
ಶಿವಮೊಗ್ಗ : ಶಿವಮೊಗ್ಗ ನಗರದ ನ್ಯೂ ಮಂಡ್ಲಿ 1ನೇ ತಿರುವಿನ ನ್ಯೂಮಂಡ್ಲಿ ಯುವಕರ ವಿದ್ಯಾ ಗಣಪತಿ ಸಂಘವು ವರಾಹ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು, ಈಗಾಗಲೇ ವರಾಹ ಪ್ರತಿಮೆಯು ಮಂಟಪವನ್ನೇರಿದೆ.
ವರಾಹ ಪ್ರತಿಮೆಯ ವಿಶೇಷತೆ ಏನು?
ವರಾಹ ಮತ್ತು ನರಸಿಂಹ ಎಂಬುದು ವಿಷ್ಣುವಿನ ಎರಡು ಅವತಾರಗಳಾಗಿವೆ. ಇದು ವರಾಹ ಹಾಗೂ ನರಸಿಂಹನ ತಲೆ ಮತ್ತು ಮಾನವ ದೇಹವನ್ನು ಹೊಂದಿರುವ ಅವತಾರವಾಗಿದೆ. ಇವೆರಡೂ ಸೇರಿ “ವರಾಹ ಲಕ್ಷ್ಮೀ ನರಸಿಂಹ” ಎಂಬ ಒಂದು ರೂಪದಲ್ಲಿ ಪೂಜಿಸಲಾಗುತ್ತದೆ.
ಈ ಪ್ರತಿಮೆಯು ವರಾಹ ಮತ್ತು ನರಸಿಂಹ ರೂಪಗಳ ಸಂಯೋಜಿತ ರೂಪವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಸಿಂಹಾಚಲಂ ಬೆಟ್ಟದ ಮೇಲಿನ ಶ್ರೀ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಈ ಸಂಯೋಜಿತ ರೂಪವನ್ನು ಪೂಜಿಸಲಾಗುತ್ತದೆ.

ಕಲಾಕೃತಿಯತ್ತ ಜನರ ಗಮನ :
ಮೂವತ್ತು ವರ್ಷದಿಂದ ಕಲಾವಿದರಾಗಿ ಕೆಲಸ ಮಾಡುತ್ತಿರುವ ಜೀವನ್ ಅವರು, ಹದಿನೈದು ವರ್ಷಗಳಿಂದ ಕಲಾಕೃತಿ ನಿರ್ಮಾಣ ಕಾಯಕದಲ್ಲಿ ತೊಡಗಿಸಿಕೊಂಡು ಬಂದಿದ್ದು, ಅನೇಕ ಕಲಾಕೃತಿಗಳ ಮೂಲಕ ಶಿವಮೊಗ್ಗದಲ್ಲಿ ಮನೆ ಮಾತಾಗಿದ್ದಾರೆ. ಈತ ಸೃಷ್ಟಿಸುವ ಕಲಾಕೃತಿಗಳು ರಾಜ್ಯದಲ್ಲಷ್ಟೇ ಅಲ್ಲ ದೇಶದೆಲ್ಲೆಡೆ ಸದ್ದು ಮಾಡುತ್ತವೆ.
ಪ್ರತೀ ವರ್ಷವೂ ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುವ ಬೃಹದಾಕಾರದ ಕಲಾಕೃತಿ ಜನಕ ಈ ಜೀವನ್. ಕಳೆದ ಬಾರಿ ನ್ಯೂಮಂಡ್ಲಿಯಲ್ಲಿ ವೀರಾಂಜನೇಯ ಮೂರ್ತಿಯನ್ನು ನಿರ್ಮಿಸಿ ಜನರ ಗಮನ ಸೆಳೆದಿದ್ದರು. ಅದೇ ರೀತಿ ಈ ಬಾರಿಯು ವರಾಹ ಪ್ರತಿಮೆಯನ್ನು ರೂಪಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ » ಶಿವಮೊಗ್ಗಕ್ಕೆ ನೂತನ ಅಪರ ಜಿಲ್ಲಾಧಿಕಾರಿಯಾಗಿ ಅಭಿಷೇಕ್.ವಿ ಅಧಿಕಾರ ಸ್ವೀಕಾರ