
ಶಿವಮೊಗ್ಗ : ಶಿವಮೊಗ್ಗ ನಗರದ ಪ್ರಮುಖ ಗಣಪತಿಗಳಲ್ಲಿ ಒಂದಾದ ‘ಓಂ ಗಣಪತಿ’ ವಿಸರ್ಜನಾ ಪೂರ್ವ ಮೆರವಣಿಗೆಯು ಇಂದು (ಸೆ.11) ಅತ್ಯಂತ ಸಂಭ್ರಮದಿಂದ ಶಾಂತಿಯುತವಾಗಿ ನಡೆಯಿತು.
ಇಂದು ಅಪರಾಹ್ನ ಸಮಯದ ಸುಮಾರಿಗೆ ಅಶೋಕ ನಗರ ಬಡಾವಣೆಯಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಸ್ಥಳಗಳ ಮೂಲಕ ಹಾದುಹೋಗುವುದರ ಮೂಲಕ ಮೆರವಣಿಗೆ ನಡೆಯಿತು.

ಕಳೆದ ಕೆಲ ದಿನಗಳ ಹಿಂದಷ್ಟೇ ವಿಸರ್ಜನೆಯಾದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಭಾಗವಹಿಸಿದಂತೆ ಜನ ಸಮೂಹ ಕಾಣಬಾರದೇ ಇದ್ದರೂ ಕೂಡ ಅನೇಕ ಭಕ್ತಾದಿಗಳು, ಯುವಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ವಿಶೇಷವಾಗಿ ಮಹಾದ್ವಾರದ ಬಳಿ ವಿಜೃಂಭಣೆಯ ವಾತಾವರಣ ಸೃಷ್ಟಿಯಾಗಿತ್ತು. ಬಾರಿ ಸಂಖ್ಯೆಯಲ್ಲಿ ಜಮಾಗೊಂಡಿದ್ದ ಜನಸ್ತೋಮ ಇದಕ್ಕೆ ಸಾಕ್ಷಿಯಾಗಿತ್ತು.

ಮೆರವಣಿಗೆಯಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಮುಖಂಡರಾದ ಪ್ರಭಾಕರ್, ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯ ಮಾರ್ಗ :
ಮೆರವಣಿಗೆಯು ಅಶೋಕ ನಗರ, ರಾಮಣ್ಣ ಶ್ರೇಷ್ಠಿ ಪಾರ್ಕ್, ಬಿ.ಬಿ.ರಸ್ತೆ, ಗಾಂಧಿ ಬಜಾರ್, ಎ.ಎ.ಸರ್ಕಲ್, ಬಿ.ಎಚ್.ರಸ್ತೆ, ಕೋಟೆ ಪೊಲೀಸ್ ಠಾಣೆ ಮಾರ್ಗದ ಮೂಲಕ ಬಂದು ತುಂಗಾ ನದಿ ಮಂಟಪದಲ್ಲಿ ಗಣಪತಿ ವಿಸರ್ಜಿಸಲಾಗುವುದು.

ಬಿಗಿ ಪೊಲೀಸ್ ಬಂದೋಬಸ್ತ್ :
ಓಂ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಡಿಎಸ್ಪಿ, ಸಿಪಿಐ, ಪಿಎಸ್ಐ, ಎಎಸ್ಐ, ಹೆಡ್ ಕಾನ್ಸ್ಟೇಬಲ್ಸ್, ಹೋಂ ಗಾರ್ಡ್ಸ್, ವಿಡಿಯೋ ಗ್ರಾಫರ್ಸ್, ಕೆಎಸ್ಆರ್ಪಿ, ಡಿಎಆರ್ ತುಕ್ಕಡಿಗಳು, ಅಗ್ನಿಶಾಮಕ ದಳ, ಸಿಸಿ ಕ್ಯಾಮೆರಾ ಸೇರಿದಂತೆ ಖಾಕಿ ಹದ್ದಿನ ಕಣ್ಣಿನ ಮಧ್ಯೆ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಿತು.


ಇದನ್ನೂ ಓದಿ » ಟ್ರಾಫಿಕ್ ದಂಡದಲ್ಲಿ ಶೇ.50 ರಷ್ಟು ರಿಯಾಯಿತಿ! ಇನ್ನೂ ಒಂದೇ ದಿನ ಬಾಕಿ, ಇಂದೇ ಪಾವತಿಸಿ