ಜು.29 ರಿಂದ ಸೆ.26 ರವರೆಗೆ ಪರಾಭವ ನಾಮ ಸಂವತ್ಸರದ ‘ಚಾತುರ್ಮಾಸ್ಯ ವ್ರತ’ ಆಯೋಜನೆ

ಶಿವಮೊಗ್ಗ : ದೈವಜ್ಞ ಬ್ರಾಹ್ಮಣ ಸಮಾಜ (ರಿ.) ವತಿಯಿಂದ ಚಾತುರ್ಮಾಸ್ಯ ವ್ರತೋತ್ಸವ ಸಮಿತಿ – 2026 “ಪರಾಭವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ”ವನ್ನು ಜು.29 ರಿಂದ ಸೆ.26 ರವರೆಗೆ ದೈವಜ್ಞ ಬ್ರಾಹ್ಮಣ ಸಭಾಭವನ, ಇಕ್ಕೇರಿ ರಸ್ತೆ, ಶಿವಪ್ಪನಾಯಕ ನಗರ, ಸಾಗರ ತಾಲ್ಲೂಕು, ಶಿವಮೊಗ್ಗ ಇಲ್ಲಿ ಆಯೋಜಿಸಿದೆ.

ಕಾರ್ಯಕ್ರಮದ ವಿವರ :

  • ಜು.28 ರ ಮಂಗಳವಾರದಂದು ಸಂಜೆ 6.30 ಗಂಟೆಗೆ ಶ್ರೀ ಜಯಚಾಮರಾಜೇಂದ್ರ ವೃತ್ತ (ಶಾರದಾಂಬಾ ದೇವಸ್ಥಾನ) ದಿಂದ ಶ್ರೀ ಶ್ರೀಗಳವರನ್ನು ದೈವಜ್ಞ ಬ್ರಾಹ್ಮಣ ಸಭಾಭವನಕ್ಕೆ ಸ್ವಾಗತಿಸಾಲಾಗುವುದು.
  • ಜು.29 ರ ಬುಧವಾರದಂದು ಗುರುಪೂರ್ಣಿಮಾ ಕಾರ್ಯಕ್ರಮಾ ಬೆಳಿಗ್ಗೆ 10.00 ಗಂಟೆಯಿಂದ ವ್ಯಾಸಪೂಜೆ ಪ್ರಾರಂಭವಾಗುವುದು. ಹಾಗೂ ಚಾತುರ್ಮಾಸ್ಯ ವ್ರತೋತ್ಸವ ಸಮಿತಿಯವರಿಂದ ‘ಪಾದುಕಾ ಪೂಜೆ’ ಸಭಾ ಕಾರ್ಯಕ್ರಮ. ನಂತರ ಶ್ರೀಗಳವರಿಂದ ಆಶೀರ್ವಚನ ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ಇರುತ್ತದೆ.
  • ಜು.30 ರ ಗುರುವಾರದಿಂದ ಪ್ರತಿನಿತ್ಯ ಬೆಳಿಗ್ಗೆ 10.30 ರಿಂದ ಸಾಮೂಹಿಕ ಪಾದುಕಾ ಪೂಜೆ, ಶ್ರೀಗಳವರ ದರ್ಶನ, ಮಧ್ಯಾಹ್ನ 12.30 ಕ್ಕೆ ಶ್ರೀ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಮಹಾಪ್ರಸಾದ. ಹಾಗೂ ಸಂಜೆ 6.00 ಗಂಟೆಯಿಂದ 7.30 ರವರಿಗೆ ಭಜನೆ, ಕೀರ್ತನೆ, ಲಲಿತಾ ಸಹಸ್ರನಾಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ರಾತ್ರಿ 7.30 ಕ್ಕೆ ಶ್ರೀ ಶ್ರೀಗಳ ಪಟ್ಟದ ದೇವರ ಪೂಜೆ ಆರಂಭವಾಗುವುದು. ಮಹಾಮಂಗಳಾರತಿ, ಶ್ರೀಗಳವರಿಂದ ಕಥೋಪದೇಶ, ತೀರ್ಥಪ್ರಸಾದ, ಮಹಾಪ್ರಸಾದ ಇರುತ್ತದೆ.
  • ಸೆ.29 ರ ಮಂಗಳವಾರದಂದು ಬೆಳಿಗ್ಗೆ 8.00 ಕ್ಕೆ ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ ಇರುತ್ತದೆ.

ವಿಶೇಷ ಸೂಚನೆ : ಶ್ರೀ ಶ್ರೀಗಳವರಿಂದ ವ್ಯಾಸಾಕ್ಷತೆಯನ್ನು ಪಡೆಯಲು ಅಪೇಕ್ಷಿಸುವವರು ಪಾದುಕಾ ಪೂಜೆ ಹಾಗೂ ಸಾಯಂ ಪೂಜಾ ಸಂದರ್ಭದಲ್ಲಿ ಮಾತ್ರ ಸ್ವೀಕರಿಸಬಹುದು.

ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಮತ್ತು ತತ್ ಕರಕಮಲ ಸಂಜಾತ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ವರದಾ ನದಿಯ ತಟದಲ್ಲಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ಅವಪ್ಪನಾಯಕ ನಗರದಲ್ಲಿರುವ ನೂತನ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ತಮ್ಮ ಚಾತುರ್ಮಾಸ್ಯ ವ್ರತಾಚರಣೆಗೆ ನಮ್ಮ ಅತ್ಮೀಯ ಆಹ್ವಾನವನ್ನು ಮನಸಾರೆ ಒಪ್ಪಿ ಶ್ರೀ ದೇವಿಯ ಪ್ರೇರಣೆಯಿಂದ ಮಾನ್ಯ ಮಾಡಿ ಸಮ್ಮತಿಸಿರುವುದು ನಮ್ಮ ನಿಮ್ಮೆಲ್ಲರ ಪರಮ ಸೌಭಾಗ್ಯ.

ಮಠಾಧೀಶರು, ಸಾಧು ಸಂತರು, ಸನಾತನಿಗಳು ನಮ್ಮ ಭಾರತ ದೇಶದ ಸುಖ ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಆಷಾಢ ಹುಣ್ಣಿಮೆಯ ದಿನದಿಂದ ಎರಡು ಅಂಗಳುಗಳ ಕಾಲ ಆಚರಿಸುವ ಈ ವ್ರತೋತ್ಸವದಲ್ಲಿ ತನು, ಮನ, ಧನ ಸಹಕಾರ ನೀಡಿ ಪಾಲ್ಗೊಳ್ಳುವುದು ಜಗನ್ಮಾತೆ ಶ್ರೀ ಜ್ಞಾನೇಶ್ವರೀ ದೇವಿಯು ನಮಗೆ ನೀಡಿದ ಮಹದವಕಾಶವಾಗಿದೆ. ನಮ್ಮ ಈ ಶ್ರದ್ಧೆ ಮತ್ತು ಭಕ್ತಿಪೂರ್ವಕ ಕಾರ್ಯಕ್ರಮಗಳಿಗೆ ಸಮಸ್ತ ಹಮಾಜ ಬಾಂಧವರು ಮತ್ತು ಭಕ್ತಾದಿಗಳು ಪೂರ್ಣ ಪ್ರಮಾಣದಲ್ಲಿ ಭಾಗಿಗಳಾಗಿ ಪರಿಪೂರ್ಣ ಹಹಕಾರ ನೀಡಿ ವ್ಯಾಸಾಕ್ಷತೆಯನ್ನು ಪಡೆದು, ಈ ಶುಭಾವಸರದಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿ, ಶ್ರೀ ಜ್ಞಾನೇಶ್ವರೀ ಜೀವಿಯ ಮತ್ತು ಪರಮಪೂಜ್ಯ ಶ್ರೀ ಶ್ರೀಗಳವರ ಕೃಪೆಗೆ ಪಾತ್ರರಾಗಬೇಕೆಂದು 41ನೇ ಚಾತುರ್ಮಾಸ್ಯ ವ್ರತೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...