
ಶಿವಮೊಗ್ಗ : ಕಿರಣ ಕೇಂದ್ರ ವಿದ್ಯಾಲಯ ಶಾಲೆಯಲ್ಲಿ ಡಾಕ್ಟರ್ ವಿಕ್ರಂ ಸಾರಾಬಾಯಿ ವಿಜ್ಞಾನ ಕ್ಲಬ್ ಮತ್ತು ಆರ್ಯಭಟ ಗಣಿತ ಕ್ಲಬ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗಿಡಕ್ಕೆ ನೀರು ಹಾಕುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಇದನ್ನೂ ಓದಿ » Job News: ಜೂ.30, ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ, ಎಲ್ಲಿ?
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜನಾಧಿಕಾರಿಗಳಾದ ಶಶಿರೇಖಾ ಮಾತನಾಡಿ, ಕೇವಲ ಒಂದು ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ವಿಷಯವನ್ನು ತೆಗೆದುಕೊಂಡು ಅಭ್ಯಾಸ ಮಾಡಿ ಆ ವಿಷಯ ನಿಮಗಷ್ಟೇ ಸೀಮಿತವಾಗದೆ, ನೀವು ಕಲಿತದ್ದನ್ನು ಬೇರೆಯವರಿಗೂ ಹೇಳಿ ಕೊಡುವಂತಾಗಬೇಕು. ಅಂತಹ ಪ್ರವೃತ್ತಿಯನ್ನು ನೀವು ಬೆಳೆಸಿಕೊಂಡಾಗ ಮಾತ್ರ ವಿಷಯ ಎಲ್ಲರಿಗೂ ತಲುಪಲು ಸಾಧ್ಯ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಮಕ್ಕಳು ತಮ್ಮ ದಿನನಿತ್ಯ ಜೀವನದಲ್ಲಿ ವಿಜ್ಞಾನ ಮತ್ತು ಗಣಿತ ಯಾವ ರೀತಿ ಉಪಯೋಗವಾಗುತ್ತದೆ ಎಂಬುದನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವೇದಿಕೆಯ ಮೇಲೆ ಪ್ರದರ್ಶಿಸಿ ಅವುಗಳ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಿರಣ್ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮಾಧವ ಮಿಶ್ರ, ಮುಖ್ಯೋಪಾಧ್ಯಾಯರಾದ ಸುಷ್ಮಾ, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

ಇದನ್ನೂ ಓದಿ » ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ, ಚಾನಲ್ ಸ್ವಚ್ಛತೆ ಕುರಿತು ಅಗತ್ಯ ಕ್ರಮಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆ