
ಶಿವಮೊಗ್ಗ : ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-3 ರಲ್ಲಿ ಮೆಸ್ಕಾಂ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಆ.22 ರಂದು ಬೆಳಗ್ಗೆ 10.00 ರಿಂದ ಸಂಜೆ 4.00 ಗಂಟೆಯವರೆಗೆ ಜಡ್ಜ್ ಕ್ವಾಟ್ರಸ್, ಎಸ್.ವಿ. ಬಡಾವಣೆ ಸಿ ಬ್ಲಾಕ್, ವೃದ್ಧಾಶ್ರಮ ಸುತ್ತಮುತ್ತ, ಡಾಕ್ಟ್ರರ್ಸ್ ಲೇಔಟ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ » ಶಿವಮೊಗ್ಗ: ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2 ರಲ್ಲಿ ಮೆಸ್ಕಾಂ ಕಂಬ ತೆರವು ಕಾಮಗಾರಿ ಇರುವುದರಿಂದ ಆ.22 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ಬಾಪೂಜಿನಗರ, ಟ್ಯಾಂಕ್ ಬಂಡ್ ರಸ್ತೆ, ಜೋಸೆಫ್ ನಗರ, ಟಿಜಿಎನ್ ಲೇಔಟ್, ಟ್ಯಾಂಕ್ ಮೊಹಲ್ಲಾ, ಸೋಮಯ್ಯ ಲೇಔಟ್, ಬಿ.ಹೆಚ್.ರಸ್ತೆ, ಮೀನಾಕ್ಷಿ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಮ ಪ್ರಕಟಣೆ ತಿಳಿಸಿದೆ.