ರೊಟೇರಿಯನ್ಸ್ ಗಳ ಸೇವೆ ಶ್ಲಾಘನೀಯ: ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಮತ

ಶಿವಮೊಗ್ಗ : ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಪೋಲಿಯೋ ಮುಕ್ತ ಪ್ರಪಂಚ, ಪರಿಸರ ಇತ್ಯಾದಿ ರೋಟರಿ ಸೇವೆಗಳನ್ನು ಮಾಡುತ್ತಿರುವ ರೊಟೇರಿಯನ್ಸ್ ಗಳ ಸೇವೆ ಭಗವಂತನ ಸೇವೆಗೆ ಸಮಾನವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಶ್ಲಾಘಿಸಿದರು.

ಇದನ್ನೂ ಓದಿ » Job News: ಪಿಯುಸಿ, ಯಾವುದೇ ಪದವಿ ಪಡೆದ ಅಭ್ಯರ್ಥಿಗಳಿಗೆ ನೇರ ಸಂದರ್ಶನ, ಯಾವಾಗ?

ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಏರ್ಪಡಿಸಿದ್ದ “ರೋಟರಿ ಸೇವೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ” ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ, ರೋಟರಿ ಸದಸ್ಯರುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟವನ್ನು ನಿಲ್ಲಿಸುವ ಮೂಲಕ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವಲ್ಲಿ ರೋಟರಿಯೊಂದಿಗೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವೆ.

ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು


ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ, ಶಿವಮೊಗ್ಗ ವಿಧಾನಸಭಾ ಸದಸ್ಯ ಎಸ್.ಎನ್.ಚನ್ನಬಸಪ್ಪ ಸ್ಥಳೀಯ ರೋಟರಿ ಕ್ಲಬ್ ಗಳು ಆಯೋಜಿಸುವ ಸಮುದಾಯ ಮತ್ತು ಸಾಮಾಜಿಕ ಉಪಕ್ರಮಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಾರೆ. ನಿಯಮಿತವಾಗಿ ಸೇವಾ ಗುಂಪುಗಳೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದ ಅವರು, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನಡೆಸಲು ಉದ್ದೇಶಿಸಿರುವ ಕೌಶಲ್ಯ ಕೇಂದ್ರ ಮತ್ತು ಕೆರೆ ಸಂರಕ್ಷಣೆ ಯೋಜನೆಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್.ಮನೋಹರ, ಪದಾಧಿಕಾರಿಗಳು, ಮಾಜಿ ಅಸಿಸ್ಟೆಂಟ್ ಅಂಡ್ ಝೋನಲ್ ಲೆಫ್ಟಿನೆಂಟ್ಸ್ ಗವರ್ನರ್ ಭಾರ್ಗವಿ ನಾಗರಾಜ್, ಚಂದ್ರಹಾಸ್ ಪಿ. ರಾಯ್ಕರ್, ಚಂದ್ರಶೇಖರಯ್ಯ ಎಂ., ರಘುರಾಜ್ ಹೆಚ್.ಕೆ., ನಾರ್ತ್ ಕ್ಲಬ್ ಅಧ್ಯಕ್ಷರಾದ ಶಿವಕುಮಾರ್, ಮಾಜಿ ಅಸಿಸ್ಟೆಂಟ್ ಗವರ್ನರ್ ಕೋಟೋಜಿ ರವಿ, ಡಿ.ಜಿ.ಬೆನಕಪ್ಪ ಮಾಜಿ ಅಧ್ಯಕ್ಷರಾದ ಆದಿಮೂರ್ತಿ ಹೆಚ್.ಬಿ., ಗಣೇಶ್.ಎಸ್, ಶ್ರೀಕಾಂತ್ ಎನ್.ಹೆಚ್, ಕೃಷ್ಣಮೂರ್ತಿ.ಆರ್, ನಾಗರಾಜ್ ಎಂ.ಪಿ., ಕಾಸಲ ವಿ. ಸುರೇಂದ್ರ, ಡಾ. ಗುಡುದಪ್ಪ ಕಸಬಿ, ನಿಕಟ ಪೂರ್ವ ಅಧ್ಯಕ್ಷರಾದ ಡಿ.ಕಿಶೋರ್ ಕುಮಾರ್, ಶಶಿಕಾಂತ್ ನಾಡಿಗ್, ಸುನಿಲ್ ಕುಮಾರ್ ಜಿ., ಡಾ. ರವಿಕಿರಣ್ ಹೆಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್., ಜಗದೀಶ್, ರವಿಶಂಕರ್.ಡಿ.ಎಸ್., ಸಾಧ್ವಿ ಸಿ. ಕಾಂತ್ , ಸಂಜೀವ್.ಎಸ್.ಎನ್., ಅಜಿತ್.ಹೆಚ್.ಎಸ್., ಪೃಥ್ವಿ ಪಿ. ಗೌಡ, ಹೇಮಂತ್ ಎಂ.ಸಿ., ಡಾ. ಮಹಾದೇವಸ್ವಾಮಿ ಕೆ.ಎನ್., ಜಿ. ವಿಜಯ್ ಕುಮಾರ್, ಬಿಂದು ವಿಜಯ್ ಕುಮಾರ್, ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಉಪಸ್ಥಿತರಿದ್ದರು.

ಇದನ್ನೂ ಓದಿ » ಜು.29 ರಿಂದ ಸೆ.26 ರವರೆಗೆ ಪರಾಭವ ನಾಮ ಸಂವತ್ಸರದ ‘ಚಾತುರ್ಮಾಸ್ಯ ವ್ರತ’ ಆಯೋಜನೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...