
ಶಿವಮೊಗ್ಗ : ಅನವರತ ತಂಡ ತನ್ನ ಚಟುವಟಿಯನ್ನು ನಿರಂತರವಾಗಿ ಮಾಡುತ್ತಿದ್ದು, ಅನವರತ ತಂಡದ ನೇತೃತ್ವದಲ್ಲಿ ಸ್ಮಾರ್ಟ್ ಶಿವಮೊಗ್ಗ, ಚರ್ಚೆ ವಿತ್ ಚೆನ್ನಿ, ಸಿಹಿಮೊಗೆ ಸಂಭ್ರಮ, ಯುವೋತ್ಸವ ದೇಸಿ ಕ್ರೀಡೆಗಳ ಹಬ್ಬ ಹಾಗೂ ಪ್ರಜ್ಞಾನಂ ಆರೋಗ್ಯ- ಶಿಕ್ಷಣ ಕಾರ್ಯಕ್ರಮಗಳ ಜೊತೆ “ವಿವೇಕ ವಿದ್ಯಾನಿಧಿ” ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಇಂದು ಶಿವಮೊಗ್ಗ ನಗರ ಶಾಸಕರು ಹಾಗೂ ಅನವರತ ತಂಡದ ಗೌರವಾಧ್ಯಕ್ಷರೂ ಆದ ಎಸ್.ಎನ್.ಚನ್ನಬಸಪ್ಪ ರವರು ಪೋಸ್ಟರ್ ಬಿಡುಗಡೆಗೊಳಿಸುವುದರ ಮೂಲಕ ಚಾಲನೆ ನೀಡಿದರು.
ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಯುವಜನತೆಯ ಸ್ಫೂರ್ತಿಯಾದ ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿಗೂ ಪ್ರಸ್ತುತ. ಅವರ ಆಶಯದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡುವ ನಿಟ್ಟಿನಲ್ಲಿ, ಪ್ರಸ್ತುತ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ತಂಡವು ವಿವೇಕ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಬೇಕೆಂದು ಯೋಚಿಸಿದ್ದು, ಇಂದು ಗುರು ಪೂರ್ಣಿಮೆಯಾದ ಕಾರಣ ಇಂದೇ ಪ್ರಾರಂಭ ಮಾಡಬೇಕೆಂಬುದು ಅನವರತ ತಂಡದ ಅಭಿಲಾಷೆ ಎಂದರು.
ಇಂದಿನ ಯುವ ಪೀಳಿಗೆಯು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂಬುದು ತಂಡದ ಉದ್ದೇಶವಾಗಿದ್ದು, ಹಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಿದೆ. ಮೂರು ಸಂಗತಿಗಳು ಈಗಾಗಲೇ ಅನವರತ ತಂಡದ ನೇತೃತ್ವದಲ್ಲಿ ಪ್ರಾರಂಭವಾಗಿದ್ದು, ಇದೀಗ ನಾಲ್ಕನೇ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ. ಸಮಾಜದಲ್ಲಿ ಅನೇಕ ಕೊಡುಗೈ ದಾನಿಗಳನ್ನು ಈ ಶ್ರೇಷ್ಠ ಕಾರ್ಯಕ್ರಮದಲ್ಲಿ ಜೋಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಉನ್ನತ ಶಿಕ್ಷಣದ ಕನಸಿಗೆ ಸಣ್ಣ ಬೆಂಬಲವಾಗಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.50 ರಿಂದ ಶೇ.75 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ ರೂ.5,000ಗಳ ವಿದ್ಯಾರ್ಥಿ ವೇತನ ಒದಗಿಸಲು ಅನವರತ ತಂಡ ಮುಂದಾಗಿದೆ.
ಅರ್ಹ ಅಭ್ಯರ್ಥಿಗಳು ಶಾಸಕರ ಕರ್ತವ್ಯ ಭವನದಿಂದ ಅರ್ಜಿಯನ್ನು ಪಡೆಯತಕ್ಕದ್ದು, ಅರ್ಜಿಗೆ ರೂ.10ಗಳನ್ನು ನಿಗದಿ ಮಾಡಲಾಗಿದ್ದು, ಅರ್ಜಿಯನ್ನು ನಾಳೆಯಿಂದ (ಜುಲೈ 11 ರಿಂದ) ಆಗಸ್ಟ್ 15 ರವರೆಗೆ ನೀಡಲಾಗುವುದು. ಆಗಸ್ಟ್ 30 ರೊಳಗೆ ಪುನಃ ಶಾಸಕರ ಕರ್ತವ್ಯ ಭವನಕ್ಕೆ ಅರ್ಜಿಯನ್ನು ಹಿಂದಿರುಗಿಸಬೇಕು. ಹಿಂದಿನ ವರ್ಷದ ಅಂಕಪಟ್ಟಿ, ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವೇಕ ವಿದ್ಯಾನಿಧಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ವಿತರಿಸಲಾಗುವುದು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆಯೋಜಿಸಿದ್ದೇವೆ. 1000 ಜನ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾನಿಧಿ ವಿದ್ಯಾರ್ಥಿ ವೇತನ ನೀಡಬೇಕೆಂದಿದ್ದೇವೆ. ಆಗಸ್ಟ್ ಒಳಗಡೆ ಕನಿಷ್ಠ 100 ಜನ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ತಲುಪಿಸುವ ಉದ್ದೇಶ ಇದೆ.
| ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು ಹಾಗೂ ಅನವರತ ತಂಡದ ಗೌರವಾಧ್ಯಕ್ಷರು
ಅರ್ಹ ಅಭ್ಯರ್ಥಿಗಳು ಶಾಸಕರ ಕರ್ತವ್ಯ ಭವನದಿಂದ ಅರ್ಜಿಯನ್ನು ಪಡೆಯತಕ್ಕದ್ದು, ಅರ್ಜಿಗೆ ರೂ.10ಗಳನ್ನು ನಿಗದಿ ಮಾಡಲಾಗಿದ್ದು, ಅರ್ಜಿಯನ್ನು ನಾಳೆಯಿಂದ (ಜುಲೈ 11 ರಿಂದ) ಆಗಸ್ಟ್ 15 ರವರೆಗೆ ನೀಡಲಾಗುವುದು. ಆಗಸ್ಟ್ 30 ರೊಳಗೆ ಪುನಃ ಶಾಸಕರ ಕರ್ತವ್ಯ ಭವನಕ್ಕೆ ಅರ್ಜಿಯನ್ನು ಹಿಂದಿರುಗಿಸಬೇಕು. ಹಿಂದಿನ ವರ್ಷದ ಅಂಕಪಟ್ಟಿ, ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವೇಕ ವಿದ್ಯಾನಿಧಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ವಿತರಿಸಲಾಗುವುದು ಎಂದರು.
ಶಿವಮೊಗ್ಗ ನಗರದಲ್ಲಿ 110 ಪ್ರೌಢ ಶಾಲೆಗಳಲ್ಲಿ 7325 ಮಕ್ಕಳಿದ್ದು, 38 ಪಿಯು ಕಾಲೇಜ್ ಗಳಲ್ಲಿ 6570 ಮಕ್ಕಳಿದ್ದು, ಒಟ್ಟಾರೆ 13885 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಸೂಡಾ ಅಧ್ಯಕ್ಷ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಭಾಕರ್, ಅನವರತ ತಂಡದ ನವೀನ್, ಪ್ರಿಯಾ, ಸುನಿಲ್, ಪೃಥ್ವಿ, ಜಗದೀಶ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.