ಮಹಾನಗರ ಪಾಲಿಕೆಯಿಂದ ವಿವಿಧ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯು 2026-27ನೇ ಸಾಲಿನ ಎಸ್.ಎಫ್.ಸಿ ನಿಧಿಯ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿಶೇಷಚೇತನ ಮತ್ತು ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ.

ಇದನ್ನೂ ಓದಿ » ಆಯನೂರು ಗೇಟ್ ಸರ್ಕಲ್ ಬಳಿ ಸಂಚಾರ ಬದಲಾವಣೆ, ಇನ್ಮುಂದೆ ‘ನೋ ಎಂಟ್ರಿ’ ಆದೇಶ ಜಾರಿ, ಕಾರಣವೇನು?

ಬಿ.ಇ./ಎಂ.ಬಿ.ಬಿ.ಎಸ್. ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ರೂ.50,000/- ಸಹಾಯಧನ ನೀಡಲಾಗುತ್ತಿದ್ದು, ಆದಾಯ ರೂ.5 ಲಕ್ಷ ಮಿತಿಯಲ್ಲಿರಬೇಕು. ಬಿ.ಇ./ಎಂ.ಬಿ.ಬಿ.ಎಸ್. ವ್ಯಾಸಾಂಗ ಮಾಡುತ್ತಿರುವ ಇತರೆ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ರೂ.50,000/- ಸಹಾಯಧನ ನೀಡಲಾಗುತ್ತಿದ್ದು, ಆದಾಯ ರೂ.2.50 ಲಕ್ಷ ಮಿತಿಯಲ್ಲಿರಬೇಕು. ವಿಶೇಷ ಚೇತನರಿಗೆ ಸಣ್ಣ ಉದ್ದಿಮೆಗೆ ಸಹಾಯಧನ ನೀಡಲಾಗುತ್ತಿದ್ದು, ಅವರ ಆದಾಯ ರೂ.3.00 ಲಕ್ಷ ಮಿತಿಯಲ್ಲಿರಬೇಕು.

ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಪತ್ರ, ಪಡಿತರಚೀಟಿ ಆಧಾರ ಕಾರ್ಡ್, ವ್ಯಾಸಾಂಗ ದೃಢೀಕರಣ ಪತ್ರ, ವಿಶೇಷ ಚೇತನರ UDID ಕಾರ್ಡ್, ಸಣ್ಣ ಉದ್ದಿಮೆ ಫಲಾಭವಿಗಳು ಯೋಜನಾ ವರದಿ ಲಗತ್ತಿಸುವುದು. ಈ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ನೀಡುವುದು.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.shivamoggacity.mrc.gov.in, ದೂ. ಸಂ.: 08182-277677/226606 ಗಳನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದನ್ನೂ ಓದಿ » ಶರಾವತಿ ನಗರದ ನೂತನ ಯೋಗ ಭವನ ಕಾಮಗಾರಿ ಪರಿಶೀಲಿಸಿದ ಶಾಸಕರು, ವಾರಾಂತ್ಯದೊಳಗೆ ಲೋಕಾರ್ಪಣೆಗೆ ಚೆನ್ನಿ ಸೂಚನೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...