
ಶಿವಮೊಗ್ಗ : ಜಿಲ್ಲಾ ಪಂಚಾಯತ್ ಶಿವಮೊಗ್ಗ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ (ರಿ.) ಇವರ ಜಂಟಿ ಆಶ್ರಯದಲ್ಲಿ ಶ್ವಾನ ಪ್ರದರ್ಶನ – 2026 ನ್ನು ಜ.25 ರಂದು ಬೆಳಗ್ಗೆ 9.30 ಕ್ಕೆ ನಗರದ ಪಶು ಆಸ್ಪತ್ರೆ ಆವರಣ ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರ ಎ.ಪಿ.ಎಂ.ಸಿ. ಮಾರುಕಟ್ಟೆ, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಫಲಪುಷ್ಪ ಪ್ರದರ್ಶನದ ದಿನಾಂಕ ಘೋಷಣೆ, ಈ ಬಾರಿ ಏನೆಲ್ಲಾ ವಿಶೇಷತೆ ಇರಲಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಮರಿ ಶ್ವಾನ ವಿಭಾಗ (6 ತಿಂಗಳಿಂದ 1 ವರ್ಷದೊಳಗೆ) ದಲ್ಲಿ ಅತ್ಯುತ್ತಮ (ಚಾಂಪಿಯನ್) ರೂ.5,000/ಗಳು, ಎರಡನೇ ಅತ್ಯುತ್ತಮ ರೂ.3,000/-ಗಳು ಹಾಗೂ ಮೂರನೇ ಅತ್ಯುತ್ತಮ ರೂ.2,000/ಗಳನ್ನು ನೀಡಲಾಗುವುದು.
ವಯಸ್ಕ ಶ್ವಾನ ವಿಭಾಗ (1 ವರ್ಷ ಮೇಲ್ಪಟ್ಟ) ದಲ್ಲಿ ಅತ್ಯುತ್ತಮ (ಚಾಂಪಿಯನ್) ರೂ.15,000/- ಗಳು, ಎರಡನೇ ಅತ್ಯುತ್ತಮ ರೂ.8,000/- ಗಳು, ಮೂರನೇ ಅತ್ಯುತ್ತಮ ರೂ.5,000/- ಗಳು ಮತ್ತು ನಾಲ್ಕನೇ ರಿಂದ 8ನೇಯ ಅತ್ಯುತ್ತಮ ರೂ.2,000/- ಗಳನ್ನು ನೀಡಲಾಗುವುದು.
ಅತ್ಯುತ್ತಮ ಭಾರತೀಯ ತಳಿಯ ಶ್ವಾನಕ್ಕೆ ರೂ.2,000/- ಗಳು ಮತ್ತು ಅತ್ಯುತ್ತಮ ನಿರ್ವಾಹಕರಿಗೆ ರೂ.2,000/- ಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ವಾನ ಪ್ರದರ್ಶನದಲ್ಲಿ ಡಾ. ಕೆ.ಟಿ.ಪರಮೇಶ್ವರ್, ಉಪ ನಿರ್ದೇಶಕರು (ಆಡಳಿತ), ಬೆಂಗಳೂರು ಮತ್ತು ತಂಡ, ಬೆಂಗಳೂರು ಇವರು ತೀರ್ಪುಗಾರರಾಗಿದ್ದಾರೆ.
ಶ್ವಾನ ಪ್ರದರ್ಶನದ ನೋಂದಣಿಗಾಗಿ ನಗರದ ಪಶು ಆಸ್ಪತ್ರೆಯ ಡಾ. ಪ್ರಸನ್ನ.ಕೆ.ಎಂ., – 9343464008, ಡಾ. ಶಿವರಾಜ್.ಬಿ.ಡಿ., – 9448318878, ಡಾ. ಕೆಂದೇಶ್ – 9880043904, ಡಾ. ಓ.ಎಸ್.ಪ್ರಕಾಶ್ – 7628659762, ಎನ್. ರಾಜೇಂದ್ರ ಕಾಮತ್ – 9902191333, ಶ್ರೀ ಗಜಾನನ ಹೆಗಡೆ – 9742352112, ಡಾ. ಶ್ರೀಪಾದ್ ರಾವ್.ಎನ್.ಹೆಚ್., – 9448007542, ಡಾ. ನಟರಾಜ್.ಟಿ.ಹೆಚ್., – 9482635093, ಡಾ. ರಾಜಶೇಖರ್.ಡಿ.ಬಿ., – 9480467707, ಡಾ. ಲೋಹಿತ್.ಎಂ.ಟಿ., – 8762099569, ಡಾ. ದೀಪಕ್.ಎ.ವಿ., – 9980371799, ಡಾ. ಮನೋಜ್.ಹೆಚ್.ಆರ್., – 7337629259, ಡಾ. ರುದ್ರೇಶ್.ಜಿ.ಎನ್., – 9611948135 ಇವರನ್ನು ಸಂಪರ್ಕಿಸಬಹುದಾಗಿದೆ.