‘ವ್ಯಾಲೆಂಟೈನ್ಸ್ ಡೇ’ಗೆ ಹೊಸ ಪ್ರಯತ್ನದ ‘ಯಾರ್ ನೀ’ ಆಲ್ಬಂ ಸಾಂಗ್ ರಿಲೀಸ್!

ಶಿವಮೊಗ್ಗ : ಇತ್ತೀಚೆಗೆ ಕನ್ನಡ ಸಂಗೀತ ಲೋಕದಲ್ಲಿ ಹೊಸ ಆಲ್ಬಂ ಸಾಂಗ್‌ಗಳ ಅಲೆ ಜೋರಾಗಿದೆ. ಅದಕ್ಕೆ ಮತ್ತಷ್ಟು ಮೆರಗು ನೀಡುವಂತೆ ಎಸ್.ಆರ್.ಎನ್ ಅವರ ಮೂರನೇ ಟ್ರ್ಯಾಕ್ ‘ಯಾರ್ ನೀ’ ಎಂಬ ಮ್ಯೂಸಿಕ್ ನ ಟ್ರೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಫೆ.14 ರಂದು (ನಾಳೆ) ‘ಯಾರ್ ನೀ’ ಆಲ್ಬಂ ಸಾಂಗ್ ‘ಗೋಕ ಮ್ಯೂಸಿಕ್ ಇಂಡಸ್ಟ್ರಿ’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

‘ಯಾರ್ ನೀ’ ಆಲ್ಬಂ ಸಾಂಗ್ ಎಸ್.ಆರ್.ಎನ್. ನಿರ್ವಹಿಸಿದ್ದು, ಚರಣ್ ಗೋಕ ನಿರ್ದೇಶಿಸಿದ್ದಾರೆ. ನಿರ್ಮಾಪಕರಾಗಿ ಧನರಾಜ್ ಗೋಕ, ವ್ಯವಸ್ಥಾಪಕ ನಿರ್ದೇಶಕರಾಗಿ ಮುತ್ತು ಗೋಕ, ಕಲಾ ವಿಭಾಗದಲ್ಲಿ ಹರೀಶ್ ಗೋಕ ಹಾಗೂ ಛಾಯಾಗ್ರಾಹಕ ನಿರ್ದೇಶಕರಾಗಿ ಡಿಜೆ ದರ್ಶು ಕಾರ್ಯ ನಿರ್ವಹಿಸಿದ್ದಾರೆ.

ಈ ಆಲ್ಬಂ ಸಾಂಗ್ ನ ಸಂಪಾದಕ ಹಾಗೂ ಬಣ್ಣಕಾರರಾಗಿ ಪ್ರಸಾದ್ ಶೆಟ್ಟಿ, ಸಂಯೋಜಕರಾಗಿ ಸೋಮಶೇಖರ್ ಹಾಗೂ ಸಂಗೀತವನ್ನು ಚೇತನ್ ಅಲವಾನಾ ನೀಡಿದ್ದಾರೆ.

ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಹೊಸ ಪ್ರಯತ್ನದಲ್ಲಿ ಜಿಲ್ಲೆಯ ಯುವ  ಪ್ರತಿಭೆಗಳು ಸೇರಿಕೊಂಡು ಮಾಡಿರುವ ‘ಯಾರ್ ನೀ’ ಆಲ್ಬಂ ಸಾಂಗ್ ಟ್ರೀಸರ್ ಕೇಳುಗರನ್ನು‌ ಹೆಚ್ಚು ಇಂಪ್ರೆಸ್ ಮಾಡುತ್ತಿದೆ. ಕಲರ್‌ಫುಲ್ ಲೋಕೇಶನ್‌ಗಳಲ್ಲಿ ‘ಯಾರ್ ನೀ’ ಆಲ್ಬಂ ಸಾಂಗ್ ನ್ನು ಚಿತ್ರೀಕರಣ ಮಾಡಲಾಗಿದೆ. ಗೋಕ ಮ್ಯೂಸಿಕ್ ಇಂಡಸ್ಟ್ರಿ ಯೂಟ್ಯೂಬ್ ಚಾನೆಲ್ ನಲ್ಲಿ ಯಾರ್ ನೀ ಹಾಡು ವೀಕ್ಷಣೆಗೆ ಲಭ್ಯವಾಗಲಿದೆ.

ಹೊಸ ಹೊಸ ಆಲ್ಬಂ ಸಾಂಗ್ ಗಳು ಜನರ ಗಮನ ಸೆಳೆಯುವುದರ ಜೊತೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ‘ಸು ಫ್ರಮ್ ಸೋ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದ ಸುಮೇಧ್ ಬತ್ತಳಿಕೆಯಿಂದ ಪುರಂದರದಾಸರ ಕೃತಿ ಆಧಾರಿತ ‘ತುಳಸಿ’ ಎಂಬ ಭಕ್ತಿಗೀತೆ ಜನಪ್ರಿಯವಾಗುತ್ತಿದೆ. ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಬೋಲ್ಡ್ ಲುಕ್‌ನಲ್ಲಿ ಹೊಸ ಆಲ್ಬಂ ಸಾಂಗ್‌ ಕೂಡಾ ಗಮನ ಸೆಳೆಯುತ್ತಿದೆ. ಅದೇ ರೀತಿ ಇಲ್ಲೊಂದು ಹೊಸ ಪ್ರಯತ್ನಕ್ಕೆ ‘ಗೋಕ ಮ್ಯೂಸಿಕ್ ಇಂಡಸ್ಟ್ರೀ’ ತಂಡವು ತನ್ನದೇ ಆದ ಛಾಪನ್ನು ಮೂಡಿಸಲು ಪ್ರಥಮ ಹೆಜ್ಜೆ ಇಟ್ಟಿದೆ. ಇದಕ್ಕೆ ಇಲ್ಲರ ಪ್ರೋತ್ಸಾಹ ಮುಖ್ಯ ಎಂದು ಗೋಕ ಮ್ಯೂಸಿಕ್ ಇಂಡಸ್ಟ್ರಿ ತಂಡವು ಆಶಿಸಿದೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...