ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬದ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ಶಿವಮೊಗ್ಗ ಇವರ ವತಿಯಿಂದ ಯುವಕರ ಆಶಾಕಿರಣ, ಅಹಿಂದ ವರ್ಗದ ನಾಯಕ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರ ಹುಟ್ಟು ಹಬ್ಬದ ಅಂಗವಾಗಿ  ಶಿವಮೊಗ್ಗ ಶ್ರೀ ಕೋಟೆ ಮಾರಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ » ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ, ಭಕ್ತಿ ಭಾವ ಮೆರೆದು ಪುನೀತರಾದ ಭಕ್ತರು!

ಇಂದು ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಲಡ್ಡು ವಿತರಿಸುವ ಮುಖಾಂತರ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಕೆ ರಂಗನಾಥ್ , ಸೂಡ ಸದಸ್ಯರಾದ ಎಂ.ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ಪ್ರಮುಖರಾದ ಹೆಚ್.ಪಿ.ಗಿರೀಶ್, ಬಿ.ಲೋಕೇಶ್, ಇ.ಟಿ.ನಿತಿನ್, ಎಂ.ರಾಕೇಶ್, ಕೆ.ಎಲ್.ಪವನ್, ಗುರುಪ್ರಸಾದ್, ಎಸ್.ಬಸವರಾಜ್, ಮೋಹನ್ ಸೋಮಿನಕೊಪ್ಪ, ಶಬರೀಶ್, ರಾಹಿಲ್, ಸಚಿನ್ ಈಡಿಗ, ವಿನಯ್ ಬಜಾರ್, ಸಂತೋಷ್, ಗಣೇಶ್, ಸಾಹಿಲ್, ಭವಿತ್, ಅನಿಲ್ ಹಾಗೂ ಇತರರು ಇದ್ದರು.

 

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...