
ಶಿವಮೊಗ್ಗ : ಕಳೆದ ವರ್ಷ ಐಪಿಎಲ್ ಪಂದ್ಯದ ವೇಳೆ ನಡೆದ ದುರಂತದಲ್ಲಿ 11 ಮಂದಿ ಮೃತಪಟ್ಟ ಘಟನೆಯ ಆಕ್ರಂದನ ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್ಗಾಗಿ ಸದನದಲ್ಲಿ ಪಟ್ಟು ಹಿಡಿಯುವುದು ಜನರ ದೃಷ್ಟಿಯಲ್ಲಿ ನಮ್ಮನ್ನು ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರ ಅಥವಾ ಕೆ.ಎಸ್.ಸಿ.ಎ. ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್ ಗಳನ್ನು ನಾನು ನಿರಾಕರಿಸುತ್ತೇನೆ.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಮುಂಬರುವ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ಗಳನ್ನು ವಿತರಿಸಬಾರದು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.
ಕಳೆದ ವಿಧಾನಸಭಾ ಅದಿವೇಶನದಲ್ಲಿ ಶಾಸಕರಿಗೆ ಉಚಿತ ಐಪಿಎಲ್ ಟಿಕೇಟ್ ನೀಡಬೇಕೆಂದು ಆಗ್ರಹಿಸಿ ಜನಸಾಮಾನ್ಯರ ಅಕ್ರೋಶಕ್ಕೆ ಗುರಿಯಾಗಿದ್ದ ಶಾಸಕರು ಕಡೆಗೂ ಉಚಿತ ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗ ಒಬ್ಬೊಬ್ಬರಾಗಿ ಟಿಕೇಟ್ ಬೇಡವೆಂದು ನಿರಾಕರಿಸಲು ಆರಂಭಿಸಿದ್ದು, ಶಾಸಕ ಸುರೇಶ್ ಕುಮಾರ್ ನಂತರ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಉಚಿತ ಐಪಿಎಲ್ ಟಿಕೇಟ್ ಬೇಡ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ಗೆ ರವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ » ರಾಂಗ್ ಸೈಡ್ ನಲ್ಲಿ ಬಂದು ಕಾರಿಗೆ ದಾರಿ ಬಿಡದ ಆಟೋ ಚಾಲಕರಿಬ್ಬರಿಗೆ ದಂಡ, ಎಚ್ಚರಿಕೆ!