ಭದ್ರಾವತಿ-ಶಿವಮೊಗ್ಗ ರೈಲ್ವೆ ಲೆವೆಲ್ ಕ್ರಾಸಿಂಗ್‌ ಗೇಟ್‌ಗಳ ತಾಂತ್ರಿಕ ಪರಿಶೀಲನೆ, ವಾಹನಗಳ ಓಡಾಟಕ್ಕೆ ಬದಲಿ ಮಾರ್ಗ

ಶಿವಮೊಗ್ಗ : ಭದ್ರಾವತಿ-ಶಿವಮೊಗ್ಗ ನಡುವೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಎಲ್ ಸಿ ನಂ 46 ಮತ್ತು ಎಲ್ ಸಿ ನಂ 42 ಗಳನ್ನು ತೆರೆದು ಪರೀಕ್ಷೆ ಮಾಡಬೇಕಿರುವ ಕಾರಣ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಫಲಪುಷ್ಪ ಪ್ರದರ್ಶನದ ದಿನಾಂಕ ಘೋಷಣೆ, ಈ ಬಾರಿ ಏನೆಲ್ಲಾ ವಿಶೇಷತೆ ಇರಲಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಜ.21 ರ ಬೆಳಿಗ್ಗೆ 8.00 ರಿಂದ ಜ.22 ರ ಬೆಳಿಗ್ಗೆ 6.00 ಗಂಟೆವರೆಗೆ ಎಲ್‌ಸಿ 46 ಚಿತ್ರದುರ್ಗ ರಸ್ತೆಯ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಯಾ ಚಿತ್ರದುರ್ಗ ರಸ್ತೆ ಸಂಪರ್ಕಿಸುವ ಹೊಸದಾಗಿ ನಿರ್ಮಾಣವಾದ ಮೇಲ್ವೇತುವೆ (ಹೊಳೆಹೊನ್ನೂರು ಫೈ ಓವರ್ ರಸ್ತೆ) ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ಕಲ್ಪಿಸಲಾಗಿದೆ.

ಜ.23 ರಂದು ಬೆಳಿಗ್ಗೆ 8.00 ರಿಂದ ಜ.24 ರ ಬೆಳಿಗ್ಗೆ 6.00 ಗಂಟೆವರೆಗೆ ಎಲ್ ಸಿ 42 ರ ಯಲವಟ್ಟಿ ರಸ್ತೆಯ ರೈಲ್ವೇ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಯಾ ಎಲ್‌ಸಿ ನಂ 46 ಚಿತ್ರದುರ್ಗ ರಸ್ತೆ-ಹೊಸೂಡಿ ರಸ್ತೆ-ಯಲವಟ್ಟಿ ರಸ್ತೆ ಸಂಪರ್ಕ (ಹೊಳೆ ಹೊನ್ನೂರು ಫೈ ಒವರ್ ರಸ್ತೆ) ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ಕಲ್ಪಿಸಲಾಗಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್‌ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ಕಲಂ 115 ರನ್ವಯ ಮೇಲ್ಕಂಡಂತೆ ತಾತ್ಕಾಲಿಕ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...