ಪಟಗುಪ್ಪ ಸೇತುವೆ ಬಳಿಯ ಗೋ ಕೃತ್ಯದ ಪ್ರಕರಣ, ಹಾನಗಲ್‌ನ ನಾಲ್ವರು ಆರೋಪಿಗಳು ಅರೆಸ್ಟ್‌

ಶಿವಮೊಗ್ಗ : ಹೊಸನಗರ ತಾಲೂಕಿನ ಹೊಸಕೊಪ್ಪ ಗ್ರಾಮದ ಪಟಗುಪ್ಪ ಸೇತುವೆ ಹತ್ತಿರದ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಹಸುವಿನ ಕರುವನ್ನು ಕೊಂದು ಪರಾರಿಯಾಗಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ » ಶಿಕಾರಿಪುರಕ್ಕೆ ಶ್ರೀಲಂಕಾ ಸಂಸದರ ನಿಯೋಗ ಭೇಟಿ, ಬಿ.ವೈ.ರಾಘವೇಂದ್ರ ಜೊತೆ ಸುದೀರ್ಘ ಚರ್ಚೆ

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಮಹಮದ್ ಸಲೀಂ ಬಾಳೂರ್ (34), ಸುಲೇಮಾನ್ ಕೊಲಾರಿ (26) ಹಾಗೂ ಆಡೂರು ಗ್ರಾಮದ ಮಕ್ಬುಲ್ ಅಹ್ಮದ್ ಬಡಿಗೇರ (22) ಮತ್ತು ಮಲ್ಲಿಕ್ ರಿಹಾನ್ ಸುರಳೇಶ್ವರ (25) ಬಂಧಿತ ಆರೋಪಿಗಳಾಗಿದ್ದಾರೆ.

ಶರಾವತಿ ಹಿನ್ನೀರು ಪ್ರದೇಶದಲ್ಲಿ ಹಸುವಿನ ಕರುವನ್ನು ಕೊಂದಿರುವುದನ್ನು ಗಮನಿಸಿ ಹೊಸನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗೋಪಾಲಕೃಷ್ಣ ಅವರು ದೂರು ನೀಡಿದ್ದರು. ಈ ದೂರಿನನ್ವಯ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಹೊಸನಗರ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಬಿ.ಗೌಡಪ್ಪಗೌಡ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಯಿತು. ಹೊಸನಗರ ಠಾಣೆಯ ಪಿಎಸ್‌ಐ ಶಂಕರಗೌಡ ಪಾಟೀಲ್, ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ, ನಗರ ಠಾಣೆಯ ಪಿಎಸ್‌ಐ ಶಿವಾನಂದ ವೈ.ಕೆ ಹಾಗೂ ಸಿಬ್ಬಂದಿ ಕಿರಣ್ ಕುಮಾರ್ ಡಿ.ವೈ, ಶಿವಕುಮಾರನಾಯ್ಕ, ಮಾಯಾವ್ಯ ಗೋಕಾಕಿ, ರವಿಚಂದ್ರ, ಸುನಿಲ್, ಗೋಪಾಲಕೃಷ್ಣ ಮತ್ತು ಶಿವಮೊಗ್ಗ ಎಎನ್‌ಸಿ ವಿಭಾಗದ ಗುರುರಾಜ ಹಾಗೂ ಇಂದ್ರೇಶ್ ಅವರು ಪಾಲ್ಗೊಂಡಿದ್ದರು. ಜುಲೈ 4 ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಯುವನಿಧಿ ಯೋಜನೆಯ ಫಲಾನುಭವಿಗಳ ಸ್ವಯಂ ಘೋಷಣೆ ಕಡ್ಡಾಯ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...