ಶಿವಮೊಗ್ಗ : ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ನಗರದ ವಿವಿಧೆಡೆ ವಾಹನಗಳ ನಿಲುಗಡೆಗೆ (Parking) ಅವಕಾಶ ಮತ್ತು ನಿಷೇಧ ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ದ್ವಿಚಕ್ರ ವಾಹನಗಳ ನಿಲುಗಡೆ
- ಬಿ.ಹೆಚ್.ರಸ್ತೆಯ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ ಕುಚಲಕ್ಕಿ ಕೇರಿ ಎದುರಿನಿಂದ ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್.
- ಸಂಗಮ್ ಟೈಲರ್ ಶಾಪ್‌ನಿಂದ ಡಯಟ್ ಕಾಲೇಜು ಕ್ರಾಸ್ (ಸಾವರ್ಕರ್ ನಗರ ಕ್ರಾಸ್‌ವರೆಗೆ) ಬಲ ಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್.
ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧ
- ಬಿ.ಹೆಚ್.ರಸ್ತೆ – ಅಮೀರ್ ಅಹಮದ್ ಸರ್ಕಲ್ ಸಮೀಪದ ವೆಂಕಟೇಶ್ವರ ಸ್ವೀಟ್ ಹೌಸ್ ಮುಂಭಾಗದಿಂದ ಕರ್ನಾಟಕ ಸಂಘ ಸರ್ಕಲ್‌ವರೆಗೆ ಎಡ ಮತ್ತು ಬಲ ಬದಿಯಲ್ಲಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ನಿಷೇಧ.
- ಗಾಂಧಿ ಬಜಾರ್ ಮುಖ್ಯ ರಸ್ತೆ – ಶಿವಪ್ಪನಾಯಕ ಸರ್ಕಲ್‌ನಿಂದ ಗಾಂಧಿ ಬಜಾರ್ 2ನೇ ತಿರುವಿನವರೆಗೆ ರಸ್ತೆಯ ಎರಡೂ ಬದಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ನಿಲುಗಡೆ ನಿಷೇಧ.
- ನೆಹರೂ ರಸ್ತೆ – ನೆಹರು ರಸ್ತೆಯಲ್ಲಿ ಗೋಪಿ ವೃತ್ತದಿಂದ ಅಮೀರ್ ಅಹಮದ್ ಸರ್ಕಲ್‌ವರೆಗೆ ವಾಹನಗಳ ಪಾರ್ಕಿಂಗ್ ನಿಷೇಧ. ಸ್ಮಾರ್ಟ್ ಸಿಟಿ ವತಿಯಿಂದ ವಾಹನಗಳ ಪಾರ್ಕಿಂಗ್‌ಗಾಗಿ ಅಭಿವೃದ್ಧಿಪಡಿಸಿರುವ ಕನ್ಸರ್‌ವೆನ್ಸಿ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಈ ನಿಷೇಧ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಎಲ್ಲಿ?
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಾದ ಬಿ.ಹೆಚ್.ರಸ್ತೆ (ರಾಯಲ್ ಆರ್ಕೆಡ್ ಇಂದ ಕರ್ನಾಟಕ ಸಂಘ ಸಿಗ್ನಲ್ ವರೆಗೆ) ಶಿವಪ್ಪ ನಾಯಕ ಪ್ರತಿಮೆಯಿಂದ ಗಾಂಧಿ ಬಜಾರ್ ನಾಲ್ಕನೇ ಅಡ್ಡರಸ್ತೆವರೆಗೆ, ಗೋಪಿ ವೃತ್ತದಿಂದ ಅಮೀರ್ ಅಹಮ್ಮದ್ ವೃತ್ತದವರೆಗೆ, ಹಳೆ ತೀರ್ಥಹಳ್ಳಿ ರಸ್ತೆ, ಎಂ.ಕೆ.ಕೆ.ರಸ್ತೆ, ಕೆ.ಆರ್.ಪುರಂ ರಸ್ತೆಗಳಲ್ಲಿ ವಾಹನದ ದಟ್ಟಣೆ ಅಧಿಕವಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ.01 ರಿಂದ ಕಾರ್ಯಾರಂಭವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ನಿರ್ವಹಿಸುತ್ತಿರುವ ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು.