ಹಿಂದೂ ಸನಾತನ ಧರ್ಮದಲ್ಲಿ ಗೋವುಗಳಿಗೆ ಪವಿತ್ರ ಸ್ಥಾನ ಇದೆ

ಶಿವಮೊಗ್ಗ : ಶ್ರೀ ಜ್ಞಾನೇಶ್ವರಿ ಗೋಶಾಲೆ 10 ವರ್ಷದಿಂದ ಪವಿತ್ರ ಗೋಸೇವೆ ಮಾಡುತ್ತಿದ್ದು, ಅನಾಥ ಗೋವುಗಳು, ನೊಂದ ಗೋವುಗಳಿಗೆ ಆಶ್ರಯತಾಣವಾಗಿದೆ ಎಂದು ಶ್ರೀ ಕ್ಷೇತ್ರ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಳು ಹೇಳಿದರು.

ಇದನ್ನೂ ಓದಿ » ಬಗೆಹರಿಯದ ವಾಹನಗಳ ಪಾರ್ಕಿಂಗ್ ಸಮಸ್ಯೆ, ರಸ್ತೆ ಬದಿಯ ವಾಹನಗಳ ನಿಲುಗಡೆಗೆ ಕಡಿವಾಣ ಯಾವಾಗ?

ಹುಣಸೋಡಿನಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಗೆ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿ ಅವರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಗೋಶಾಲೆಯು ಸ್ವಚ್ಛ ಮತ್ತು ಸುಂದರವಾಗಿದೆ. ಗೋವುಗಳು ಸುಖಿ ಮತ್ತು ನೆಮ್ಮದಿಯಾಗಿದ್ದರೆ ಇಡೀ ಸಮಾಜ ಸುಭೀಕ್ಷವಾಗುತ್ತದೆ. ಹಿಂದು ಸನಾತನ ಧರ್ಮದಲ್ಲಿ ಗೋವುಗಳಿಗೆ ಪವಿತ್ರ ಸ್ಥಾನವಿದೆ ಎಂದು ತಿಳಿಸಿದರು.

ದೈವಜ್ಞ ಬ್ರಾಹ್ಮಣ ಸಮಾಜದ ಏಕೈಕ ಗೋಶಾಲೆ ಶ್ರೀ ಜ್ಞಾನೇಶ್ವರಿ ಗೋಶಾಲೆ ಕಾರ್ಯ ಶ್ಲಾಘನೀಯ. ಗೋರಕ್ಷಣೆಯಲ್ಲಿ ಇಡೀ ಸಮುದಾಯ ಭಾಗಿಯಾಗಬೇಕು ಎಂದರು.

ಶ್ರೀ ಸುಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಳು ಒಂದು ಗೋವು ದತ್ತು ಪಡೆದು ರೂ.15 ಸಾವಿರ ದೇಣಿಗೆ ನೀಡಿದರು.

ಶ್ರೀದ್ವಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಗೋಶಾಲೆ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್ ಶ್ರೀಗಳಿಗೆ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ವಿಜಯ ರಾಯ್ಕರ್, ಗುರುರಾಜ್ ಶೇಟ್, ಜನಾರ್ಧನ್ ಎಂ.ಶೇಟ್, ಗಣೇಶ್, ಕೃಷ್ಣಮೂರ್ತಿ, ಶ್ರೀಪಾದ ರೇವಣಕರ್, ದೇವಿದಾಸ್ ಶೇಟ್, ಎಸ್.ಪಾಂಡುರಂಗ ಶೇಟ್, ರಾಧಾಕೃಷ್ಣ ರಾಯ್ಕರ್, ಶೇಷಾದ್ರಿ ಇತರರಿದ್ದರು.

ಇದನ್ನೂ ಓದಿ » ಪುರದಾಳು ಗ್ರಾಮ: ಮಕ್ಕಳ ವಿಶೇಷ ಗ್ರಾಮ‌ಸಭೆ, ಉತ್ತಮ ಶಿಕ್ಷಣ ಪಡೆದು ಸಮ ಸಮಾಜದ ನಿರ್ಮಾಣಕ್ಕೆ ಕರೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...