ಮೇ 16 ಮತ್ತು 17 ರಂದು ಶಿವಮೊಗ್ಗದಲ್ಲಿ ಐಪಿಎಲ್ ಪ್ರಿಯರಿಗಾಗಿ ‘ಫ್ಯಾನ್ ಪಾರ್ಕ್’, ಬೃಹತ್ ಪರದೆಯಲ್ಲಿ ಐಪಿಎಲ್ ಪಂದ್ಯ ವೀಕ್ಷಣೆ!

ಶಿವಮೊಗ್ಗ : ಮೈದಾನದಲ್ಲಿ ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸುವಂತಹ (ಫ್ಯಾನ್ ಪಾರ್ಕ್) ಅನುಭವ ನೀಡುವ ಐಪಿಎಲ್ ‘ಫ್ಯಾನ್ ಪಾರ್ಕ್‌’ನ್ನು ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಮೇ 16 ಮತ್ತು 17 ರಂದು ಸಂಜೆ 6.30 ಕ್ಕೆ ಆಯೋಜಿಸಲಾಗಿದೆ ಎಂದು ಐಪಿಎಲ್ ಶಿವಮೊಗ್ಗ ವಿಭಾಗದ ಸಂಚಾಲಕ ನಾಗೇಂದ್ರ ಪಂಡಿತ ಹೇಳಿದರು.

ಬಹಳಷ್ಟು ಜನರು ಕ್ರಿಕೆಟ್ ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅವರಿಗೆಲ್ಲಾ ಕ್ರೀಡಾಂಗಣದಲ್ಲೇ ಕುಳಿತು ನೋಡಿದ ಅನುಭವವಾಗುವಂತೆ ಈ ಫ್ಯಾನ್ ಪಾರ್ಕ್‌ನ್ನು ಸಿದ್ಧಪಡಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ದೊಡ್ಡ ಪರದೆಗಳಲ್ಲಿ ತೋರಿಸುವುದರಿಂದ ಕ್ರೀಡಾಂಗಣದ ಅನುಭವವೇ ನೋಡುಗರಿಗೆ ದೊರಕುತ್ತದೆ.

– ನಾಗೇಂದ್ರ ಪಂಡಿತ, ಐಪಿಎಲ್ ಶಿವಮೊಗ್ಗ ವಿಭಾಗದ ಸಂಚಾಲಕರು


ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಇಎಸ್ ಮೈದಾನದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಗಾಗಿ ಸಿದ್ಧತೆ ಮಾಡಲಾಗಿದೆ. ಮೇ 16 ರ ಸಂಜೆ ನಡೆಯುವ ಐಪಿಎಲ್ ಮ್ಯಾಚ್‌ಗಳನ್ನು ದೊಡ್ಡ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತಿದೆ. ಸುಮಾರು 5 ರಿಂದ 10 ಸಾವಿರ ನೋಡುಗರು ಇಲ್ಲಿಗೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಇಲ್ಲಿ ಆಸನದ ವ್ಯವಸ್ಥೆ ಇರುವುದಿಲ್ಲ. ಜಮಖಾನದಲ್ಲಿ ಕುಳಿತುಕೊಂಡು ಅಥವಾ ಜನ ನಿಂತುಕೊಂಡೇ ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನು ಆನಂದಿಸಬೇಕು. ಕ್ರಿಕೆಟ್ ವೀಕ್ಷಣೆ ಜೊತೆಗೆ ಆಹಾರ ಮಳಿಗೆ, ಗೇಮ್ ಜೋನ್ ಇತ್ಯಾದಿಗಳು ಇರುತ್ತವೆ. ಈಗಾಗಲೇ ಹಲವು ನಗರಗಳಲ್ಲಿ ಈ ರೀತಿಯ ಆಯೋಜನೆ ಮಾಡಲಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಸಾಕಷ್ಟು ಮೋಜು, ಮಸ್ತಿ ಕೂಡಾ ಇರುತ್ತದೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರು ನೋಡುವಂತೆ ಇಲ್ಲಿಯೂ ಕೂಡಾ ಸಿಳ್ಳೆ, ಪ್ರೋತ್ಸಾಹ, ಮುಖಕ್ಕೆ ಪೇಂಟಿಂಗ್ ಹಚ್ಚಿಕೊಂಡವರು, ಘೋಷಣೆಗಳು, ಸಾಹಸಮಯ ಸ್ಟಂಟ್‌ಗಳು ಎಲ್ಲವೂ ಇರುತ್ತವೆ. ಅಲ್ಲದೆ, ಫ್ಯಾನ್ ಪಾರ್ಕ್‌ನ ಅಭಿಮಾನಿಗಳಿಗೆ ಹಲವು ಕೊಡುಗೆಗಳು ಕೂಡಾ ಇರುತ್ತದೆ. ಲಕ್ಕಿ ಡ್ರಾ ಕೂಡಾ ಇರುತ್ತದೆ. ಇದೊಂದು ಅದ್ಭುತದ ಕ್ಷಣವಾಗಿದ್ದು, ಶಿವಮೊಗ್ಗದ ಕ್ರಿಕೆಟ್ ಪ್ರೇಮಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಕೋರಿದರು.

ಈ ಫ್ಯಾನ್ ಪಾರ್ಕ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಶಿವಮೊಗ್ಗ ಘಟಕ, ಟಾಟಾ ಐಪಿಎಲ್‌ನವರ ಸಹಕಾರದಲ್ಲಿ ನಡೆಯುತ್ತಿದೆ. ಆ ದಿನ ಕೆಕೆಆರ್ ಮತ್ತು ಜಿಟಿ ನಡುವೆ ಹಾಗೂ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ನಡುವೆ ಹಾಗೂ ಡೆಲ್ಲಿ ಕ್ಯಾಪ್ಟನ್ಸ್ ಮತ್ತು ಆರ್‌ಆರ್ ನಡುವೆ ಪಂದ್ಯಗಳು ನಡೆಯಲಿದ್ದು, ಅವುಗಳ ನೇರ ಪ್ರಸಾರ ತೋರಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಬಿಸಿಯ ಮಾಧ್ಯಮ ಪ್ರಮುಖ್ ರಾಘವೇಂದ್ರ, ಯೋಗೇಂದ್ರ ಇದ್ದರು.

ಇದನ್ನೂ ಓದಿ » ಮೇ 17 ಕ್ಕೆ ಅಡ್ಡಪಲ್ಲಕ್ಕಿ ಮಹೋತ್ಸವ, ಬಿಎಸ್‌ವೈ ಕೃತಜ್ಞತಾ ಸಮಾರಂಭಕ್ಕೆ ಸಕಲ ಸಿದ್ಧತೆ, ಹೇಗಿರಲಿದೆ ಕಾರ್ಯಕ್ರಮ?

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...