
ಶಿವಮೊಗ್ಗ : ರಾಷ್ಟ್ರ ಭಕ್ತರ ಬಳಗಕ್ಕೆ ಇವತ್ತು ಕಾಂಗ್ರೆಸ್ ಜೆಡಿಸ್, ಬಿಜೆಪಿ ನಾಯಕರಲ್ಲದೆ ವಿವಿಧ ಸಂಸ್ಥೆಯಲ್ಲಿರುವ ಸಮಾಜ ಸೇವಕರು ಸೇರ್ಪಡೆಯಾಗಿರುವುದು ಬಹಳ ಸಂತೋಷ ತಂದಿದೆ. ‘ಇದು ಟ್ರೇಲರ್ ಅಷ್ಟೇ ಪಿಚ್ಚರ್ ಅಭಿ ಭಾಕಿ ಹೈ,’ ಮುಂದಿನ ದಿನಗಳಲ್ಲಿ ಇನ್ನೂ ಸೇರ್ಪಡೆಗೊಳ್ಳುವವರಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ರಾಷ್ಟ್ರ ಭಕ್ತರ ಬಳಗದ ಸಂಚಾಲಕರೂ ಆದ ಕೆ.ಎಸ್.ಈಶ್ವರಪ್ಪ ಹೇಳಿದರು.
ಮೊನ್ನೆಯಷ್ಟೇ ರಾಷ್ಟ್ರ ಭಕ್ತರ ಬಳಗದಿಂದ ಸುಮಾರು 40 ಜನರು ಬಿಜೆಪಿಗೆ ಸೇರ್ಪಡೆಯಾಗಿದ್ದ ಬೆನ್ನಲ್ಲೇ ಇಂದು ಬಿಜೆಪಿಯಿಂದ ಸುಮಾರು 60 ಕ್ಕೂ ಹೆಚ್ಚು ಜನರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ರಾಷ್ಟ್ರ ಭಕ್ತರ ಬಳಗಕ್ಕೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಅವರು, ಒಂದಿಬ್ಬರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಈಶ್ವರಪ್ಪ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ವಾತಾರಣ ಸೃಷ್ಟಿ ಮಾಡಿದ ತಕ್ಷಣ ರಾಷ್ಟ್ರ ಭಕ್ತರ ಬಳಗ ನಿಲ್ಲುವುದಿಲ್ಲ. ನೀವೆಲ್ಲರೂ ರಾಷ್ಟ್ರ ಭಕ್ತರ ಬಳಗಕ್ಕೆ ಸೇರ್ಪಡೆಯಾಗಿರುವುದು ಬಹಳ ಸಂತೋಷ ತಂದಿದೆ. ಹಿಂದುತ್ವ ಉಳಿಸುವ ಲೆಕ್ಕದಲ್ಲಿ ಇದು ಆರಂಭವಾಗಿದೆ ಎಂದರು.
ಬರೆದಿಟ್ಟುಕೊಳ್ಳಿ ಯಾವತ್ತೆ ಚುನಾವಣೆ ಬಂದರೂ 36 ಸ್ಥಾನಕ್ಕೂ ಪ್ರತಿನಿಧಿಸಿ, ನೂರಕ್ಕೆ ನೂರು ಮತ ಪಡೆದುಕೊಳ್ಳುತ್ತೇವೆ. ಸಿದ್ಧಾಂತಗಳ ಬಗ್ಗೆ ಚರ್ಚೆ ಆಗಬೇಕು. ಅಲ್ಲಿಯವರೆಗೂ ಬಿಜೆಪಿಗೆ ಹೋಗುವುದಿಲ್ಲ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿ ಗೆ ಸೇರಿದಂತಲ್ಲ. ನಾವು ಯಡಿಯೂರಪ್ಪ ಅವರು ಮೊದಲಿನಿಂದಲೂ ಅಣ್ಣ ತಮ್ಮ ಇದ್ದಂತೆ. ಸ್ನೇಹ, ವಿಶ್ವಾಸ ಬೇರೆ ರಾಜಕಾರಣ ಬೇರೆ ಎಂದರು.
ಕರ್ನಾಟಕದಲ್ಲಿರುವ ಕುಟುಂಬ ರಾಜಕಾರಣ ಹೋಗಬೇಕು. ಕುಟುಂಬ ರಾಜಕಾರಣವನ್ನು ಮೋದಿಯವರು ಒಪ್ಪಲ್ಲ. ಆದರೆ ರಾಜಕೀಯದಲ್ಲಿ ನಡೆಯುತ್ತಿದೆ. ಆಚಾರ, ಸಿದ್ಧಾಂತ ಒಂದೂ ಇಲ್ಲದಂತಾಗಿದೆ. ನಮ್ಮ ಕಾರ್ಯಕರ್ತರು ಇಡೀ ರಾಜ್ಯದಲ್ಲಿ ಇದ್ದಾರೆ. ಈ ದೇಶ ಹಿಂದುತ್ವದ ಮೇಲಿದ್ದು, ಹಿಂದುತ್ವಕ್ಕೆ ಹೋರಾಟ ಮಾಡುತ್ತೇವೆ. ಇದು ಯಶಸ್ವಿಯಾಗುತ್ತದೆ.
– ಕೆ.ಎಸ್.ಈಶ್ವರಪ್ಪ, ಮಾಜಿ ಹಾಗೂ ರಾಷ್ಟ್ರ ಭಕ್ತರ ಬಳಗದ ಸಂಚಾಲಕರು
ಅನೇಕರು ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಿದ್ದಾರೆ. ಪಕ್ಷ ಶುದ್ಧೀಕರಣ ಆಗುತ್ತದೆ. ಹಿರಿಯರ ತಪಸ್ಸಿಗೆ ಬೆಲೆ ಕೊಡುವ ಸಲುವಾಗಿ ರಾಷ್ಟ್ರ ಭಕ್ತರ ಬಳಗವನ್ನು ಬೆಳೆಸುತ್ತಿದ್ದೇವೆ. ಬಿಜೆಪಿಯನ್ನು ಶುದ್ಧೀಕರಣ ಮಾಡುತ್ತೇವೆ. ನಮ್ಮ ಸಿದ್ಧಾಂತ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಭಾರತೀಯ ಜನತಾ ಪಾರ್ಟಿ ಶುದ್ಧೀಕರಣ ಆಗಬೇಕು. ರಾಷ್ಟ್ರ ಭಕ್ತರ ಬಳಗವನ್ನು ಬೆಂಬಲಿಸಿ, ಗಟ್ಟಿಯಾಗಿ ಕಟ್ಟೋಣ ಎಂದರು.

ಶಿವಮೊಗ್ಗ ನಗರದ ಕಥೆ ಏನು ?
ಶಿವಮೊಗ್ಗ ನಗರದ ಕಥೆ ನೋಡಿದರೆ ನೋವಾಗುತ್ತದೆ. ರಾಜ್ಯ ಸರ್ಕಾರ ಒಂದೇ ಒಂದು ರೂಪಾಯಿಯನ್ನು ಅಭಿವೃದ್ಧಿಯ ಸಲುವಾಗಿ ಶಿವಮೊಗ್ಗ ನಗರಕ್ಕೆ ನೀಡಿಲ್ಲ. ಶಿವಮೊಗ್ಗ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಡವರು 9 ವರ್ಷ ಆಯಿತು. 80 ಸಾವಿರ, 50 ಸಾವಿರ ಹಣ ನೀಡಿ, ಇನ್ನೂ ಮನೆ ಪೂರ್ಣ ಆಗಿಲ್ಲ. ಆ ಬಡವರಿಗೆ ಮನೆ ಸಿಕ್ಕರೆ ನಿಮ್ಮ ಮಕ್ಕಳು ಉದ್ಧಾರ ಆಗುತ್ತಾರೆ. ಶಿವಮೊಗ್ಗದ ಯಾವುದೇ ವಾರ್ಡ್ ನಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದ ಅವರು, ಬಡವರ ಮನೆ ಕಟ್ಟಿಕೊಡುವ ಸಲುವಾಗಿ ಹೋರಾಟ ಮಾಡಿದರೆ, 12 ಕೋಟಿ ಹಣಕ್ಕೆ ಕಾರ್ಪೋರೇಶನ್ ಗೆ ಕಳುಹಿಸಿದರೆ, 15 ಕೋಟಿ ಕೊಡುತ್ತೇನೆ ಎಂದು ಇನ್ನುವರೆಗೂ ಒಂದೂ ರೂಪಾಯಿ ಕೂಡಾ ಕೊಟ್ಟಿಲ್ಲ ಎಂದರು.
ಯೋಗ್ಯತೆ ಇಲ್ಲದವರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು :
ಜಮೀರ್ ಅಹಮ್ಮದ್ ಅವರು ಆಶ್ರಯ ಮನೆ ಕೀ ಹಸ್ತಾಂತರ ಮಾಡುವ ವೇಳೆ ಕ್ಯಾಬಿನೆಟ್ ನಲ್ಲಿ ಮಾತನಾಡಿ 12 ಕೋಟಿ ಕೊಡಿಸುತ್ತೇನೆ ಎಂದು ಹೇಳಿದ್ದರು. ಅಂದಿನಿಂದ 50 ಕ್ಯಾಬಿನೆಟ್ ಆದರೂ ಹಣ ಬಂದಿಲ್ಲ. 12 ಕೋಟಿ ಕೊಡುವ ಯೋಗ್ಯತೆ ಇಲ್ಲದವರೂ ಆ ಸ್ಥಾನದಲ್ಲಿಯಾಕಿರಬೇಕು. ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಹೇಳಿದರು.
ಇಡೀ ಕರ್ನಾಟಕ ರಾಜ್ಯದಲ್ಲಿ ಅನೇಕ ಹಿಂದೂ ಯುವಕರ ಕಗ್ಗೊಲೆ ಆಯಿತು. ಆದರೂ ರಾಜ್ಯ ಸರ್ಕಾರ ಸುಮ್ಮನಾಗಿತ್ತು. ಈಗ ಯು ಟಿ ಖಾದರ್ ಅವರು ಕೋಮು ಸೌಹಾರ್ದವನ್ನು ದಕ್ಷಿಣ ಕನ್ನಡದಲ್ಲಿ ಮಾಡಬೇಕು ಎನ್ನುತ್ತಿದ್ದಾರೆ. ಇವರಿಗೆ ಒಬ್ಬ ಮುಸ್ಲಿಂ ಸತ್ತಾಗ ಸೌಹಾರ್ದದ ಬಗ್ಗೆ ಮಾತನಾಡಬೇಕು ಎನಿಸಿದೆ. ಇದೆ ಒಬ್ಬ ಹಿಂದೂ ಸತ್ತಾಗ ಏಕೆ ಮಾತನಾಡಲಿಲ್ಲ ಎಂದ ಅವರು, ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಬರಬೇಕು ಎನ್ನುವ ನಿಟ್ಟಿನಲ್ಲಿ ಹಿಂದುತ್ವದ ಪರ ಹೋರಾಟ ಮಾಡುತ್ತೇವೆ ಎಂದರು.
ನಿರಾಶರಾದ ಕಾರ್ಯಕರ್ತರಿಗೆ :
ಕಾರ್ಯಕರ್ತರು ನಿರಾಶರಾಗಬೇಡಿ, ಇನ್ನೂ ಒಂದು ತಿಂಗಳಲ್ಲಿ ಮತ್ತೆ ಜಿಲ್ಲಾ ಮಟ್ಟದಲ್ಲಿ ಪುನಃ ರಾಷ್ಟ್ರ ಭಕ್ತರ ಬಳಗಕ್ಕೆ ಸೇರಿಸಿಕೊಳ್ಳುತ್ತೇವೆ. ಹೋರಾಟ, ನಗರ ಅಭಿವೃದ್ಧಿ, ಹಿಂದುತ್ವ ಉಳಿಸುವುದು ಈ ವಿಷಯದಲ್ಲಿ ಯಶಸ್ವಿ ಯಾಗೋಣ ಎಂದು ಹೇಳಿದರು.
ವೇದಿಕೆಯಲ್ಲಿ ಕೆ.ಈ.ಕಾಂತೇಶ, ಈ.ವಿಶ್ವಾಸ್, ಎಂ.ಶಂಕರ್, ಸುವರ್ಣ ಶಂಕರ್, ಸಂಗೀತ ನಾಗರಾಜ್, ಬಾಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅನೇಕ ದಿನಗಳಿಂದ ಅನೇಕ ವರ್ಷಗಳಿಂದ ನನಗೆ ಮತ್ತು ನನ್ನ ತಂದೆಯವರಿಗೆ ಟಿಕೆಟ್ ನೀಡುತ್ತೇನೆ ಎಂದು ಹೇಳುತ್ತಿದ್ದರು. ಅದೇನೇ ಆದರೂ ಎಷ್ಟೇ ಕಷ್ಟ ಬಂದರೂ ನಾನು ಮತ್ತು ನನ್ನ ತಂದೆ ಹಿಂದುತ್ವ ಬಿಡುವುದಿಲ್ಲ.
– ಕೆ.ಈ.ಕಾಂತೇಶ್

ರಾಷ್ಟ್ರ ಭಕ್ತರ ಬಳಗಕ್ಕೆ ಸೇರ್ಪಡೆಯಾದವರು :
ವಿವಿಧ ವಾರ್ಡ್ ನ ಅಧ್ಯಕ್ಷರು, ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಪೋರೇಟರ್ ಗಳು ಸೇರಿದಂತೆ ಸುಮಾರು 150 ಜನ ಸೇರ್ಪಡೆಯಾಗಿದ್ದಾರೆ.
35 ನೇ ವಾರ್ಡ್ ನ ಸಂಗೀತ ನಾಗರಾಜ್, ಸಂಧ್ಯಾ, ಹರ್ಷ ಮಂಡ್ಲಿ, ರಮೇಶ್, ಶೇಖರ್, ಮೂರ್ತಿ, ಸತೀಶ್, ಜಯಮ್ಮ, ಗೀತಮ್ಮ, ಪ್ರಸನ್ನ ವೀರ ಸಂಘಟನೆಯ ತಂಡ, ಗೋಪಿ, ಪುರಲೇ ನಾಗ, ಶ್ರೇಯಸ್, ರೇಣುಕಮ್ಮ, ಸತೀಶ್, ಅರುಣ್, ಮುರುಗೇಶ್, ಗೋಪಾಲ, ಕುಮಾರ್, ದಿನೇಶ್, ಜಸ್ಟಿನ್, ಶಶಿಕುಮಾರ್, ಕೇಬಲ್ ಮಧು, ಶ್ರೀನಿವಾಸ್, ಪ್ರಭು, ಶ್ರೀಕಾಂತ್, ಪ್ರಸನ್ನ, ನಂದನ್, ಯಶೋಧಮ್ಮ, ಶ್ರೀಧರ್, ದೀಪಕ್, ತನುಜಾ, ಮಂಜುನಾಥ್, ಆನಂದ್ ರಾಜ್, ಅಣ್ಣಯ್ಯ, ಶಶಿಧರ್, ರವಿ, ನಾಗರಾಜ್, ಮುರುಗೇಶ್ ಸೇರಿದಂತೆ ಇನ್ನಿತರರಿಗೆ ಶಾಲು ಹಾಕುವುದರ ಮೂಲಕ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.