
ಶಿವಮೊಗ್ಗ : ದಿ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (IIF) ಶಿವಮೊಗ್ಗ ಉಪವಲಯದ ವತಿಯಿಂದ 77ನೇ ರಾಷ್ಟ್ರೀಯ ಫೌಂಡ್ರಿ ದಿನಾಚರಣೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಗಸ್ಟ್ 22ರ ಶನಿವಾರದಂದು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ » ಹಬ್ಬಗಳು ನಮ್ಮ ಭವ್ಯ ಸಂಸ್ಕೃತಿಯ ಪ್ರತಿಬಿಂಬ: ಸಿ.ಎಸ್.ಷಡಾಕ್ಷರಿ
ನಗರದ ಗೋಪಿ ವೃತ್ತದ ಬಳಿ ಇರುವ, ಕಸ್ತೂರಬಾ ಕಾಲೇಜು ಎದುರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಜೆ 5:30 ರಿಂದ ರಾತ್ರಿ 9:00 ಗಂಟೆಯವರೆಗೆ ಈ ಸಮಾರಂಭ ಜರುಗಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ನ ರಿಜಿಸ್ಟ್ರಾರ್ ಆದ ಡಾ. ನಾಗರಾಜ ಆರ್. ಅವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಫೌಂಡ್ರಿ ಉದ್ಯಮಿಗಳಾದ ಟೆಕ್ನೋ ರಿಂಗ್ಸ್ ಪಾಲುದಾರರಾದ ಶ್ರೀ ಶಶಿಧರ ಬಿ. ಎಸ್. ಮತ್ತು ಪ್ರಗತಿ ಸ್ಟೀಲ್ ಕಾಸ್ಟಿಂಗ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುರೇಂದ್ರ ಎನ್. ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ವಿವಿಧ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ : ಉತ್ತಮ ಪ್ರಾಯೋಗಿಕ ಫೌಂಡ್ರಿಮನ್ ಪ್ರಶಸ್ತಿಯನ್ನು ಶ್ರೀ ರಾಜಪ್ಪ ಎ. (ಶಾಂತಲಾ ಸ್ಫೆರೋಕಾಸ್ಟ್) ಅವರಿಗೂ ಹಾಗೂ ಅತ್ಯುತ್ತಮ ಕುಶಲ ಕಾರ್ಮಿಕ ಪ್ರಶಸ್ತಿಯನ್ನು ಶ್ರೀ ಉಮೇಶ್ ಎಂ. ಕೆ. (ಮಲ್ನಾಡ್ ಅಲಾಯ್ ಕಾಸ್ಟಿಂಗ್ಸ್) ಅವರಿಗೂ ನೀಡಿ ಗೌರವಿಸಲಾಗುವುದು.ಇದೇ ವೇದಿಕೆಯಲ್ಲಿ ಕಾಲೇಜು ಟಾಪರ್ಗಳಿಗೆ ನೀಡಲಾಗುವ “ಭೂಪಾಲಂ ಶರತ್ ವಿದ್ಯಾ ಪುರಸ್ಕಾರ”ವನ್ನು ಕುಮಾರಿ ಅನ್ವಿತಾ ಜೆ. ಸಿ. (JNNCE) ಮತ್ತು ಕುಮಾರಿ ರೇಖಾ ಜೆ. (PESITM) ಅವರಿಗೆ ಪ್ರದಾನ ಮಾಡಲಾಗುವುದು. ಇದರೊಂದಿಗೆ ಇತ್ತೀಚೆಗೆ ನಡೆದ ರಸಪ್ರಶ್ನೆ (Quiz) ಹಾಗೂ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
ಸಾಂಸ್ಕೃತಿಕ ರಂಜನೆ : ಕಾರ್ಯಕ್ರಮದ ಅಂಗವಾಗಿ ಸಂಜೆ 5:45 ರಿಂದ 6:45 ರವರೆಗೆ ಅಪೂರ್ವ ಮ್ಯೂಸಿಕ್ ತಂಡದ ಶ್ರೀ ರವಿ ಭಟ್ ಮತ್ತು ತಂಡದವರಿಂದ ಸುಗಮ ಸಂಗೀತ ಹಾಗೂ ಕುಟುಂಬದವರಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಸಮಾರಂಭಕ್ಕೆ ಫೌಂಡ್ರಿ ಉದ್ಯಮದ ಗಣ್ಯರು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ IIF ಶಿವಮೊಗ್ಗ ಶಾಖೆಯ ಅಧ್ಯಕ್ಷರಾದ ಮಹಾವೀರ್ ಜೈನ್, ಉಪಾಧ್ಯಕ್ಷರಾದ ಅರುಣ್ ಎಂ.ಎಸ್., ಗೌರವ ಕಾರ್ಯದರ್ಶಿ ಪ್ರದೀಪ್ ರಾಮಚಂದ್ರ ಹಾಗೂ ಗೌರವ ಖಜಾಂಚಿ ಆನಂದ್ ಕೋಟಿ ಹೆಚ್.ಆರ್. ಪ್ರಕಟಣೆಯಲ್ಲಿ ಕೋರಿದ್ದಾರೆ.