ಹೊನ್ನಾಳಿ ದುರ್ಗಿಗುಡಿ ಓಂ ಗಣಪತಿಗೆ 1.5 ಕೆ.ಜಿ. ಬೆಳ್ಳಿ ಕಿರೀಟ ಸಮರ್ಪಣೆ: ಬರಗಾಲದ ಹಿನ್ನೆಲೆ ಅದ್ದೂರಿತನಕ್ಕೆ ಬ್ರೇಕ್

ಹೊನ್ನಾಳಿ : ತಾಲೂಕಿನಲ್ಲಿ ಎದುರಾಗಿರುವ ಮಳೆ ಅಭಾವ ಹಾಗೂ ಬರಗಾಲದ ಪರಿಸ್ಥಿತಿಗೆ ಸ್ಪಂದಿಸಿ, ದುರ್ಗಿಗುಡಿ ಪಟ್ಟಣದ ‘ಶ್ರೀ ದುರ್ಗಮ್ಮ ದೇವಿ ಮತ್ತು ಓಂ ಗಣೇಶ ಸೇವಾ ಸಮಿತಿ’ ಆಡಳಿತ ಮಂಡಳಿಯು ಈ ಬಾರಿಯ ಗಣೇಶೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.

ಕಳೆದ 40 ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ನಡೆಸಿಕೊಂಡು ಬರುತ್ತಿರುವ ಸಮಿತಿಯು, ಸಾರ್ವಜನಿಕರ ಸಂಕಷ್ಟದ ಸಮಯದಲ್ಲಿ ಅದ್ದೂರಿತನಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತಿದ್ದ ವೈಭವೋಪೇತ ಧ್ವನಿವರ್ಧಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳನ್ನು ಈ ಬಾರಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

“₹3.5 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಕಾಣಿಕೆ” : 

ಅನಗತ್ಯ ಖರ್ಚು-ವೆಚ್ಚಗಳನ್ನು ಕಡಿತಗೊಳಿಸಿ ಉಳಿಸಿದ ಹಣ ಹಾಗೂ ಸಮಿತಿಯ ಸದಸ್ಯರ ವಂತಿಕೆಯನ್ನು ಕ್ರೋಢೀಕರಿಸಿ, ಶ್ರೀ ಗಣಪತಿಗೆ ಸುಮಾರು ₹3.5 ಲಕ್ಷಕ್ಕೂ ಹೆಚ್ಚು ಮೌಲ್ಯದ 1.5 ಕೆ.ಜಿ. ತೂಕದ ಆಕರ್ಷಕ ಬೆಳ್ಳಿ ಕಿರೀಟ, ಹಸ್ತ ಹಾಗೂ ಆಯುಧಗಳನ್ನು ಸಮರ್ಪಿಸಲಾಗಿದೆ. ಈ ಬೆಳ್ಳಿಯ ಆಭರಣಗಳನ್ನು ಸೇವಾ ಸಮಿತಿಯವರು ಪ್ರಸಿದ್ಧ ಹೊನ್ನಾಳಿ ಹಿರೇಕಲ್ಮಠದಲ್ಲಿ ವಿಶೇಷ ಪೂಜೆ ನೆರವೇರಿಸಿ, ಶ್ರದ್ಧಾಭಕ್ತಿಯಿಂದ ತಂದಿದ್ದಾರೆ.

ಸಾರ್ವಜನಿಕರಿಂದ ಶ್ಲಾಘನೆ :

ಕ್ಷಣಿಕ ಆಡಂಬರದ ಕಾರ್ಯಕ್ರಮಗಳಿಗಿಂತ ದೇವರಿಗೆ ಶಾಶ್ವತ ಆಸ್ತಿಯಾಗುವ ಹಾಗೂ ಭಕ್ತಿಯ ಸಂಕೇತವಾಗುವ ಕೊಡುಗೆ ನೀಡಿದ ದುರ್ಗಿಗುಡಿ ಯುವಕರ ಈ ಜನಪರ ನಿರ್ಧಾರಕ್ಕೆ ಪಟ್ಟಣದ ಹಿರಿಯರು, ವರ್ತಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

“ಮೂರನೇ ದಿನ ಗಣೇಶಮೂರ್ತಿ ವಿಸರ್ಜನೆ” :

ಮೂರು ದಿನಗಳ ಕಾಲ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿಗಳು ನೆರವೇರಲಿದ್ದು, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಸರಳವಾಗಿ ವಿಜೃಂಭಣೆ ಇಲ್ಲದೆ ವಿಸರ್ಜನೆ ಮಾಡಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...