ಒಂದು ಬದುಕು ವಿವಿಧ ಆಯಾಮ, ಇದು ಗೊಂಬೆ ಆಟವಯ್ಯಾ….

ಶಿವಮೊಗ್ಗ : ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು..’ ಎಂಬಂತೆ ಗೊಂಬೆಗಳು ಕೇವಲ ಆಟಿಕೆಯ ವಸ್ತುಗಳಾಗದೇ ಜೀವನ ಪಾಠವನ್ನು ಕಲಿಸುವುದರ ಜೊತೆಗೆ ಎಲ್ಲಾ ಹಂತದಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ.

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ, ಆತನ ಕರುಣೆಯೇ ಜೀವವ ತುಂಬಿ ಕುಣಿಸಿ ನಲಿಸಿದೆ…. ಅದಕ್ಕೆ ನಿದರ್ಶನದಂತೆ ನಿನ್ನೆ ಗೊಂಬೆ ಮಾರುವವರು ಗೊಂಬೆಗಳನ್ನು ಕೊಳ್ಳುವವರಿಲ್ಲದೆ ಗಾಂಧಿ ನಗರದ ರಸ್ತೆ ಬದಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಇದಾಗಿದ್ದು, ಕೆಲವೊಮ್ಮೆ ಬದುಕು ಕೂಡ ಗೊಂಬೆ ಆಟದಂತೆ ಜೀವನದ ಏರಿಳಿತಗಳನ್ನು, ಅನಿರೀಕ್ಷಿತ ತಿರುವುಗಳನ್ನು, ಸವಾಲುಗಳನ್ನು ಎದುರಿಸುವಂತೆ ಮಾಡುತ್ತದೆ.

ಅಂದಿನಿಂದ ಇಂದಿನವರೆಗೂ ಮಕ್ಕಳ ಆಟಿಕೆಗಳ ಲೋಕದಲ್ಲಿ ಗೊಂಬೆಗಳಿಗೇ ಮೊದಲ ಪ್ರಾಧಾನ್ಯತೆ ಇದೆ. ಬಾಲ್ಯಾವಸ್ಥೆಯಲ್ಲಿ ಪ್ರತಿ ಮಗುವು ಗೊಂಬೆಗಳೊಂದಿಗೆ ಆಟವಾಡುವುದು ಸಹಜ. ಗೊಂಬೆಗಳ ಕೃತಕ ಚಲನವಲನದಲ್ಲಿ ಜೀವಂತಿಕೆಯನ್ನು ಕಾಣುವ ನಿಷ್ಕಲ್ಮಶ ಮನಸ್ಸಿನ ಮಕ್ಕಳ ಜೊತೆ ಆತ್ಮೀಯವಾಗಿ ಸಂಬಂಧ ಬೆಸೆದುಕೊಂಡಿರುವುದು ಈ ಗೊಂಬೆಗಳು.

ಜಾತ್ರೆ, ಸಂತೆಗಳಲ್ಲಿ ಸಾಮಾನ್ಯವಾಗಿ ಮಕ್ಕಳು ಗೊಂಬೆಗಳ ಮಾರಾಟದತ್ತ ಆಕರ್ಷಕರಾಗುತ್ತಾರೆ. ಈ ಗೊಂಬೆಗಳ ಮಾರಾಟವು ಒಬ್ಬರ ಬದುಕು ರೂಪಿಸುವಲ್ಲಿ ನೆರವಾಗಿದೆ. ರಸ್ತೆ ಬದಿಯ ಗೊಂಬೆ ಮಾರಾಟಗಾರನ ಜೀವನ ಅಷ್ಟು ಸುಲಭವಲ್ಲ, ಅವರ ಬದುಕಿನಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಗೊಂಬೆ ಮಾರಾಟಗಾರರ ಜೀವನ ಶೈಲಿ ವಿಭಿನ್ನತೆಯೊಂದಿಗೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಇದು ಅವರ ಸೃಜನಶೀಲತೆ, ಸಾಮಾಜಿಕ ಕೌಶಲ್ಯಗಳು ಮತ್ತು ವ್ಯಾಪಾರ ಕೌಶಲ್ಯಗಳನ್ನು ಬಳಸಿಕೊಂಡು ತಮ್ಮದೇ ಆದ ವ್ಯಾಪಾರವನ್ನು ನಿರ್ಮಿಸಲು ಬಯಸುವವರಿಗೆ ಒಂದು ಆಸಕ್ತಿದಾಯಕ ವೃತ್ತಿಯಾಗಿದ್ದು, ಜನರನ್ನು ತನ್ನತ್ತ ಸೆಳೆಯುವಂತಹ ಶಕ್ತಿಯನ್ನು ಹೊಂದಿದೆ. ರಸ್ತೆ ಬದಿಗಳಲ್ಲಿ ಗೊಂಬೆಗಳನ್ನು ಮಾರಾಟ ಮಾಡುತ್ತಾ ತಮ್ಮ ಬದುಕು ಕಟ್ಟಿಕೊಳ್ಳುತ್ತಿರುವ ಇವರುಗಳ ಬದುಕು ಗೊಂಬೆ ಆಟವಯ್ಯಾ..

ಜೀವನದಲ್ಲಿ ನಾವು ಹಲವಾರು ಪಾತ್ರಗಳನ್ನು ನಿರ್ವಹಿಸುತ್ತೇವೆ. ಮಗುವಾಗಿ, ವಿದ್ಯಾರ್ಥಿಯಾಗಿ, ಉದ್ಯೋಗಿಯಾಗಿ, ಸಂಗಾತಿಯಾಗಿ, ಪೋಷಕರಾಗಿ, ಸ್ನೇಹಿತರಾಗಿ ಇತ್ಯಾದಿ, ಈ ಪ್ರತಿಯೊಂದು ಪಾತ್ರವು ತನ್ನದೇ ಆದ ನಿರೀಕ್ಷೆಗಳು, ಜವಾಬ್ದಾರಿಗಳು ಮತ್ತು ಸವಾಲುಗಳನ್ನು ಹೊಂದಿರುತ್ತದೆ. ಹಾಗೆಯೇ ಪ್ರತಿಯೊಂದು ಪಾತ್ರವೂ ಕೂಡ ತನ್ನದೇ ವ್ಯಕ್ತಿತ್ವದ ವಿಭಿನ್ನ ಅಂಶಗಳನ್ನು ಪ್ರತಿಬಿಂಬಿಸುತ್ತದೆ.

ಬದುಕನ್ನು ಗೊಂಬೆಯೊಂದಿಗೆ ಹೋಲಿಸುವುದು ಒಂದು ಆಳವಾದ ಮತ್ತು ತಾತ್ವಿಕ ವಿಚಾರವಾಗಿದೆ. ಈ ಹೋಲಿಕೆಯು ನಮ್ಮ ಜೀವನದ ಮೇಲಿನ ನಿಯಂತ್ರಣ, ಸ್ವಾತಂತ್ರ್ಯ ಮತ್ತು ಸಮಾಜದ ನಿರೀಕ್ಷೆಗಳಂತಹ ವಿಷಯಗಳ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿ ತೋರುತ್ತದೆ.

ವಾಸ್ತವ ನಾವು ಗೊಂಬೆಗಳಲ್ಲ, ನಾವು ಸ್ವತಂತ್ರರು ಮತ್ತು ನಮ್ಮ ಜೀವನವನ್ನು ನಾವೇ ರೂಪಿಸುವ ಶಕ್ತಿ ನಮಗಿದೆ. ನಮ್ಮ ಸುತ್ತಲಿನ ಜಗತ್ತನ್ನು ಗಮನಿಸಿ, ನಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿ, ನಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ನಾವು ನಮ್ಮ ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿಸಬಹುದು.

ಮಕ್ಕಳ ಬೆಳವಣಿಗೆಯಲ್ಲಿ ಗೊಂಬೆ ಸಹಕಾರಿ :

ಗೊಂಬೆಗಳು ಮಕ್ಕಳ ಕಲ್ಪನಾಶಕ್ತಿ, ಸಾಮಾಜಿಕ ಕೌಶಲ್ಯ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಪುಟ್ಟ ಮಕ್ಕಳು ಗೊಂಬೆಗಳೊಂದಿಗೆ ಆಡುವುದರಿಂದ ಸ್ವಯಂ ಶಿಸ್ತು ಮತ್ತು ಸ್ವಚ್ಛತಾ ಅಭ್ಯಾಸ ರೂಢಿಗತವಾಗುತ್ತದೆ. ಮಕ್ಕಳ ಸೃಜನಶೀಲತೆ ಬೆಳೆಯುತ್ತದೆ ಹಾಗೂ ಕಲಿಕೆಗೆ ಆಸಕ್ತಿ ತುಂಬುತ್ತದೆ. ಗೊಂಬೆಗಳ ಜೊತೆಗೆ ಆಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

ಗೊಂಬೆಗಳ ಇತಿಹಾಸ :

ಗೊಂಬೆಗಳು ಕೇವಲ ಆಟಿಕೆಗಳಲ್ಲ, ಅವು ಇತಿಹಾಸ ಸಂಸ್ಕೃತಿಯ ಪ್ರತಿಬಿಂಬ. ಪ್ರಾಚೀನ ಕಾಲದಿಂದಲೂ ಮಕ್ಕಳ ಆಟದ ಗೆಳೆಯರಾಗಿ, ಕಲಾಕೃತಿಗಳಾಗಿ, ಆಚರಣೆಗಳ ಭಾಗವಾಗಿ ನಮ್ಮೊಂದಿಗಿವೆ. ಇತಿಹಾಸದ ಪ್ರಕಾರ 14ನೇ ಶತಮಾನದಲ್ಲಿ ಟಾಯ್ ಎಂಬ ಪದ ಬಳಕೆಯಲ್ಲಿತ್ತು ಎಂದು ಹೇಳಲಾಗುವುದು. ಸಿಂಧೂ ನಾಗರೀಕತೆಯ ಕಾಲದಲ್ಲಿ ಚಿಕ್ಕ ಚಿಕ್ಕ ಆಟಿಕೆಯ ವಸ್ತುಗಳು ಕಾಣಸಿಗುತ್ತಿದ್ದವು ಎಂದು ಉತ್ಪನನಗಳು ತಿಳಿಸುತ್ತವೆ. ಮಕ್ಕಳ ಬೆಳವಣಿಗೆಯಲ್ಲಿ ಉತ್ತಮ ಒಡನಾಡಿಯಾಗಿರುವ ಗೊಂಬೆಗಳು ಇಂದಿಗೂ ಸಾಕ್ಷಿಯಾಗಿವೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...