ಕೃತಕ ಬುದ್ಧಿಮತ್ತೆಯ ಕಲಿಕೆ ಎಲ್ಲರಿಗೂ ಅನಿವಾರ್ಯ: ಎನ್.ಗೋಪಿನಾಥ್

ಶಿವಮೊಗ್ಗ : ಕೃತಕ ಬುದ್ಧಿಮತ್ತೆಯ ಬಳಕೆ ಕಲಿಯುವಿಕೆ ಇಂದಿನ ದಿನಮಾನದಲ್ಲಿ ಅನಿವಾರ್ಯತೆಯಾಗಿದ್ದು, ಕೃತಕ ಬುದ್ದಿಮತ್ತೆಯ ಬಳಕೆ ನೀವು ಕಲಿತು ವಿದ್ಯಾರ್ಥಿಗಳಿಗೆ ಕಲಿಸಿ ಎಂದು ರೋಟರಿ ಕ್ಲಬ್ ಶಿವಮೊಗ್ಗಡ್ ಅಧ್ಯಕ್ಷರಾದ ಎನ್.ಗೋಪಿನಾಥ್ ನುಡಿದರು.

ರೋಟರಿ ಕ್ಲಬ್ ಶಿವಮೊಗ್ಗ ಪಿಯುಸಿ ಶಿಕ್ಷಕರಿಗಾಗಿ ನಗರದ ಹೆಚ್.ಎಸ್.ರುದ್ರಪ್ಪ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ಕೃತಕ್ ಬುದ್ಧಿಮತ್ತೆ ಕಲಿಕೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶಿಕ್ಷಕರು ಇದನ್ನು ಬಳಸುವ ವಿಧಾನವನ್ನು ಕಲಿತು ತಮ್ಮ ಪಠ್ಯಕ್ರಮದಲ್ಲಿ ಇದನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಇದು ಮೊದಲ ಹಂತದ ಕಾರ್ಯಕ್ರಮವಾಗಿದ್ದು, ನಂತರದ ಹಂತದಲ್ಲಿ ಹೈ ಸ್ಕೂಲ್ ಶಿಕ್ಷಕರಿಗೆ ತರಬೇತಿ ನೀಡಲು ಉದ್ದೇಶಿಸಿರುವುದಾಗಿ ನುಡಿದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಶಿಕ್ಷಣ ತಜ್ಞರಾದ ರಂಗನಾಥಯ್ಯ ರವರು, ಹಿಂದಿನಿಂದಲೂ ಈ ಪ್ರಯತ್ನ ನಡೆದಿದ್ದು, ರೋಟರಿ ಕ್ಲಬ್ ಶಿವಮೊಗ್ಗ ನುರಿತ ತಜ್ಞರನ್ನು ಕರೆತಂದು ಶಿಕ್ಷಕರಿಗೆ ತರಬೇತಿ ಆಯೋಜಿಸಿದೆ ಎಂದು ನುಡಿದರು.

ಎನ್.ಇ.ಎಸ್. ಸಂಸ್ಥೆಯ ಕಾರ್ಯದರ್ಶಿಗಳಾದ ನಾಗರಾಜ್ ಮಾತನಾಡಿ, ಕೃತಕ ಬುದ್ಧಿಮತ್ತೆ ಬಳಸುವ ಕೌಶಲ್ಯವನ್ನು ಕಲಿತು ತಮ್ಮ ಪಠ್ಯಕ್ರಮದಲ್ಲಿ ಅದನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಪವನ್ ಕುಮಾರ್ ರವರು ಎಐ ಮತ್ತು ಮಷೀನ್ ಲರ್ನಿಂಗ್ ಕ್ಷೇತ್ರದಲ್ಲಿ 12 ವರ್ಷಗಳ ಅನುಭವ ಹೊಂದಿರುವ ತಂತ್ರಜ್ಞಾನ ತಜ್ಞರು ಹಾಗೂ ಎಐ ತರಬೇತುದಾರರು. ಎಸ್.ಎಸ್.ಬಿ.ಎಂ., ಜೆನೇವಾದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಡಾಕ್ಟರೇಟ್ ಪಡೆದಿರುವ ಅವರು, ಜನರೇಟಿವ್ ಎಐ, ಡಾಟಾ ಸೈನ್ಸ್ ಮತ್ತು ಎಐ ಸೊಲ್ಯೂಷನ್ ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳು/ಪಿಓಸಿಗಳಿಗೆ ನಾಯಕತ್ವ ನೀಡಿದ್ದಾರೆ.

ಶಿಕ್ಷಕರಿಗೆ ಎಐ ತಂತ್ರಜ್ಞಾನವನ್ನು ಶಿಕ್ಷಣ, ಬೋಧನೆ ಮತ್ತು ಸಂಶೋಧನೆಯಲ್ಲಿ ಪರಿಣಾಮಕಾರಿಯಾಗಿ ಬಳಸುವ ಕುರಿತು ತರಬೇತಿ ನೀಡುವ ಮೂಲಕ “ಎಐ ಫಾರ್ ಎಜುಕೇಶನ್” ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಆಗಮಿಸಿದ್ದ ಎಲ್ಲಾ ಶಿಕ್ಷಕರಿಗೂ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗದ ಕಾರ್ಯದರ್ಶಿ ಶೈಲಿನ್ ಬಾಬು, ಸಹ ಕಾರ್ಯದರ್ಶಿ ವಿಜಯಕುಮಾರ್, ಮಾಜಿ ಅಧ್ಯಕ್ಷರಾದ ವೀರೇಂದ್ರ ಹುಗ್ಗಿ, ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್, ಚುನಾಯಿತ ಅಧ್ಯಕ್ಷರಾದ ಡಿ.ವಿ.ಸದಾನಂದ, ಸೂರ್ಯನಾರಾಯಣ ಉಡುಪ, ಎನ್.ಜಿ.ಉಷಾ, ಆನಂದಕುಮಾರ್, ಪ್ರೊಫೆಸರ್ ಬಸಪ್ಪಾಜಿ, ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ.ವಿಜಯಕುಮಾರ್, ತರಬೇತಿ ಸಹಾಯಕರು ಸೇರಿದಂತೆ ಮತ್ತಿತರರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...