ಶಿವಮೊಗ್ಗ ದಸರಾ ಕಳೆ ಹೆಚ್ಚಿಸಿದ ಗಜಪಡೆ: ಬಹದ್ದೂರ್, ಸಾಗರ್, ಸೋಮಣ್ಣಗೆ ನಗರದಲ್ಲಿ ಅದ್ದೂರಿ ಸ್ವಾಗತ!

ಶಿವಮೊಗ್ಗ : ನಾಡಹಬ್ಬ ದಸರಾ ಸಂಭ್ರಮಕ್ಕೆ ಶಿವಮೊಗ್ಗ ನಗರ ಸಜ್ಜಾಗುತ್ತಿದ್ದು, ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಸಕ್ರೆಬೈಲು ಆನೆ ಬಿಡಾರದ ಗಜಪಡೆ ನಗರಕ್ಕೆ ಆಗಮಿಸಿದೆ. ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಆನೆಗಳ ಆಗಮನದಿಂದ ನಗರದಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ಕಳೆಗಟ್ಟಿದೆ.ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿರುವ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಉತ್ಸವಕ್ಕೆ ಆನೆಗಳ ಆಗಮನವು ನಗರವಾಸಿಗಳಲ್ಲಿ ಹಬ್ಬದ ಹರ್ಷೋಲ್ಲಾಸವನ್ನು ಹೆಚ್ಚಿಸಿದೆ.

ಇಂದು ಸಂಜೆ ಸಕ್ರೆಬೈಲು ಆನೆ ಬಿಡಾರದಿಂದ ಶಿವಮೊಗ್ಗ ದಸರಾ ಅಂಬಾರಿ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಬಹದ್ದೂರ್, ಸಾಗರ್ ಮತ್ತು ಸೋಮಣ್ಣ ಆನೆಗಳಿಗೆ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ವತಿಯಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳವಾದ್ಯಗಳೊಂದಿಗೆ ಆನೆಗಳನ್ನು ಶಿವಮೊಗ್ಗ ನಗರಕ್ಕೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಕೂಡ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಗತಿಸಿದರು.

ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ಇಂದಿನಿಂದ ಗಜಪಡೆ ತಾಲೀಮು ನಡೆಯಲಿದೆ.

ಈ ಬಾರಿ ಸಾಗರ್‌ ಆನೆ ಅಂಬಾರಿ ಹೊರಲಿದ್ದು, ಸಾಗರ್‌ಗೆ  ಬಹದ್ದೂ‌ರ್ ಮತ್ತು ಸೋಮಣ್ಣ ಆನೆಗಳು ಸಾಥ್ ನೀಡಲಿವೆ. ದಸರಾದ ಕೊನೆ ದಿನದಂದು ಅದ್ದೂರಿ ಜಂಬೂಸವಾರಿ ನಡೆಯಲಿದ್ದು, ಸಾಗರ್‌ ಆನೆ ಸುಮಾರು 650 ಕೆ.ಜಿ. ಬೆಳ್ಳಿಯ ಅಂಬಾರಿ ಹೊರಲಿದ್ದಾನೆ. ರಾಜ್ಯದಲ್ಲೇ ಶಿವಮೊಗ್ಗ ದಸರಾ ಎರಡನೇ ಅತಿದೊಡ್ಡ ದಸರಾ ಎಂದು ಖ್ಯಾತಿ ಹೊಂದಿದೆ. ಈ ಬಾರಿ ಮಹಾನಗರ ಪಾಲಿಕೆ ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿದೆ.

ದಸರಾ ಸಂಭ್ರಮಕ್ಕೆ ಗಜಪಡೆಯ ಮೆರುಗು :

ಶಿವಮೊಗ್ಗ ದಸರಾ ಉತ್ಸವದಲ್ಲಿ ಅಂಬಾರಿ ಮೆರವಣಿಗೆ ವಿಶೇಷ ಆಕರ್ಷಣೆಯಾಗಿದೆ. ಅಂಬಾರಿ ಹೊರುವ ಆನೆಗಳ ಆಗಮನದೊಂದಿಗೆ ದಸರಾ ಸಿದ್ಧತೆಗಳು ಮತ್ತಷ್ಟು ಚುರುಕುಗೊಂಡಿದ್ದು, ಉತ್ಸವವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಸಂಭ್ರಮ ಮನೆಮಾಡಿದೆ.

ಬಹದ್ದೂರ್, ಸಾಗರ್ ಮತ್ತು ಸೋಮಣ್ಣ ಆನೆಗಳ ಆಗಮನವು ಈ ಬಾರಿಯ ಶಿವಮೊಗ್ಗ ದಸರಾ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿದ್ದು, ಅಂಬಾರಿ ಮೆರವಣಿಗೆಯ ನಿರೀಕ್ಷೆ ಹೆಚ್ಚಿಸಿದೆ. ಸಕ್ರೆಬೈಲು ಆನೆ ಬಿಡಾರವು ಆನೆಗಳ ಪಾಲನೆ, ಪೋಷಣೆ ಹಾಗೂ ತರಬೇತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಆನೆಗಳು ಶಿವಮೊಗ್ಗ ದಸರಾ ಸೇರಿದಂತೆ ವಿವಿಧ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಜನರ ಗಮನ ಸೆಳೆಯುತ್ತವೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...