರದ ಕೋಟೆ ಶ್ರೀಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಿಂದ ಸಮೀಪದ ಮಹೇಂದ್ರಗಿರಿ ಕ್ಷೇತ್ರ ಪಿಳ್ಳಂಗಿರಿಗೆ ನಾಳೆ (ನ.16 ರಂದು) 26ನೇ ವರ್ಷದ ಶ್ರೀರಂಗ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
![]()
ನಾಳೆ ಬೆಳಗ್ಗೆ 6.30ಕ್ಕೆ ಕೋಟೆ ರಸ್ತೆಯ ದೇವಾಲಯ ಆವರಣದಿಂದ ಪಾದಯಾತ್ರೆ ಹೊರಡಲಿದ್ದು, ಬೆಳಗ್ಗೆ 9.30 ಗಂಟೆಗೆ ಪಿಳ್ಳಂಗಿರಿ ತಲುಪಲಾಗುವುದು.

ನಂತರ ಅಲ್ಲಿ ಶ್ರೀರಂಗನಾಥ ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ, ಪ್ರಾಕಾರೋತ್ಸವ, ಮಹಾ ಪ್ರಸಾದ ವಿನಿಯೋಗವಿದೆ. ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ » ಜ್ಯುವೆಲ್ ರಾಕ್ ಹೋಟೆಲ್ ನಲ್ಲಿ ಅರ್ಬನ್ ಇಂಡಿಯಾ ಪ್ರದರ್ಶನಕ್ಕೆ ತೇಜಸ್ವಿನಿ ರಾಘವೇಂದ್ರ ಚಾಲನೆ