ನೀವೂ ಸಂಚಾರ ನಿಯಮ ಉಲ್ಲಂಘಿಸಿದ್ದಾರಾ? ಈದೀಗ ಶೇ.50 ರಷ್ಟು ದಂಡ ಪಾವತಿ ರಿಯಾಯಿತಿ ನಿಮಗಾಗಿ!

ಶಿವಮೊಗ್ಗ : ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಶೇ.50 ರಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರವು ಸಾರ್ವಜನಿಕರಿಗೆ ಸುವರ್ಣಾವಕಾಶ ಕಲ್ಪಿಸಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳ್ಕರ್ ತಿಳಿಸಿದ್ದಾರೆ.

ಈ ರಿಯಾಯಿತಿಯು ನಿರ್ದಿಷ್ಟ ಅವಧಿಯ ಪ್ರಕರಣಗಳಿಗೆ ಮಾತ್ರ ಅನ್ವಯಿಸಲಿದೆ. 1991 ರಿಂದ 2022 ರ ಒಳಗಾಗಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ಮಾತ್ರ ಈ 50% ದಂಡ ಪಾವತಿ ರಿಯಾಯಿತಿ ಅನ್ವಯವಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಬಾಕಿ ಪ್ರಕರಣಗಳು : ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸದ್ಯ ಈ ಅವಧಿಗೆ ಸಂಬಂಧಿಸಿದ ಒಟ್ಟು 790 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.

ದಂಡ ಪಾವತಿಯ ಅವಧಿ: ಅರ್ಹ ವಾಹನ ಮಾಲೀಕರು ದಿನಾಂಕ: 21.06.2026 ರಿಂದ 10.07.2026 ರೊಳಗೆ ಈ ರಿಯಾಯಿತಿಯನ್ನು ಬಳಸಿಕೊಂಡು ದಂಡ ಪಾವತಿಸಿ, ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬಹುದಾಗಿದೆ.

ವಾಹನ ಮಾಲೀಕರು ಈ ನಿಗದಿತ ಅವಧಿಯೊಳಗೆ ರಿಯಾಯಿತಿಯ ಲಾಭವನ್ನು ಪಡೆದುಕೊಂಡು ಸಹಕರಿಸಬೇಕಾಗಿ ಅವರು ಕೋರಿದ್ದಾರೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...