ಭಕ್ತಿ ಸಂಭ್ರಮಕ್ಕೆ ಭವ್ಯ ಸ್ವಾಗತ: ನ್ಯೂಮಂಡ್ಲಿಯಲ್ಲಿ ಕಂಗೊಳಿಸಲಿವೆ ಮತ್ತೆರೆಡು ಮಹಾದ್ವಾರಗಳು

ಶಿವಮೊಗ್ಗ : ಗಣೇಶೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಶಿವಮೊಗ್ಗದ ನ್ಯೂಮಂಡ್ಲಿ ಪ್ರದೇಶದಲ್ಲಿ ಮತ್ತೆರಡು ಆಕರ್ಷಕ ಮಹಾದ್ವಾರಗಳ ನಿರ್ಮಾಣ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ.

ಈಗಾಗಲೇ ಗಣೇಶೋತ್ಸವದ ಅಂಗವಾಗಿ ಒಂದು ಮಹಾದ್ವಾರ ನಿರ್ಮಿಸಲಾಗಿದ್ದು, ಇದೀಗ ಇನ್ನೂ ಎರಡು ಮಹಾದ್ವಾರಗಳನ್ನು ನಿರ್ಮಿಸಲು ಸ್ಥಳದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಈಗಾಗಲೇ ಒಂದು ಮಹಾದ್ವಾರ ನಿರ್ಮಾಣ ಮಾಡಲಾಗಿದ್ದು, ಇಂದು ಇನ್ನೊಂದು ಮಹಾದ್ವಾರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಾಗೂ ನಾಳೆ ಮತ್ತೊಂದು ಮಹಾದ್ವಾರ ನಿರ್ಮಾಣ ಮಾಡಲಾಗುವುದು. ವಿಶೇಷ ವಿನ್ಯಾಸ ಹಾಗೂ ಅಲಂಕಾರದೊಂದಿಗೆ ಮಹಾದ್ವಾರಗಳನ್ನು ನಿರ್ಮಿಸಲು ಭರದಿಂದ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಗಣೇಶೋತ್ಸವದ ಸಂದರ್ಭದಲ್ಲಿ ನ್ಯೂಮಂಡ್ಲಿ ಪ್ರದೇಶದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಮಹಾದ್ವಾರಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ನಿರೀಕ್ಷೆಯಿದೆ. ಸ್ಥಳೀಯರು ಹಾಗೂ ಭಕ್ತರಲ್ಲಿ ಮಹಾದ್ವಾರಗಳ ನಿರ್ಮಾಣದ ಬಗ್ಗೆ ಕುತೂಹಲ ಮೂಡಿದೆ.

ಗಣೇಶೋತ್ಸವದ ದಿನಗಳಲ್ಲಿ ಸಾರ್ವಜನಿಕರ ಗಮನ ಸೆಳೆಯುವ ರೀತಿಯಲ್ಲಿ ಮಹಾದ್ವಾರಗಳನ್ನು ಅಲಂಕರಿಸುವ ಯೋಜನೆ ಇದ್ದು, ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ನ್ಯೂಮಂಡ್ಲಿ ಪ್ರದೇಶ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳಲಿದೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...