ಶಿಕಾರಿಪುರಕ್ಕೆ ಶ್ರೀಲಂಕಾ ಸಂಸದರ ನಿಯೋಗ ಭೇಟಿ, ಬಿ.ವೈ.ರಾಘವೇಂದ್ರ ಜೊತೆ ಸುದೀರ್ಘ ಚರ್ಚೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಶಿಕಾರಿಪುರ ತಾಲೂಕಿನ ಸಂಸದ ಬಿ.ವೈ.ರಾಘವೇಂದ್ರ ರವರ ಶಿಕಾರಿಪುರದ ನಿವಾಸಕ್ಕೆ ಶ್ರೀಲಂಕಾ ದೇಶದ ಜಾಫ್ನಾ ಮತ್ತು ಕಿಲಿನೊಚ್ಚಿ ಚುನಾವಣಾ ಜಿಲ್ಲೆಯ ಸಂಸದರಾದ ಶ್ರೀಧರನ್ ಶಿವಜ್ಞಾನಂ ರವರು ತಮ್ಮ ಪ್ರಮುಖರ ನಿಯೋಗದೊಂದಿಗೆ ಶನಿವಾರ ಆತ್ಮೀಯವಾಗಿ ಭೇಟಿ ನೀಡಿದ್ದರು.

ಇದನ್ನೂ ಓದಿ » ಎಸ್.ಸಿ./ಎಸ್.ಟಿ. ಪಡಿತರ ಚೀಟಿದಾರರಿಗೆ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸಲು ಸೂಚನೆ

ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ, ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಂಡು ಮಲೆನಾಡಿನ ಸಂಪ್ರದಾಯದಂತೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಭಾರತ ಮತ್ತು ಶ್ರೀಲಂಕಾ ದೇಶಗಳ ನಡುವಿನ ಸುದೀರ್ಘ ಸಾಂಸ್ಕೃತಿಕ ಬಾಂಧವ್ಯ, ಉಭಯ ದೇಶಗಳ ಪ್ರಚಲಿತ ರಾಜಕೀಯ ಹಾಗೂ ಪ್ರಾದೇಶಿಕ ಅಭಿವೃದ್ಧಿ ವಿದ್ಯಮಾನಗಳು ಸೇರಿದಂತೆ ವಿವಿಧ ಆಸಕ್ತಿದಾಯಕ ವಿಷಯಗಳ ಕುರಿತು ಅತ್ಯಂತ ಸೌಹಾರ್ದಯುತವಾಗಿ ಸುದೀರ್ಘ ಚರ್ಚೆ ನಡೆಸಲಾಯಿತು.

ನಮ್ಮ ಮಲೆನಾಡಿನ ಕೃಷಿ ಪದ್ಧತಿ, ಪ್ರವಾಸೋದ್ಯಮ ಹಾಗೂ ಇತಿಹಾಸದ ಬಗ್ಗೆ ಅವರು ಅಪಾರ ಆಸಕ್ತಿ ವ್ಯಕ್ತಪಡಿಸಿದ್ದು, ಈ ಅಂತರರಾಷ್ಟ್ರೀಯ ಭೇಟಿ ಅತ್ಯಂತ ಅರ್ಥಪೂರ್ಣ ಮತ್ತು ಸ್ಮರಣೀಯವಾಗಿ ಮೂಡಿಬಂದಿದೆ.

ಈ ಸಂದರ್ಭದಲ್ಲಿ ಅವರೊಂದಿಗೆ ಆಗಮಿಸಿದ್ದ ಶ್ರೀಲಂಕಾದ ಗಣ್ಯರು ಹಾಗೂ ನಮ್ಮ ಭಾಗದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ » ಅರ್ಹ ಮತದಾರರು ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಿ: ಪ್ರಭುಲಿಂಗ ಕವಳಿಕಟ್ಟಿ 

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...