ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ರಸ್ತೆ ಕಾಮಗಾರಿ, ಶಾಸಕರಿಂದ ಪರಿಶೀಲನೆ

ಶಿವಮೊಗ್ಗ : ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ಕಾಮಗಾರಿಯ ಪ್ರಗತಿಯ ಕುರಿತು ಸ್ಥಳಕ್ಕೆ ಇಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು.

ಈ ಕಾಮಗಾರಿಗೆ ಸಂಬಂಧಪಟ್ಟಂತೆ ಮಾನ್ಯ ಲೋಕೋಪಯೋಗಿ ಸಚಿವರ ಜೊತೆ ರಸ್ತೆ ಕಾಮಗಾರಿ ಬಗ್ಗೆ ಹಲವು ಬಾರಿ ಚರ್ಚೆ ಮಾಡಿದ ನಂತರ ವಿಶೇಷ ಪ್ರಯತ್ನದ ಮೇರೆಗೆ ಇದೀಗ ಎಲ್ಲಾ ಹಂತದಲ್ಲೂ  ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ನೂತನ ರಸ್ತೆಯ ಕಾಮಗಾರಿಯು ಪ್ರಾರಂಭವಾಗಿದೆ ಎಂದರು.

ಒಟ್ಟು ರೂ.3 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ರಸ್ತೆ ಕಾಮಗಾರಿಯಲ್ಲಿ ರೂ.2 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ರೂ.1 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆಯ ಕಾಮಗಾರಿ ಪೂರ್ಣಗೊಂಡ ನಂತರ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

| ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು


ಹೇಗಿರಲಿದೆ ರೈಲ್ವೆ ಮೇಲ್ಸೇತುವೆ  ಬಳಿಯ ರಸ್ತೆ ಕಾಮಗಾರಿ ತಯಾರಿ :

  1. ವಿಶೇಷವಾಗಿ ಈ ಬಾರಿ ಫ್ಲೈ ಓವರ್  ರಸ್ತೆಯನ್ನು ಮ್ಯಾಸ್ಟೀಕ್ ಹಾಟ್‌ಸ್ಪಾಟ್, ಒಂದು ನೂತನ ಕಾಮಗಾರಿಯನ್ನು ಪ್ರಾರಂಭ ಮಾಡುತ್ತಿದ್ದಾರೆ. ಏಕೆಂದರೆ ಅನೇಕ ಬಾರಿ ಪದೇ ಪದೇ ರಸ್ತೆ ಗುಂಡಿ ಬೀಳುವ ಸಮಸ್ಯೆ ಇರುವುದರಿಂದ ರಸ್ತೆಗೆ ಶಾಶ್ವತ ಪರಿಹಾರ ಇದಾಗಿದೆ ಎಂದು ಕಾಮಗಾರಿಯನ್ನು ಚಾಲನೆ ಮಾಡಲಾಯಿತು.
  2. ಮ್ಯಾಸ್ಟೀಕ್ ಹಾಟ್‌ಸ್ಪಾಟ್ ಕಾಮಗಾರಿಯನ್ನು ಒಂದು ಏಜೆನ್ಸಿ ನಡೆಸುತ್ತಾರೆ. ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಇನ್ನೊಂದು ಏಜೆನ್ಸಿ ನಡೆಸುತ್ತಿದ್ದು, ಒಟ್ಟಾರೆ ಇದಕ್ಕೆ ಮೂರು ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭ ಮಾಡಲಾಗಿದೆ.
  3. ರಸ್ತೆ ಕಾಮಗಾರಿ ಆಗಬೇಕೆಂದು ಬಹಳ ಸಮಸ್ಯೆ ಹಾಗೂ ಹೋರಾಟವನ್ನು ಕೂಡ ನಾವು ಮಾಡಿದ್ದೇವೆ. ಅದರ ಪರಿಣಾಮ ಕಾಮಗಾರಿ ಪ್ರಾರಂಭಗೊಂಡಿದೆ. ಬೇರೆ ಬೇರೆ ಕಾರಣಾಂತರದಿಂದ ತಡವಾಗಿ ಕಾಮಗಾರಿ ಪ್ರಾರಂಭಗೊಂಡಿದೆ. ಇದನ್ನು ಮುಂಬರುವ 45 ದಿನಗಳಲ್ಲಿ ಆದಷ್ಟು ಬೇಗ ಪೂರ್ಣವಾಗಿ ಮುಗಿಸಿಕೊಡುತ್ತೇವೆಂದು ಸ್ಥಳೀಯ ನಾಗರೀಕರಿಗೆ ಭರವಸೆಯನ್ನು ನೀಡುತ್ತೇನೆ ಎಂದರು.
  4. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಟ್ರಾಫಿಕ್ ತೊಂದರೆ ಆಗಬಾರದೆಂದು ಶಾಂತಿನಗರ ಹಾಗೂ ಅರಮಘಟ್ಟ ಟ್ರಾಫಿಕ್ ಡೈವರ್ಟ್ ಮಾಡಲು ಸಂಬಂಧಪಟ್ಟಂತ ಪಿಡಬ್ಲ್ಯೂಡಿ ಅಧಿಕಾರಿ ಹಾಗೂ ಸಂಚಾರಿ ರಕ್ಷಣಾ ಇಲಾಖೆಯವರನ್ನು ಕೂಡ ಸ್ಥಳಕ್ಕೆ ಕರೆಸಿ ಪರಿಶೀಲನೆ ಮಾಡಿ ಟ್ರಾಫಿಕ್ ಡೈವರ್ಟ್ ಮಾಡಬೇಕೆಂದು ಸೂಚನೆ ನೀಡಲಾಯಿತು.

ಈ ಕಾಮಗಾರಿಯನ್ನು ಮಾಡಲು ಸತೀಶ್ ಜಾರಕಿಹೊಳಿ ಯವರನ್ನು ಭೇಟಿ ಮಾಡಿದಾಗ ಇದನ್ನು ಗಮನಿಸಿ ನಾನು ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...