
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ವತಿಯಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೈರೋ ಕ್ಯಾಸ್ಟ್ ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಚಂದ್ರು ಎಂಟರ್ಪ್ರೈಸಸ್ ಕಾಶಿಪುರ ( ನಂದಿನಿ ಐಸ್ ಕ್ರೀಮ್ ಡಿಸ್ಟ್ರಿಬ್ಯೂಟರ್ ) ಈ ಸಂಸ್ಥೆಯ ಸಿಬ್ಬಂದಿ ವರ್ಗದವರಾದ ಬಸವರಾಜು.ಟಿ.ಆರ್, ಅಜಯ್.ಎನ್, ನಹೀದುಲ್ಲ ಖಾನ್, ಶ್ರೀನಿವಾಸ್.ಸಿ, ಅಭಿನಂದನ, ಶಿವಕುಮಾರ್, ಗಿರೀಶ್, ಅಭಿಷೇಕ್, ವಿನೋದ್ ಕುಮಾರ್ ಸೇರಿದಂತೆ ಒಟ್ಟಾರೆ 38 ಜನರು ರಕ್ತದಾನ ಮಾಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರು ಬಿ.ಗೋಪಿನಾಥ್, ಜಿಲ್ಲಾ ವಿತರಕ ಸಂಘದ ಅಧ್ಯಕ್ಷರಾದ ಸಿ.ಎಂ.ದೇವರಾಜ್ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್ ಇವರು ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಮತ್ತು ಸಂಸ್ಥೆಯ ಮಾಲೀಕರಾದ ಚಂದ್ರಶೇಖರ್.ಕೆ.ಕೆ ಅವರಿಗೆ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ವೇಳೆ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಹಾಗೂ ಸಿಹಿ ತಿಂಡಿಗಳ ಬಾಕ್ಸ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ.ಗೋಪಿನಾಥ್, ಕಾರ್ಯದರ್ಶಿ ಎ.ಎಂ.ಸುರೇಶ್, ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಸಿ.ಎಂ.ದೇವರಾಜ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.