ಮರ ಕಡಿದು ಓಮಿನಿಗೆ ತುಂಬುವಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ, ಆರೋಪಿ ಬಂಧನ

ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಚೋರಡಿ ವಲಯ ಅರಣ್ಯ ವ್ಯಾಪ್ತಿಯ ಗಿಳಾಲಗುಂಡಿ ಅರಣ್ಯ ಪ್ರದೇಶದಲ್ಲಿ ಸಾಗುವಾನಿ ಮರ ಕಡಿದು ಓಮಿನಿ ವಾಹನಕ್ಕೆ ತುಂಬಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ » ಪಟಗುಪ್ಪ ಸೇತುವೆ ಬಳಿಯ ಗೋ ಕೃತ್ಯದ ಪ್ರಕರಣ, ಹಾನಗಲ್‌ನ ನಾಲ್ವರು ಆರೋಪಿಗಳು ಅರೆಸ್ಟ್‌

ಆನಂದಪುರಂ ಸಮೀಪದ ಸರಗುಂದ ಗ್ರಾಮದ ಸುಧನ್ (24) ಬಂಧಿತ ಆರೋಪಿ. ಈತ ಗಿಳಾಲಗುಂಡಿ ಅರಣ್ಯದಲ್ಲಿ ಸಾಗುವಾನಿ ಮರವನ್ನು ಕಡಿದು, 6 ತುಂಡುಗಳನ್ನಾಗಿ ಕತ್ತರಿಸಿ ಓಮಿನಿ ವಾಹನದಲ್ಲಿ ತುಂಬುತ್ತಿದ್ದಾಗ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಕಳವಿಗೆ ಬಳಸಿದ್ದ ಓಮಿನಿ ವಾಹನ, ಮರ ಕತ್ತರಿಸುವ ಮಿಷನ್ ಗರಗಸ ಹಾಗೂ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚೋರಡಿ ವಲಯ ಅರಣ್ಯಾಧಿಕಾರಿ ಗೀತಾ ವಿಠಲ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಒ ಚೇತನ್ ಕುಮಾರ್, ಅಶೋಕ್ ಮತ್ತು ಬೀಟ್ ಫಾರೆಸ್ಟ್ ಅಧಿಕಾರಿಗಳಾದ ಪ್ರದೀಶ್, ಅಸ್ರಾರ್ ಖಾನ್, ಭೋಜಪ್ಪ ಮತ್ತು ಪ್ರವೀಣ್ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ » ಶಿಕಾರಿಪುರಕ್ಕೆ ಶ್ರೀಲಂಕಾ ಸಂಸದರ ನಿಯೋಗ ಭೇಟಿ, ಬಿ.ವೈ.ರಾಘವೇಂದ್ರ ಜೊತೆ ಸುದೀರ್ಘ ಚರ್ಚೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...