
ಶಿವಮೊಗ್ಗ : ಕರುನಾಡ ಕನ್ನಡ ಕಲಾ ಸಿರಿ ಬಳಗ ಮತ್ತು ಎಜಿಎಸ್ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಸಾಧನೆ ಮಾಡಿದ ಭೋಧಕರಿಗೆ ಕೊಡುವ ಅತ್ಯುತ್ತಮ ಪ್ರಶಸ್ತಿಯಾದ ಉತ್ತಮ ಕನ್ನಡ ಸಾಧಕ ಶಿಕ್ಷಕ ಪ್ರಶಸ್ತಿಯು ಈ ಬಾರಿ ಪೂಜಾ.ಡಿ.ಜಿ ಲಭಿಸಿದೆ.
ಇವರು ಅತ್ಯಂತ ಪವಿತ್ರವಾದ ಬೋಧಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅದರಲ್ಲೂ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳಿಗೆ ಭೋಧಿಸುತ್ತಿರುವ ಇವರ ಸಾಧನೆಗೆ ಈ ಪ್ರಶಸ್ತಿ ಲಭಿಸಿರುವುದು ಕಾಲೇಜಿಗೆ ಮತ್ತು ತೀರ್ಥಹಳ್ಳಿ ಹೆಮ್ಮೆ ತಂದಿದೆ. ಇವರು ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.