ಜ್ಯುವೆಲ್ ರಾಕ್ ಹೋಟೆಲ್ ನಲ್ಲಿ ಅರ್ಬನ್ ಇಂಡಿಯಾ ಪ್ರದರ್ಶನಕ್ಕೆ ತೇಜಸ್ವಿನಿ ರಾಘವೇಂದ್ರ ಚಾಲನೆ

ಶಿವಮೊಗ್ಗ : ಶಿವಮೊಗ್ಗದ ಜ್ಯುವೆಲ್ ರಾಕ್ ಹೋಟೆಲ್ ನ ಸಭಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿರುವ ಅರ್ಬನ್ ಇಂಡಿಯಾ ಪ್ರದರ್ಶನಕ್ಕೆ ಶ್ರೀಮತಿ ತೇಜಸ್ವಿನಿ ರಾಘವೇಂದ್ರ ಅವರು ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅರ್ಬನ್ ಇಂಡಿಯಾ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಪ್ರದರ್ಶನವಾಗಿದೆ. ಟೈಯರ್-2 ನಗರಗಳ ಸಣ್ಣ ಮಾರುಕಟ್ಟೆಗಳಲ್ಲೂ ಎಕ್ಸ್ ಕ್ಲೂಸಿವ್ ಧಿರಿಸುಗಳು, ಅಲಂಕಾರಿಕ ವಸ್ತುಗಳು ಸಿಗುತ್ತಿರುವುದು ಹೆಮ್ಮೆಯ ವಿಷಯ ಪ್ರತಿನಿತ್ಯದ ಜೀವನಶೈಲಿಗೆ ಅಗತ್ಯವಾಗಿರುವ ಅಲಂಕಾರಿಕ ವಸ್ತುಗಳು ಮತ್ತು ಸೀರೆ, ಧಿರಿಸುಗಳು ಇಲ್ಲಿ ಅಪರೂಪದ್ದಾಗಿವೆ ಎಂದು ಬಣ್ಣಿಸಿದರು.

ಇಂತಹ ಪ್ರದರ್ಶನಗಳು ಕೇವಲ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಮಹಿಳೆಯರಿಗೆ ಅಗತ್ಯವಾದ ಎಲ್ಲಾ ಉತ್ಪನ್ನಗಳು ಇಲ್ಲಿ ಲಭ್ಯವಿರುವ ಪ್ರದರ್ಶನ ಉದ್ಘಾಟಿಸಿರುವುದು ನನಗೆ ಸಂತಸ ತಂದಿದೆ.

– ತೇಜಸ್ವಿನಿ ರಾಘವೇಂದ್ರ


ಇದು ಮೆಟ್ರೋ ನಗರಗಳಲ್ಲಿ ಮಾತ್ರ ಲಭ್ಯವಿರುವ ವಿಶೇಷ ಉತ್ಪನ್ನಗಳ ನಡುವಿನ ಅಂತರವನ್ನು ಶಿವಮೊಗ್ಗದಲ್ಲಿ ಪ್ರದರ್ಶನಕ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಇದು ದೇಶದ ಪ್ರಸಿದ್ಧ ಮಾರಾಟಗಾರರು ಮತ್ತು ವಿನ್ಯಾಸಕರನ್ನು ಒಟ್ಟುಗೂಡಿಸುವಂತಹ ಪ್ರದರ್ಶನವಾಗಿದ್ದು, ಕೇವಲ ಪ್ರದರ್ಶನಕ್ಕಿಂತ ಹೆಚ್ಚಾಗಿ, ಅರ್ಬನ್ ಇಂಡಿಯಾ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ, ಸ್ಥಳೀಯ ಕುಶಲಕರ್ಮಿಗಳನ್ನು ಉತ್ತೇಜಿಸುವ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸುವ ಒಂದು ಆಂದೋಲನವಾಗಿದೆ ಎಂದರು.

ಈ ಸಂದರ್ಭದಲ್ಲಿ ಅರ್ಬನ್ ಇಂಡಿಯಾ ಸಂಸ್ಥಾಪಕಿ ನಿರಂಜನಿ ರವೀಂದ್ರ, ಶ್ರಾವಣ ಸುಭಾಷ್, ನಯನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...