

ಹನುಮಂತ ದೇವರ ಸನ್ನಿಧಿಯಲ್ಲಿ ಅಮವಾಸ್ಯೆ ಪ್ರಯುಕ್ತ ಪವಿತ್ರ ತೀರ್ಥಸ್ನಾನ
ಶಿವಮೊಗ್ಗ : ಹೊಳೆಹೊನ್ನೂರು ರಸ್ತೆಯಲ್ಲಿರುವ ಪಿಳ್ಳಯ್ಯನಗಿರಿ (ಮಹೇಂದ್ರ ಗಿರಿ) ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿರುವ ಶ್ರೀಹನುಮಂತ ದೇವರ ಸನ್ನಿಧಿಯಲ್ಲಿ ಇಂದು (ಮಂಗಳವಾರ) ಅಮವಾಸ್ಯೆ ಪ್ರಯುಕ್ತ ಪವಿತ್ರ ತೀರ್ಥಸ್ನಾನ ನೆರವೇರಿತು.
ಅಮವಾಸ್ಯೆ ಅಂಗವಾಗಿ ಹನುಮಂತ ದೇವರ ದರ್ಶನ ಪಡೆದ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಪವಿತ್ರ ತೀರ್ಥಸ್ನಾನ ಮಾಡಿದರು.
ಪ್ರತಿ ಅಮವಾಸ್ಸೆಯಂದು ತೀರ್ಥಸ್ನಾನದಲ್ಲಿ ಪಾಲ್ಗೊಳ್ಳುವುದರಿಂದ ಶನಿ ಪ್ರಭಾವ ಕುಂದುವ ಮೂಲಕ ಶತ್ರು ಭಯ ಹಾಗೂ ಸಕಲ ಕಷ್ಟಗಳು ದೂರವಾಗುವುದು ಎಂಬುದು ಭಕ್ತರ ನಂಬಿಕೆ. ಪ್ರತಿ ಶನಿವಾರವೂ ವಿಶೇಷ ಪೂಜೆ ನೆರೆವೇರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವರು.