ಕೃಷಿ ಹೊಂಡದ ಬಳಿ ಮಣ್ಣಿನಲ್ಲಿ ಮುಚ್ಚಿಟ್ಟಿದ್ದ ಬೀಟೆ ಮರ ವಶ, ಅರಣ್ಯಾಧಿಕಾರಿಗಳ ದಾಳಿ

ಶಿವಮೊಗ್ಗ : ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ನಂದ್ರಿ ಗ್ರಾಮದ ಸರ್ವೇ ನಂ.15ರ ನಂದ್ರಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ವರ್ಗಾವಣೆಗೊಂಡ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ 2 ರಿಂದ 3 ವರ್ಷ ಹಳೆಯ ಬೀಟೆ ಜಾತಿಯ ಮರದ ನಾಟ ತುಂಡುಗಳನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.

ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಒತ್ತುವರಿ ಜಮೀನಿನಲ್ಲಿನ ಕೃಷಿ ಹೊಂಡದ ಪಕ್ಕದಲ್ಲಿ ಮಣ್ಣಿನಲ್ಲಿ ಮುಚ್ಚಿ ಇಡಲಾಗಿದ್ದ 14 ಬೀಟೆ ಜಾತಿಯ ಮರದ ನಾಟ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ. ಗಣೇಶ ಬಿನ್ ಬಾಬುಶೆಟ್ಟಿ (40), ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿವಾಸಿ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ಅರಣ್ಯ ಕಾನೂನು 1969ರ ಅಡಿಯಲ್ಲಿ ಹೊಸನಗರ ವಲಯ ಕಚೇರಿಯಲ್ಲಿ ಅರಣ್ಯ ಮೊಕದ್ದಮೆ ಸಂಖ್ಯೆ 14/2026-27 ದಾಖಲಿಸಲಾಗಿದೆ. ವಿಭಾಗದ ಪರವಾಗಿ ವಶಪಡಿಸಿಕೊಂಡಿರುವ ಮರದ ನಾಟ ತುಂಡುಗಳನ್ನು ಅಮಾನತ್ತುಪಡಿಸಲಾಗಿದೆ.

ಇದನ್ನೂ ಓದಿ » ಮುಖ್ಯರಸ್ತೆಗೆ ಮಾವಿನ ಹಣ್ಣು ಸುರಿದು ವ್ಯಾಪಾರಿಯ ಆಕ್ರೋಶ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...