ಇಂದಿನಿಂದ ಬರ ಪೀಡಿತ ಪ್ರದೇಶಗಳಿಗೆ ಬಿಜೆಪಿ ಬರ ಅಧ್ಯಯನ ತಂಡ ಭೇಟಿ

ಶಿವಮೊಗ್ಗ : ರಾಜ್ಯದಲ್ಲಿ 2026ರ ಮುಂಗಾರು ವೈಪರೀತ್ಯದಿಂದ ಮಳೆ ಕೊರತೆಯಾಗಿ ಬರಗಾಲದ ಛಾಯೆ ಆವರಿಸಿದ್ದು, ರೈತರು ಮಳೆ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿನ  ಬರ ಪೀಡಿತ ಪ್ರದೇಶಗಳಿಗೆ ಬಿಜೆಪಿ ಬರ ಅಧ್ಯಯನ ತಂಡಗಳು ಇಂದಿನಿಂದ ಪ್ರವಾಸ ಕೈಗೊಂಡಿದ್ದು, ತಂಡವು ಬರ ಪೀಡಿತ ಪ್ರದೇಶಗಳಿಗೆ ನೇರವಾಗಿ ಭೇಟಿ ನೀಡಿ, ಸಂತ್ರಸ್ತ ರೈತ ಕುಟುಂಬಗಳನ್ನು ಸಂಪರ್ಕಿಸಿ ಅವರ ಸಂಕಷ್ಟಗಳನ್ನು ಆಲಿಸಲಿದೆ.

ಇಂದಿನ ಬರ ಅಧ್ಯಯನ ತಂಡದ ಹಾಸನ ಜಿಲ್ಲೆಯ ಪ್ರವಾಸದ ವಿವರ : 

  • ಹೊಳೆನರಸೀಪುರ ತಾಲ್ಲಾಕು ಮೊಸಳೆಹೊಸಳ್ಳಿಯಲ್ಲಿ ಮಳೆ ಕೊರತೆಯಿಂದ ಒಣಗಿರುವ ಕೆರೆ ಮತ್ತು ಮೆಕ್ಕಜೋಳಕ್ಕೆ ಆವರಿಸಿರುವ ಬಿಳಿಸುಳಿ ರೋಗ ವೀಕ್ಷಿಸಿ ರೈತರೊಂದಿಗೆ ಸಮಾಲೋಚನೆ.
  • ಅರಕಲಗೂಡು ವಿಧಾನಸಭಾ ಕ್ಷೇತ್ರದ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯಲ್ಲಿನ ದೊಡ್ಡಕಾಡನೂರು, ಚಿಕ್ಕ ಕಾಡನೂರು ಕೆರೆ ಪ್ರದೇಶ ವೀಕ್ಷಣೆ.
  • ಭಂಟರತಳಾಲಿನಲ್ಲಿ ಮೇವಿಲ್ಲದೇ ಪರಿತಪಿಸುತ್ತಿರುವ ಜಾನುವಾರುಗಳ ವೀಕ್ಷಣೆ.
  • ಅಷ್ಟೇಚಾಕನಹಳ್ಳಿಯ ಬರಪೀಡಿತ ಪ್ರದೇಶಗಳ ವೀಕ್ಷಣೆ.
  • ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಟ್ಟಾಯ ಹೋಬಳಿಯ ಮಳೆ ಕೊರತೆಯಿಂದ ಬರಿದಾಗುತ್ತಿರುವ ಗೊರೂರು ಹೇಮಾವತಿ ಜಲಾಶಯ ವೀಕ್ಷಣೆ.
  • ಶಂಕರನಹಳ್ಳಿ ಮಳೆ ಕೊರತೆಯಿಂದ ಒಣಗಿರುವ ರೈತರ ಹೊಲಗಳ ವೀಕ್ಷಣೆ.

ನಂತರ ಅಲ್ಲಿಯೇ ಹಾಸನ ನಗರ ನಿರೀಕ್ಷಣಾಲಯದಲ್ಲಿ (IB) ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಬರ ಅಧ್ಯಾಯನ ತಂಡವು ಹಾಸನದಿಂದ ತರೀಕೆರೆ ಮಂಡಲದ ಚನ್ನಾಪುರ ಗ್ರಾಮಕ್ಕೆ ಭೇಟಿ ನೀಡಿ, ಮಹೇಶ್ವರಪ್ಪ ಚನ್ನಾಪುರ ಇವರ ತೋಟಕ್ಕೆ ಭೇಟಿ ನೀಡಿ, ಚನ್ನಾಪುರ ದೊಡ್ಡ ಕೆರೆ ವೀಕ್ಷಣೆ ಮಾಡಲಿದ್ದಾರೆ. ಸಂಜೆ ಹೋಟೆಲ್ ಬೃಂದಾವನದಲ್ಲಿ ಪತ್ರಿಕಾಗೋಷ್ಠಿ ಮಾಡಲಾಗುವುದು ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ.

ಈ ಬರ ಅಧ್ಯಯನ ತಂಡದಲ್ಲಿ ತೀರ್ಥಹಳ್ಳಿ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಕಾರ್ಕಳ ಶಾಸಕರು ಹಾಗೂ ಮಾಜಿ ಇಂಧನ ಸಚಿವರಾದ ವಿ. ಸುನೀಲ್ ಕುಮಾರ್, ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಕಾರ್ಯದರ್ಶಿಯಾದ ಡಿ.ಎಸ್ ಅರುಣ್, ಹಾಸನ ಜಿಲ್ಲೆ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ, ಸಕಲೇಶಪುರ-ಆಲೂರು-ಕಟ್ಟಾಯದ ಶಾಸಕರು ಹಾಗೂ ಎಸ್.ಸಿ. ಮೋರ್ಚಾದ ರಾಜ್ಯಾಧ್ಯಕ್ಷರಾದ ಸಿಮೆಂಟ್ ಮಂಜುನಾಥ್, ಬೇಲೂರು ಶಾಸಕರಾದ ಹೆಚ್.ಕೆ.ಸುರೇಶ್, ಹಾಸನ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾದ ನಾರಾಯಣ ಗೌಡ ಸೇರಿದಂತೆ ಇವರ ನಿಯೋಗದೊಂದಿಗೆ ಬರ ಅಧ್ಯಾಯನ ತಂಡದ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲೆಯ ಪ್ರಮುಖರು ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...