
ಶಿವಮೊಗ್ಗ : ಮುಸ್ಲಿಮರಿಗೆ ಗುಲಾಮರಾಗಿರುವ ರಾಜ್ಯ ಸರ್ಕಾರ, ತಮ್ಮ ಕೊನೆಗಾಲವನ್ನು ಎದುರಿಸುತ್ತಿದೆ. ಹಿಂದೂಗಳು ಸುಮ್ಮನಿದ್ದರೆ ಇವರು ಮುಸ್ಲಿಮರಿಗೆ ರಾಜ್ಯವನ್ನು ಮಾರಿ ಬಿಡುತ್ತಾರೆ. ಇದರ ಹುನ್ನಾರವೂ ಒಳಗೊಳಗೇ ನಡೆಯುತ್ತಿದೆ ಎಂದು ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಾಧಾರಿತ ಮೀಸಲಾತಿಯನ್ನು ನೀಡಬಾರದು ಎಂದು ಸಂವಿಧಾನವೇ ಹೇಳಿದೆ. ಆದರೆ ಸಂವಿಧಾನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸಿಗರು ಮುಸ್ಲಿಂರಿಗೆ ಈಗಾಗಲೇ ವಿವಿಧ ಕಾಮಗಾರಿಗಳಲ್ಲಿ ಮೀಸಲಾತಿ ನೀಡಿದೆ. ಈಈಗ ವಸತಿ ಯೋಜನೆಯಡಿ ಶೇ.15 ರಷ್ಟು ಮೀಸಲಾತಿಯನ್ನು ನೀಡಲು ಹೋರಟಿದೆ.
ರಾಜ್ಯ ಸರ್ಕಾರದ ಈ ತುಷ್ಟಿಕರಣ ನೀತಿಯನ್ನು ವಿರೋಧಿಸಿ ಜೂ.25ರಂದು ರಾಷ್ಟ್ರಭಕ್ತ ಬಳಗದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ರಾಮಣ್ಣ ಶ್ರೇಷ್ಟಿ ಪಾರ್ಕ್ನಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಈ ಮೆರವಣಿಗೆ ನಡೆಯಲಿದ್ದು, ಈ ಮೂಲಕ ಭ್ರಷ್ಟಾಚಾರ ತನಿಖೆಯಾಗಬೇಕು. ಸಂಬಂಧಪಟ್ಟ ಸಚಿವರುಗಳು ರಾಜೀನಾಮೆ ಕೊಡಬೇಕು. ಧರ್ಮಾದಾರಿತ ಮೀಸಲಾತಿ ಕೈಬಿಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು.
| ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಸಂಚಾಲಕರು
ಇದಕ್ಕಾಗಿ ಕಾಯ್ದೆ ಮಾಡಲು ಯೋಚಿಸಿದ್ದು, ರಾಜ್ಯಪಾಲರು ಈ ಕಾಯ್ದೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಒಂದು ಕಡೆ ಹಿಂದುಳಿದವರಿಗೆ, ದಲಿತರಿಗೆ ವಂಚಿಸಿ, ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುತ್ತಿದೆ. ಕಳೆದ ಬಜೆಟ್ ನಲ್ಲಿ 910 ಕೋಟಿ ಮುಸ್ಲಿಮರಿಗೆ ಮೀಸಲಿಟ್ಟಿದ್ದಾರೆ. ಈ ವರ್ಷ ಅದನ್ನು 1913.97 ಕೋಟಿಗೆ ಹೆಚ್ಚಿಸಿದೆ. ವಿದ್ಯಾರ್ಥಿವೇತನ, ಶಾದಿಭಾಗ್ಯ, ಮುಲ್ಲಾಗಳಿಗೆ ಸಂಬಳ ಜಾಸ್ತಿ ಹೀಗೆ ಎಲ್ಲಾ ಕಡೆ ಮುಸ್ಲಿಂರ ಓಲೈಕೆ ಮಾಡುತ್ತಿದೆ. ಇದನ್ನು ಹಿಂದೂ ಸಮಾಜವೇ ಒಪ್ಪುವುದಿಲ್ಲ.
ಮತ್ತೊಂದು ಕಡೆ ಕಾಂಗ್ರೆಸ್ ನಾಯಕರುಗಳಾದ ಹೆಚ್.ಕೆ.ಪಾಟೀಲ್ ಮತ್ತು ಬಿ.ಆರ್.ಪಾಟೀಲ್ ರವರು ಸರ್ಕಾರದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ವಸತಿ ಯೋಜನೆಯಡಿಯಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದ ಅವರು, ಬಿ.ಪರಮೇಶ್ವರ್, ಬೋಸರಾಜ್ ಮುಂತಾದವರು ಇದಕ್ಕೆ ಬೆಂಬಲ ಕೂಡ ಕೊಟ್ಟಿದ್ದಾರೆ. ಹಾಗಾಗಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ ವಿಶ್ವಾಸ್, ಜಾದವ್, ಮಹಾಲಿಂಗಶಾಸ್ತ್ರಿ, ಮೋಹನ್, ಕಾಚಿನಕಟ್ಟೆ ಸತ್ಯಣ್ಯ ಅ.ಮ.ಪ್ರಕಾಶ್ ಸೇರಿದಂತೆ ಮುಂತಾದವರು ಇದ್ದರು.