
ಶಿವಮೊಗ್ಗ : ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಪ್ರತಿ ಶನಿವಾರವೂ ಅತ್ಯಂತ ವಿಜೃಂಭಣೆಯಿಂದ ಅಪಾರ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಶಿವಪ್ಪ ನಾಯಕರ ಕಾಲದ ಕೋಟೆಯಾಗಿದ್ದು, ತುಂಗಾನದಿ ಹತ್ತಿರದಲ್ಲಿರುವುದರಿಂದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ಪ್ರಮುಖ ದೇವಾಲಯಗಳಲ್ಲಿ ಹೆಚ್ಚು ಸುಪ್ರಸಿದ್ಧವಾಗಿದೆ.
ಭಕ್ತರು ದೇವರ ಕೃಪಾಶಿರ್ವಾದ ಪಡೆದುಕೊಳ್ಳಲು ಪ್ರತಿ ಶನಿವಾರವೂ ಈ ದೇವಾಲಯಕ್ಕೆ ಆಗಮಿಸುತ್ತಾರೆ, ಪ್ರತಿ ಶನಿವಾರವೂ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಪ್ರತಿ ಶನಿವಾರವೂ ವಿಜೃಂಭಣೆಯ ವಾತಾವರಣವೇ ಇರುತ್ತದೆ.
ಭಕ್ತರ ಅಭಿಷ್ಟಗಳನ್ನು ಶೀಘ್ರ ನೆರವೇರಿಸಿ, ಭಕ್ತರ ಸಂಕಷ್ಟ ಪರಿಹರಿಸುವ ದೇವರು ಎಂದೇ ಹೆಸರಾಗಿದೆ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.
ಪುರಾಣ ಪ್ರಸಿದ್ಧ ಶ್ರೀ ಕೋಟೆ ಸೀತಾ ರಾಮಾಂಜನೇಯ ದೇವಸ್ಥಾನದ ನೂತನ ಧ್ವಜಸ್ತಂಭ.