
ಶಿವಮೊಗ್ಗ : ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್‌ಗೆ ಮಂತ್ರಿ ಸ್ಥಾನ ನೀಡಬೇಕೆಂದು ಜಿಲ್ಲಾ ಗಾಣಿಗ ಕ್ಷೇಮಾಭೀವೃದ್ಧಿ ಸಂಘ ಹಾಗೂ ತಾಲ್ಲೂಕು ಘಟಕಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದೆ.
ಇದನ್ನೂ ಓದಿ » ನೂತನ ಆದಾಯ ತೆರಿಗೆ ಕಾಯ್ದೆ 2025ರ ವಿಚಾರ ವಿಮರ್ಶೆ ಕಾರ್ಯಾಗಾರ, ತೆರಿಗೆ ಸಂಗ್ರಹಣೆಯಲ್ಲಿ ತೆರಿಗೆ ಸಲಹೆಗಾರರ ಪಾತ್ರ ಮಹತ್ತರ: ವಿ.ಕುಮಾರ್
ಬಿ.ಕೆ.ಸಂಗಮೇಶ್ವರ್ ನಾಲ್ಕು ಬಾರಿ ಶಾಸಕರಾಗಿದ್ದು, ಕ್ಷೇತ್ರದಲ್ಲಿ ಅಪಾರ ಜನ ಮನ್ನಣೆ ಗಳಿಸಿದ್ದಾರೆ. ಪ್ರಮುಖವಾಗಿ ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯದ ನಾಯ ಕರಾಗಿದ್ದಾರೆ. ಭದ್ರಾವತಿ ಸೇರಿದಂತೆ ಮಲೆನಾಡಿನಲ್ಲಿ ಇರುವ ಅನೇಕ ಸಮಸ್ಯೆಗಳನ್ನು ಬಗೆಹರಿಯ ಬೇಕಾಗದೆ ಸಂಗಮೇಶ್ವರ್ ಅವರಿಗೆ ನಾಯಕತ್ವ ಬೇಕಾಗಿದೆ. ಆದರಿಂದ ಅವರಿಗೆ ಸಚಿವ ಸ್ಥಾನ ನೀಡಬೇ ಕೆಂದು ಜಿಲ್ಲಾ ಗಾಣಿಗ ಕ್ಷೇಮಾಭೀ ವೃದ್ದಿ ಸಂಘದ ಅಧ್ಯಕ್ಷ ಜಿ.ವಿಜಯ್ ಕುಮಾರ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲೆಯಲ್ಲಿ ಮತ್ತೇ ಭದ್ರಕೋಟೆಯಾಗಬೇಕಾದರೆ ಸಂಗಮೇಶ್ವರ್‌ಗೆ ನಾಯಕತ್ವ ಬೇಕಾಗಿದೆ. ಪಕ್ಷದ ಹಿತ ದೃಷ್ಟಿಯಿಂದಲೂ ಸಚಿವರಾಗಬೇಕು. ಮುಂದೆ ಸ್ಥಳೀಯ ಸಂಸ್ಥೆಗಳ ಹಾಗೂ 2028ಕ್ಕೆ ವಿಧಾನ ಸಭಾ ಚುನಾವಣೆಯೂ ಬರಲಿದೆ. ಈ ಎಲ್ಲಾ ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಇರುವ ಬಿ.ಕೆ.ಸಂಗಮೇಶ್ವರ್ ಅವರನ್ನು ಸಚಿವ ಸಂಪುಟದಲ್ಲಿ ಸ್ಥಾನ ನೀಡ ಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಗೀಶ್ ಕೋಟೆ ಮಾತನಾಡಿ, ನಾಲ್ಕು ಬಾರಿ ಶಾಸಕ ರಾಗಿ ಆಯ್ಕೆಯಾಗಿರುವ ಬಿ.ಕೆ.ಸಂಗ ಮೇಶ್ವರ್ ಹಿರಿಯ ಶಾಸಕರಾಗಿ ದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದಾರೆ. ವಿಶೇಷವಾಗಿ ಕ್ಷೇತ್ರದಲ್ಲಿ ಸರ್ವಾಜ ನಾಂಗದ ನಾಯಕರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುತ್ತಿರುವ ಅವ ರಿಗೆ ಸಚಿವರಾಗುವ ಎಲ್ಲಾ ಅರ್ಹತೆ ಇದೆ. ಹಲವು ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಅವರು ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರಿಗೆ ಒತ್ತಾಯಿಸಿ ಕೊಂಡು ಬರುತ್ತಿದ್ದಾರೆ ಎಂದರು.
ಸಚಿವ ಸ್ಥಾನ ನೀಡುವ ಬದಲು ಎರಡು ಬಾರಿ ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ನೇಮಕಗೊಳಿಸಲಾ ಗಿದೆ. ಈ ಬಾರಿ ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಕ್ಷೇತ್ರದ ಜನರ ಹೊಂದಿದ್ದಾರೆ. ಆದರಿಂದ ಮುಂದಾಗುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಎ.ಎಸ್.ರವಿ, ಪ್ರಮುಖ ರಾದ ಶಿವಯೋಗಿ, ಎನ್.ಜಿ. ಲೋಕೇಶ್ ಇನ್ನಿತರರು ಉಪಸ್ಥಿತ ರಿದ್ದರು.