
ಶಿವಮೊಗ್ಗ : ಲಾಲ್ ಬಹುದ್ದೂರು ಶಾಸ್ತ್ರೀ ಮಧ್ಯಂತರ ಯಂತ್ರಗಾರಕ್ಕೆ ವಿದ್ಯುತ್ ಸರಬರಾಜಾಗುವ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ದುರಸ್ಥಿ ಮತ್ತು ನಿರ್ವಹಣೆ ಸಂಬಂಧ ಈ ಕೆಳಗಿನ ಪ್ರದೇಶಗಳಲ್ಲಿ ಇಂದು (ಅ.14 ರಂದು) ದೈನಂದಿನ ಕುಡಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದೆ.
ಶಾಂತಿನಗರ, ಬೊಮ್ಮನಕಟ್ಟೆ, ತ್ಯಾವರೆಚಟ್ನಹಳ್ಳಿ, ಸೋಮಿನಕೊಪ್ಪ ಈ ಪ್ರದೇಶಗಳ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕ.ನ.ನೀ.ಸ. ಮತ್ತು ಒ.ಚ. ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.