
ಶಿವಮೊಗ್ಗ : ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ರಿವರ್ ಮೊಬಿಲಿಟಿಯು ಶಿವಮೊಗ್ಗದಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. MAG ಎಂಟರ್ಪ್ರೈಸಸ್ ನ ಸಹಭಾಗಿತ್ವದಲ್ಲಿ ಪ್ರಾರಂಭವಾದ ರಿವರ್ ಸ್ಟೋರ್ ಅನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನವರು ಇಂದು ಉದ್ಘಾಟಿಸಿದರು.

ಕರ್ನಾಟಕ ರಾಜ್ಯದ ಹೆಮ್ಮೆಯ ರಿವರ್ ವಾಹನ ಇಂದು ಇಡೀ ದೇಶಕ್ಕೆ ಕೊಡುಗೆಯನ್ನು ನೀಡುತ್ತಿದೆ. ರಿವರ್ ಶೋ ರೂಂ ದೇಶದ 11 ರಾಜ್ಯದಲ್ಲಿ ಆರಂಭವಾಗಿದೆ. ಕರ್ನಾಟಕ ರಾಜ್ಯದಲ್ಲಿ 17 ಜಿಲ್ಲೆಗಳಲ್ಲಿ ಈ ಶೋ ರೂಂ ಆರಂಭವಾಗಿದೆ. ಈ ವಾಹನ ನೋಡುತ್ತಿದ್ದಂತೆ ತುಂಬಾ ಸಂತೋಷವಾಗುತ್ತದೆ. ಸುಮಾರು 06 ಬಣ್ಣಗಳಲ್ಲಿ ಈ ವಾಹನ ಇದೆ. ಬೇರೆ ವಾಹನಗಳಿಗೆ ಹೋಲಿಕೆ ಮಾಡಿದರೆ ತುಂಬಾ ಹೆಚ್ಚಿನ ಅನುಕೂಲಕರವಾಗಿದೆ. ಒಟ್ಟಾರೆ ಇದನ್ನು ಬಳಸುವ ಗ್ರಾಹಕರಿಗೆ ಇದು ಉತ್ತಮ ವಾಹನವಾಗಿದೆ. ರಿವರ್ ವಾಹನವನ್ನು ಎಲ್ಲರೂ ಬಳಸಿ, ನಿಮಗೂ ದೇಶಕ್ಕೂ ಒಳ್ಳೆಯದಾಗಲಿ.
– ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ
ನಗರದ ಬಿ.ಹೆಚ್ ರಸ್ತೆಯಲ್ಲಿ ಸ್ಥಾಪಿತ ರಿವರ್ ಸ್ಟೋರ್ʼನ ಉತ್ಪನ್ನಗಳು ಮತ್ತು ಸೇವೆಗಳು ಗ್ರಾಹಕರಿಗೆ ಸುಲಭವಾಗಿ ದಕ್ಕುವಂತೆ ಮಾಡುವ ಮೂಲಕ ಮತ್ತು ತಡೆರಹಿತ ಮಾಲೀಕತ್ವದ ಅನುಭವ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಕರ್ನಾಟಕದಾದ್ಯಂತ ನಮ್ಮ ಉಪಸ್ಥಿತಿಯನ್ನು ಬಲಪಡಿಸುವುದನ್ನು ಮುಂದುವರಿಸಲು ಉತ್ಸುಕರಾಗಿದ್ದೇವೆ.
– ಕೆ.ವಿ.ದಿನೇಶ್, ರಿವರ್ ಮೊಬಿಲಿಟಿಯ ಮಾರಾಟ ಮುಖ್ಯಸ್ಥರು
ಶಿವಮೊಗ್ಗದಲ್ಲಿ ರಿವರ್ ಶಾಖೆ ತೆರೆಯಲು ಮತ್ತು ಗ್ರಾಹಕರಿಗೆ ವಿದ್ಯುತ್ ಚಲನ ಶೀಲತೆಯ ಅನುಭವ ನೀಡಲು ಹೆಮ್ಮೆಯಿದೆ. ಇಂಡೀ ಮತ್ತು ರಿವರ್ ನ ಗ್ರಾಹಕರೇ-ಮೊದಲು ಎನ್ನುವ ತತ್ವದೊಂದಿಗೆ ನಗರದಲ್ಲಿ ಬಲವಾದ ಆಕರ್ಷಣೆ ಉಂಟು ಮಾಡುವ ವಿಶ್ವಾಸ ನಮಗಿದೆ.
– ಸೈಯದ್ ಗೌಸ್ ಪೀರ್, MAG ಎಂಟರ್ಪ್ರೈಸಸ್ ನ ವ್ಯವಸ್ಥಾಪಕ ನಿರ್ದೇಶಕರು

ಶಿವಮೊಗ್ಗದಲ್ಲಿ ನೂತನ ರಿವರ್ ಶೋ ರೂಂ :
ಶಿವಮೊಗ್ಗದಲ್ಲಿ ಮೊದಲ ಮಳಿಗೆ ತೆರೆದ ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಕರ್ನಾಟಕದಲ್ಲಿ ಶಾಖೆಯ ವಿಸ್ತರಣೆಯನ್ನು ಎಲ್ಲೆಡೆ ಪಸರಿಸಿದೆ. ನಗರದ ಬಿ.ಹೆಚ್ ರಸ್ತೆಯಲ್ಲಿರುವ ಈ ಮಳಿಗೆಯಲ್ಲಿ ಇಂಡೀ ಪರಿಕರಗಳು ಮತ್ತು ಸರಕುಗಳನ್ನು ಚಿಲ್ಲರೆ ಮಾರಾಟ ಲಭ್ಯ ಇರುತ್ತದೆ. ಈಗಾಗಲೇ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ತುಮಕೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 14 ಮಳಿಗೆಗಳನ್ನು ನಿರ್ವಹಿಸುತ್ತಿದ್ದು, ಶಿವಮೊಗ್ಗದಲ್ಲಿ ನೂತನ ಮಳಿಗೆಯ ಉದ್ಘಾಟನೆಯೊಂದಿಗೆ ರಿವರ್, ಕರ್ನಾಟಕದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದೆ. ಕಂಪನಿಯ ಒಡೆತನದ ಮಳಿಗೆಗಳು ಮತ್ತು ಡೀಲರ್ಶಿಪ್ ಪಾಲುದಾರಿಕೆಗಳ ಮೂಲಕ ಪ್ರಮುಖ ಭಾರತೀಯ ನಗರಗಳಲ್ಲಿ ಅಸ್ತಿತ್ವ ಸ್ಥಾಪಿಸುವ ರಿವರ್ ವಿಶಾಲ ರಾಷ್ಟ್ರೀಯ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿದೆ.
ಈ ಹೊಸ ಮಳಿಗೆಯು ಗ್ರಾಹಕರಿಗೆ ಪರೀಕ್ಷಾ ಸವಾರಿಗಳು, ಮಾರಾಟ, ಪರಿಕರಗಳು ಮತ್ತು ಸೇವಾ ಬೆಂಬಲವನ್ನು ಒಳಗೊಂಡ ಸಂಪೂರ್ಣ ಮಾಲೀಕತ್ವದ ಅನುಭವ ನೀಡುತ್ತದೆ. ಕಂಪನಿಯ ವ್ಯಾವಹಾರಿಕ ಪಯಣದ ಹೃದಯ ಭಾಗದಲ್ಲಿದೆ. ಕರ್ನಾಟಕ ಮತ್ತು ಶಿವಮೊಗ್ಗಕ್ಕೆ ವಿಸ್ತರಿಸುವುದು ಮುಂದಿನ ಹೆಜ್ಜೆಯಾಗಿದೆ. ರಾಜ್ಯದ ಗ್ರಾಹಕರಿಂದ ಬಂದ ಬಲವಾದ ಬೆಂಬಲವು ಇಲ್ಲಿಯವರೆಗೆ ಕಂಪನಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದೆ.
ದೈನಂದಿನ ಸವಾರರ ಅಗತ್ಯಕ್ಕಾಗಿ ವಿದ್ಯುತ್ ಚಾಲಿತ ವಾಹನ :
ಕಂಪನಿಯ ಬೆಳವಣಿಗೆಯ ಆವೇಗಕ್ಕೆ ಅನುಗುಣವಾಗಿ, ಕಳೆದ ಏಪ್ರಿಲ್ ನಲ್ಲಿ ರಿವರ್ ನ ಒಟ್ಟಾರೆ ಮಾರಾಟಕ್ಕೆ ಶೇ.26 ಕ್ಕಿಂತ ಹೆಚ್ಚಿನ ಕೊಡುಗೆಯನ್ನು ಕರ್ನಾಟಕ ನೀಡಿತು. ಭಾರತದಲ್ಲಿ ಬ್ರ್ಯಾಂಡ್ ಗೆ ಎರಡನೇ ಅತಿದೊಡ್ಡ ಇವಿ ಮಾರುಕಟ್ಟೆಯಾಗಿದೆ. ರಾಜ್ಯವು ಬ್ರ್ಯಾಂಡ್ ಗೆ ಪ್ರಮುಖ ಮಾರುಕಟ್ಟೆಯಾಗಿ ಮುಂದುವರೆದಿದೆ.
ಹೆಚ್ಚುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಪರಿಸರ ವ್ಯವಸ್ಥೆ ಬೆಂಬಲಿತ ರಿವರ್ ಇಂಡೀ, ವಾಹನದ ಉಪಯುಕ್ತತೆ-ಮೊದಲ ವಿನ್ಯಾಸ, ಬೃಹತ್ ಸಂಗ್ರಹಣೆಗೆ ಸ್ಥಳಾವಕಾಶ, ಹವಾಮಾನ ವಿಶ್ವಾಸಾರ್ಹತೆಯೊಂದಿಗೆ ಶಿವಮೊಗ್ಗದಂತಹ ನಗರಗಳಲ್ಲಿ ದೈನಂದಿನ ಸವಾರರ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿರುತ್ತದೆ.
ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಅನುಭವಕ್ಕಾಗಿ :
ಇಂಡೀ ಕಾರಿನ ಬೆಲೆ ರೂ.1,55,199 (ಎಕ್ಸ್-ಶೋರೂಂ, ಶಿವಮೊಗ್ಗ). ಗ್ರಾಹಕರು ವಾಹನದ ಪರೀಕ್ಷೆ ಮಾಡಲು ಮಳಿಗೆಗೆ ಭೇಟಿ ನೀಡಬಹುದು. ಸರಕುಗಳನ್ನು ಪರಿಶೀಲಿಸಬಹುದು ಅಥವಾ ಬುಕ್ ಮಾಡಬಹುದು. www.rideriver.com ನಲ್ಲಿ ಟೆಸ್ಟ್ ಡ್ರೈವ್ ಮಾಡಲು ಬುಕ್ ಮಾಡಬಹುದು ಅಥವಾ ಖರೀದಿಗಳನ್ನು ಮಾಡಬಹುದು.
ರಿವರ್ ಶೋ ರೂಂ ವಿಳಾಸ :
ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿ ಅರವಿಂದ್ ಮೋಟಾರ್ಸ್ ಎದುರು ಕರ್ನಾಟಕ – 577201 ರಲ್ಲಿರುವ ಎಂಬಲ್ಲಿ ರಿವರ್ ಸ್ಟೋರ್ ಮಳಿಗೆ ಇದೆ.
