ನಾಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ 78 ನೇ ಹುಟ್ಟುಹಬ್ಬ, ಅರ್ಥಪೂರ್ಣ ಆಚರಣೆಗೆ ಅಭಿಮಾನಿ ಬಳಗ ಸಜ್ಜು

ಶಿವಮೊಗ್ಗ : ಹಿರಿಯ ರಾಜಕೀಯ ಮುತ್ಸದ್ದಿ, ಹಿಂದುತ್ವದ ಪ್ರಖರಧ್ವನಿ ಹಾಗೂ ಮಾಜಿ ಉಪಮುಖ್ಯಮಂತ್ರಿ, ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬವನ್ನು ಶ್ರೀಗಂಧ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್, ಕೆ.ಎಸ್.ಈಶ್ವರಪ್ಪ ಅಭಿಮಾನಿಗಳ ಬಳಗದ ವತಿಯಿಂದ ಅತ್ಯಂತ ಸಡಗರ-ಸಂಭ್ರಮದಿಂದ ನಾಳೆ (ಜೂ.10 ರಂದು) ಆಚರಿಸಲಾಗುವುದು ಎಂದು ಅಭಿಮಾನಿ ಬಳಗದ ಸಂಚಾಲಕ ಈ.ವಿಶ್ವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ » ಶರಾವತಿ ನಗರದ ನೂತನ ಯೋಗ ಭವನ ಕಾಮಗಾರಿ ಪರಿಶೀಲಿಸಿದ ಶಾಸಕರು, ವಾರಾಂತ್ಯದೊಳಗೆ ಲೋಕಾರ್ಪಣೆಗೆ ಚೆನ್ನಿ ಸೂಚನೆ

ಕೆ.ಎಸ್.ಈಶ್ವರಪ್ಪ, ಕರ್ನಾಟಕ ರಾಜಕಾರಣದ ಪ್ರಬಲ ನಾಯಕರು, ಆರ್.ಎಸ್.ಎಸ್., ಎಬಿವಿಪಿ ಮೂಲಕ ಗುರುತಿಸಿಕೊಂಡವರು. ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ಈ ನಾಡಿಗೆ, ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬಹಳ ಮುಖ್ಯವಾಗಿ ಹಿಂದುತ್ವದ ಪ್ರಬಲ ಧ್ವನಿಯಾಗಿದ್ದಾರೆ. ಅವರು ಸಾಂಸ್ಕೃತಿಕ ರಾಯಭಾರಿಯೂ ಹೌದು. ಅವರ ಹುಟ್ಟುಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣಗೊಳಿಸುವುದು ನಮ್ಮ ಉದ್ದೇಶ.

– ಈ. ವಿಶ್ವಾಸ್, ರಾಷ್ಟ್ರ ಭಕ್ತರ ಬಳಗದ ಮುಖಂಡ


ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 10 ರ ಬೆಳಿಗ್ಗೆ ಗುಂಡಪ್ಪಶೆಡ್, ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ಮನೆಯ ಆವರಣದಲ್ಲಿ ಬೆಳಿಗ್ಗೆ 10.00 ಗಂಟೆಗೆ ಸುಮಾರು 400ಕ್ಕೂ ಹೆಚ್ಚು ಪುರೋಹಿತ ರಿಂದ ರುದ್ರ ಪಠಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ ಎಂದರು.

ಸುಮಾರು 2000ಕ್ಕೂ ಹೆಚ್ಚು ದಂಪತಿಗಳು, ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. 600ಕ್ಕೂ ಹೆಚ್ಚು ಮಾತೆಯರು ಸಮೂಹ ಭಕ್ತಿ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಮಂಗಳ ನಿಧಿ ಸಮರ್ಪಣೆ ಕೂಡ ಇರುತ್ತದೆ ಎಂದರು.

ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಬೆಕ್ಕಿನಕಲ್ಲಕ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ, ಮಾದಾರ ಚನ್ನಯ್ಯ ಸ್ವಾಮಿಗಳು, ಆದಿಚುಂ ಚನಗಿರಿಶಾಖಾ ಮತದನಾದಮಯಾನಂದನಾಥ ಸ್ವಾಮೀಜಿ, ಬೆಳಕೆಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಈಶ್ವರಹನವರಿಗೆ ಶುಭ ಹಾರೈಸಲಿದ್ದಾರೆ ಎಂದರು.

ಇದನ್ನೂ ಓದಿ » ಉದ್ಯೋಗಾಕಾಂಕ್ಷಿಗಳಿಗೆ Good News: ಜೂ.12 ರಂದು ನೇರ ಸಂದರ್ಶನ, ಎಲ್ಲಿ, ಯಾವಾಗ?

ಸಮಾಜಮುಖ ಕಾರ್ಯಕ್ರಮದ ಅಂಗವಾಗಿ ನಾಲ್ಕನೇ ವಾರ್ಡಿನ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಜೋಡಿಯಾಕ್ ಪ್ರಕಾಶ್ ನೇತೃತ್ವದಲ್ಲಿ ತರಳುಬಾಳು ಬಡಾವಣೆಯ ಸಾರ್ವಜನಿಕ ಉದ್ಯಾನವನದಲ್ಲಿ ಈಶ್ವರಪ್ಪನವರ 78ನೇ ಹುಟ್ಟುಹಬ್ಬದ ನೆನಪಿಗಾಗಿ 78 ಗಿಡಗಳನ್ನು ನೆಡುವರು.

ವಿನೋಬನಗರದಲ್ಲಿ ಶ್ರೀಕಾಂತ್ ಜೆ.ಪಿ ಯವರು 100 ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಹಣ್ಣು ವಿತರಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿವಮೊಗ್ಗದ ಜನತೆ ಪಾಲ್ಗೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ಬಾಲು, ಸುವರ್ಣಾಶಂಕರ್, ಶಿವಾಟಿ, ನವುಲೆ ಈಶ್ವರಪ್ಪ, ಚಾದನ್, ಶ್ರೀಕಾಂತ್, ಆಶಾಚನ್ನಬಸಪ್ಪ, ಲಕ್ಷ್ಮೀಮೇಶಂಕರ್ ನಾಯಕ್, ವೆಂಕಟೇಶ್, ರಾಜು, ಕುಬೇರಪ್ಪ, ಸೂರ್ಯನಾರಾಯಣ ಸೇರಿದಂತೆ ಹಲವರಿದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ರೆಡ್‌ ಅಲರ್ಟ್‌, ಎರಡು ದಿನಗಳ ಕಾಲ ಭಾರೀ ಮಳೆ, ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ 

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...