
ಶಿವಮೊಗ್ಗ : ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ಭಾರಿ ಮಳೆ ಹಾಗೂ ವಿಪರೀತ ಶೀತ ಗಾಳಿ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಸಾಗರ ಹಾಗೂ ತೀರ್ಥಹಳ್ಳಿ ತಾಲೂಕುಗಳಿಗೆ ಆಯಾ ತಾಲೂಕಿನ ತಹಶೀಲ್ದಾರ್ ಗಳು ಸೋಮವಾರ (ಆ.03 ರಂದು) ರಜೆ ಘೋಷಿಸಿದ್ದಾರೆ.
ಇದನ್ನೂ ಓದಿ » ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅರ್ಥಪೂರ್ಣ ಪತ್ರಿಕಾ ದಿನಾಚರಣೆ, ಯಾರೆಲ್ಲಾ ಗಣ್ಯರು, ಏನಿಲ್ಲಾ ಹೇಳಿದರು?
ಸಾಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ (ಪಿಯುಸಿ), ಡಿಪ್ಲೋಮಾ ಹಾಗೂ ಐಟಿಐ ಕಾಲೇಜುಗಳಿಗೆ ಸಾಗರ ತಹಶೀಲ್ದಾರ್ ಆರ್.ಪ್ರತಿಭಾ ಹಾಗೂ ತೀರ್ಥಹಳ್ಳಿ ತಹಶೀಲ್ದಾರ್ ರಂಜಿತ್ ಅವರಿಂದ ರಜೆ ಘೋಷಣೆಯಾಗಿದ್ದು, ತಾಲೂಕಿನಲ್ಲಿ ಇಂದು ಸುರಿದ ವ್ಯಾಪಕ ಹಾಗೂ ಭಾರಿ ಮಳೆ ಹಿನ್ನೆಲೆ ನಾಳೆಯೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಮೇರೆಗೆ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ.
ರೆಡ್ ಅಲರ್ಟ್ ಸೂಚನೆ : ಹಳ್ಳ-ಕೊಳ್ಳ, ನದಿ ತೀರಕ್ಕೆ ಸಾರ್ವಜನಿಕರು ಹಾಗೂ ಮಕ್ಕಳು ಹೋಗದಂತೆ ಕಟ್ಟುನಿಟ್ಟಿನ ಸೂಚನೆ!
ಇದನ್ನೂ ಓದಿ » ರೂ.1.10 ಲಕ್ಷ ಮೌಲ್ಯದ ಕೇಬಲ್ ಕದ್ದಿದ್ದ ಖದೀಮರು ಪೊಲೀಸರ ಬಲೆಗೆ