
ಶಿವಮೊಗ್ಗ : ಶಿವಮೊಗ್ಗದಲ್ಲಿ ಖ್ಯಾತ ಮಧುಮೇಹ ತಜ್ಞರು ಹಾಗೂ ಖ್ಯಾತ ಲೇಖಕರು ಆದ ಡಾ. ಪ್ರೀತಮ್ ಬಿ ಅವರು ಮಧುಮೇಹದ ಬಗ್ಗೆ ನಿರಂತರ ಸಂಶೋಧನೆ ನಡೆಸಿ ಮೂರೂ ಪುಸ್ತಕಗಳನ್ನು ಬರೆದಿದ್ದು, ಇಂದು ಅವರ ಮೂರನೇ ಪುಸ್ತಕವಾದ “ಡಯಾಬಿಟಿಸ್ ರಿವರ್ಸಲ್ ಟಿಪ್ಸ್, ಸರಳವಾಗಿ ಮನೆಯಲ್ಲಿ ಮಾಡಿಕೊಳ್ಳಿ” ಎಂಬ ಪುಸ್ತಕವನ್ನು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಿಡುಗಡೆ ಮಾಡಿದರು.
ಇದನ್ನೂ ಓದಿ » ಬಗೆಹರಿಯದ ವಾಹನಗಳ ಪಾರ್ಕಿಂಗ್ ಸಮಸ್ಯೆ, ರಸ್ತೆ ಬದಿಯ ವಾಹನಗಳ ನಿಲುಗಡೆಗೆ ಕಡಿವಾಣ ಯಾವಾಗ?
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಸಕ್ಕರೆ ಕಾಯಿಲೆಯಲ್ಲಿ ವಿಶ್ವದಲ್ಲೇ ಭಾರತ ಶ್ರೀಮಂತವಾಗಿರುವುದು ದುರಂತದ ವಿಷಯ. ಈ ಕಾಯಿಲೆಯ ತಡೆಗಟ್ಟುವಲ್ಲಿ, ಅರಿವು ಮೂಡಿಸುವ ವಿಶೇಷ ಪ್ರಯತ್ನಗಳು ಅಗತ್ಯವಿದೆ ಎಂದು ಹೇಳಿದರು.
ದೇಶದಲ್ಲಿ 19 ಕೋಟಿ ಜನ ಡಯಬಿಟಿಸ್ ನಿಂದ ಬಳಲುತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಹೇಳಿವೆ. ಇಂಥ ಪರಿಸ್ಥಿತಿಯಲ್ಲಿ ಡಯಬಿಟಿಸ್ ರಿವರ್ಸ್ ಮಾಡಲು ಸಾಧ್ಯ ಎಂದು ಡಾ. ಪ್ರೀತಮ್ ತೋರಿಸಿಕೊಟ್ಟಿದ್ದಾರೆ. ಆಹಾರ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಡಯಬಿಟಿಸ್ ತಡೆಗಟ್ಟಬಹುದು, ಈಗಾಗಲೇ ಡಯಬಿಟಿಸ್ ಬಂದಿರುವವರು ಈ ಕ್ರಮಗಳನ್ನು ಅನುಸರಿಸಿ ಡಯಬಿಟಿಸ್ ಮುಕ್ತರಾಗಬಹುದಾಗಿದೆ ಎಂದರು.
ಹಸಿವಿಗೆ, ಜೀರ್ಣಕ್ಕೆ, ಮಲಬದ್ಧತೆಗೆ, ನಿದ್ದೆಗೆ ಹೀಗೆ ಎಲ್ಲದಕ್ಕೂ ಔಷಧಗಳ ಅವಲಂಬನೆ ಅನಿವಾರ್ಯ ಎಂಬಂತಾಗಿದೆ. ರೋಗ ಬಂದ ಮೇಲೆ ಔಷಧಕ್ಕೆ ಹೋಗುವುದಕ್ಕಿಂತ ರೋಗ ಬರದಂತ ಜೀವನ ಶೈಲಿ ರೂಢಿಸಿಕೊಳ್ಳಬೇಕು.
| ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ
ಜೀವನದಲ್ಲಿ ಏನೆಲ್ಲಾ ತೊಂದರೆ- ತಾಪತ್ರಯ ಬರುತ್ತವೆ. ಅವುಗಳನ್ನು ಮನಸಿಗೆ ತೆಗೆದುಕೊಳ್ಳಬಾರದು. ಕ್ರೀಡೆ ಇನ್ನಿತರ ಚಟಿವಟಿಕೆಗಳಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡು ಆರೋಗ್ಯ ಸದೃಢವಾಗಿ ಇರುವಂತೆ ನೋಡಿಕೊಳ್ಳಬೇಕು. ಇಂಥ ಪುಸ್ತಕದ ಹಿಂದೆ ಸಮಾಜ ಸುಧಾರಣೆಯ ಉದ್ದೇಶ ಇದೆ. ಹೆಚ್ಚು ಹೆಚ್ಚು ಜನ ಈ ಪುಸ್ತಕದ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
| ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ
ಖ್ಯಾತ ಮಧುಮೇಹ ತಜ್ಞರು, ಖ್ಯಾತ ಲೇಖಕರು ಆದ ಡಾ. ಪ್ರೀತಮ್ ಬಿ ಅವರು ಮದುಮೇಹದ ಬಗ್ಗೆ ನಿರಂತರ ಸಂಶೋಧನೆ ನಡೆಸಿ ಮೂರೂ ಪುಸ್ತಕಗಳನ್ನು ಬರೆದಿದ್ದು, ಇಂದು ಅವರ ಮೂರನೇ ಪುಸ್ತಕ “ಡಯಾಬಿಟಿಸ್ ರಿವರ್ಸಲ್ ಟಿಪ್ಸ್, ಸರಳವಾಗಿ ಮನೆಯಲ್ಲಿ ಮಾಡಿಕೊಳ್ಳಿ” ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕೃತಿಕಾರರಾದ ಡಾ. ಪ್ರೀತಮ್, ಸೂಡಾ ಅಧ್ಯಕ್ಷ ಸುಂದರೇಶ್, ಹಿರಿಯ ವಕೀಲ ಸೀತಾರಾಮ್, ಪ್ರಮುಖರಾದ ಹೆಚ್.ಸಿ.ಯೋಗೀಶ್ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ » ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?