ಶಿವಮೊಗ್ಗ ಜನಶತಾಬ್ದಿ, ಮೈಸೂರು–ತಾಳಗುಪ್ಪ ರೈಲು ಸಂಚಾರದಲ್ಲಿ ಬದಲಾವಣೆ

ಶಿವಮೊಗ್ಗ : ಬೆಂಗಳೂರು ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಸಿಟಿ ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಹಾಗೂ ಪ್ರಮುಖ ಸುರಕ್ಷತಾ ಮೇಲ್ದರ್ಜೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆ ನೈರುತ್ಯ ರೈಲ್ವೆಯು ಈ ಮಾರ್ಗವಾಗಿ ಸಂಚರಿಸುವ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಾಣೆ ಮಾಡಿದೆ. ಶಿವಮೊಗ್ಗ ಮತ್ತು ತಾಳಗುಪ್ಪ ರೈಲುಗಳ ಸೇವೆಯಲ್ಲಿಯು ಬದಲಾವಣೆ ಆಗಿದೆ.

ಈ ಸಂಬಂಧ ನೈಋತ್ಯ ರೈಲ್ವೆ ಇಲಾಖೆಯು ಪ್ರಕಟಣೆ ಹೊರಡಿಸಿದ್ದು, ಶಿವಮೊಗ್ಗ, ತಾಳಗುಪ್ಪದ ಯಾವೆಲ್ಲ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಿದೆ.

ಯಾವೆಲ್ಲ ರೈಲುಗಳ ಸಂಪೂರ್ಣ ರದ್ದತಿ :

ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16581): 2026ರ ಆಗಸ್ಟ್ 4ರಂದು ಈ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16582): 2026ರ ಆಗಸ್ಟ್ 4ರಂದು ಈ ರೈಲಿನ ಸಂಚಾರವೂ ರದ್ದಾಗಿರಲಿದೆ.

ಯಾವೆಲ್ಲ ರೈಲು ಭಾಗಶಃ ರದ್ದತಿ?

ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20652): 2026ರ ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಈ ರೈಲನ್ನು ಅರಸೀಕೆರೆ ಮತ್ತು ಕೆಎಸ್‌ಆರ್‌ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಇದು ಅರಸೀಕೆರೆ ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ಶಿವಮೊಗ್ಗ ಟೌನ್ – ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12090): 2026ರ ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಈ ರೈಲು ಅರಸೀಕೆರೆ–ಕೆಎಸ್‌ಆರ್‌ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲೇ ನಿಲ್ಲಲಿದೆ.

ಬೆಂಗಳೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12089): 2026ರ ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಬೆಂಗಳೂರಿನ ಬದಲಾಗಿ ಅರಸೀಕೆರೆ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.

ಯಾವೆಲ್ಲ ರೈಲುಗಳ ಮಾರ್ಗ ಬದಲಾವಣೆ :

ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16228): 2026ರ ಆಗಸ್ಟ್ 3 ರಂದು ತಾಳಗುಪ್ಪದಿಂದ ಹೊರಡುವ ಈ ರೈಲು ಅರಸೀಕೆರೆ, ಹಾಸನ ಮತ್ತು ಕೃಷ್ಣರಾಜನಗರ ಮಾರ್ಗವಾಗಿ ಮೈಸೂರಿಗೆ ತಲುಪಲಿದೆ. ಈ ಹಿನ್ನೆಲೆ ತುಮಕೂರು, ಯಶವಂತಪುರ, ಕೆಎಸ್‌ಆರ್‌ ಬೆಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳ ನಿಲುಗಡೆಯನ್ನು ಕೈಬಿಡಲಾಗಿದೆ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16227): 2026ರ ಆಗಸ್ಟ್ 3ರಂದು ಮೈಸೂರಿನಿಂದ ಹೊರಡುವ ಈ ರೈಲನ್ನು ಕೃಷ್ಣರಾಜನಗರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಚಲಿಸಲಿದೆ. ಹೀಗಾಗಿ ಕೆಎಸ್‌ಆರ್‌ ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...