ಸೆ.28ಕ್ಕೆ ಸನ್ ಬೋನ್ ಮತ್ತು ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭ, ಆಸ್ಪತ್ರೆಯಲ್ಲಿ ಏನೆಲ್ಲಾ ಸೇವೆಗಳು ದೊರೆಯಲಿವೆ?

ಶಿವಮೊಗ್ಗ : ಶಿವಮೊಗ್ಗದ ಜನತೆಗೆ ಮೂಳೆ ಮತ್ತು ಕೀಲು ಸಮಸ್ಯೆಗಾಗಿ ಅಂತರ ರಾಷ್ಟ್ರೀಯ ಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ತಿಲಕ್ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸನ್ ಬೋನ್ ಮತ್ತು ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಸೆ.28ರ ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಸ್ಪೈನ್ ಅಂಡ್ ಆಥೋಪಿಡಿಕ್ ಸರ್ಜನ್ ಡಾ. ಆಕಾಶ್ ಹೊಸತೋಟ ತಿಳಿಸಿದರು.

ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಚಿಕಿತ್ಸೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಹೊರರಾಜ್ಯಕ್ಕೆ ತೆರಳುವುದು ಜನಸಾಮಾನ್ಯರಿಗೆ ಆರ್ಥಿಕವಾಗಿ ಹೆಚ್ಚಿನ ಹೊರಯಾಗುತ್ತಿತ್ತು. ಬೇರೆಡೆ ಸಿಗುವ ಎಲ್ಲಾ ಅತ್ಯಾಧುನಿಕ ಗುಣಮಟ್ಟದ ವೈದ್ಯರು ಮತ್ತು ವೈದ್ಯಕೀಯ ಸೌಲಭ್ಯ ನಮ್ಮ ಆಸ್ಪತ್ರೆಯಲ್ಲಿ ದೊರೆಯಲಿದೆ ಎಂದರು.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಮತ್ತು ಅನುಭವಿ ಮೂಳೆ ಚಿಕಿತ್ಸೆ ತಜ್ಞರ ತಂಡದೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ವ್ಯಾಪಕ ಶ್ರೇಣಿಯ ಮೂಳೆ ಮತ್ತು ಕೀಲು ಸ್ಥಿತಿಗಳಿಗೆ ವೈಯಕ್ತಿಕಗೊಳಿಸಿದ ಆರೈಕೆ ನೀಡಲಾಗುವುದು.

− ಡಾ. ಆಕಾಶ್ ಹೊಸತೋಟ, ಸ್ಪೈನ್ ಅಂಡ್ ಆಥೋಪಿಡಿಕ್ ಸರ್ಜನ್


ಪುನರ್‌ವಸತಿ ಕೇಂದ್ರದೊಂದಿಗೆ ಸುಧಾರಿತ ಬೆನ್ನು ಮೂಳೆಯ ಆರೈಕೆ ಘಟಕ. ಕ್ರೀಡಾಪಟುಗಳಿಗೆ ಸೇವೆ ಸಲ್ಲಿಸುವ ಸುಧಾರಿತ ಆರ್ತೋಸ್ಕೋಪಿ ಮತ್ತು ಕ್ರೀಡಾ ವೈದ್ಯಕೀಯ ಘಟಕ, ಸುಧಾರಿತ ಕೀಲು ಆರೈಕೆ ಘಟಕ, ಮಕ್ಕಳ ಮೂಳೆ ಚಿಕಿತ್ಸಾ ಘಟಕ, ಸಂಯೋಜಿತ ಯೋಗ ಮತ್ತು ಪುನರ್ವಸತಿ ಘಟಕ ಸೇರಿದಂತೆ ಹಲವಾರು ಮೂಲ ಸೌಕರ್ಯಗಳು ಲಭ್ಯವಿದೆ ಎಂದರು.

ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಆಸ್ಪತ್ರೆಯನ್ನು ಮತ್ತು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ನಿರ್ದೇಶಕ ಪ್ರೊ. ಡಾ. ಸತೀಶ್ ರುದ್ರಪ್ಪ, ಅತ್ಯಾಧುನಿಕ ಆಪರೇಷನ್ ಥಿಯೇಟರ್‌ ನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಾ. ಬಿ.ಎಲ್.ಶಂಕರ್ ವಹಿಸಲಿದ್ದಾರೆ.

ಇದನ್ನೂ ಓದಿ » ಇಂದು ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ?

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...