ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ: ಮೊದಲ ಬ್ಯಾಚ್ ನಲ್ಲಿಯೇ ಅತ್ಯುತ್ತಮ ಸಾಧನೆಯ ಗರಿ

ಶಿವಮೊಗ್ಗ : ಮಲೆನಾಡು ಭಾಗದ ಮೊದಲ ವಸತಿಯುತ ಕೋಚಿಂಗ್ ಸೆಂಟರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿಯು ತನ್ನ ಚೊಚ್ಚಲ ಪ್ರಯತ್ನದಲ್ಲಿಯೇ ಅದ್ಭುತ ಸಾಧನೆ ಮಾಡಿದೆ. 2025ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ದಾಖಲಾತಿ ಪಡೆದ ದೇಶ್ ನೀಟ್ ಅಕಾಡೆಮಿಯ 110 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಕೋರ್ಸುಗಳಿಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿಯ ಈ ಸಾಧನೆ ಕುರಿತು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್.ವಿ.ಆರ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದೇಶ್ ನೀಟ್ ಅಕಾಡೆಮಿಯಿಂದ ನೀಟ್ ಪರೀಕ್ಷೆ ತೆಗೆದುಕೊಂಡಿದ್ದ ಮೊದಲ ಬ್ಯಾಚ್ ನ 120 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದಾರೆ. ಆ ಮೂಲಕ ಅಕಾಡೆಮಿಗೆ ಶೇ.41 ರಷ್ಟು ಫಲಿತಾಂಶ ಬಂದಿದೆ. ಇದು ನಿಜಕ್ಕೂ ಹೆಮ್ಮೆ 02 ಎನಿಸಿದೆ ಎಂದರು.

ನೀಟ್, ಸಿಇಟಿ ಅಂತಹ ಪರೀಕ್ಷೆಗಳಿಗೆ ಲಾಂಗ್ ಟರ್ಮ್ ತರಬೇತಿಗೆ ಕೋಚಿಂಗ್ ಸೆಂಟರ್ ನಡೆಸುವುದು ಅಷ್ಟು ಸುಲಭವಲ್ಲ, ಇದೊಂದು ಸಾಹಸದಂತೆಯೇ ನಾನು ತೆಗೆದುಕೊಂಡಿ ದ್ದೇನೆ. ಹಣಕಾಸಿನ ವಿಚಾರದಲ್ಲಿ ಸಂಸ್ಥೆ ಯನ್ನು ಸಾಲದಲ್ಲಿಯೇ ನಡೆಸುತ್ತಿದ್ದೇನೆ. ಉತ್ತಮ ಫಲಿತಾಂಶ ತಂದುಕೊಟ್ಟರೆ ಮುಂದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ, ಜನರು ಕೈ ಹಿಡಿಯ ಬಹುದೆನ್ನುವ ನಿರೀಕ್ಷೆ ನನ್ನದು. ಅದಕ್ಕೆ ಎಲ್ಲರ ಸಹಕಾರವೂ ಅಗತ್ಯ.

| ಅವಿನಾಶ್.ಎ.ಆರ್. ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ


ಮಲೆನಾಡು ಭಾಗದ ವಿದ್ಯಾರ್ಥಿಗಳು ಬೆಂಗಳೂರು, ಹೈದರಾಬಾದ್ ಗಳಂತಹ ದೂರದ ಊರುಗಳಿಗೆ ಹೋಗಿ ದುಬಾರಿ ವೆಚ್ಚದಲ್ಲಿ ನೀಟ್ ಪರೀಕ್ಷೆಗಳಿಗೆ ತಯಾರಾಗುವುದನ್ನು ಕಂಡಾಗ, ಅಂತಹದೊಂದು ಸಂಸ್ಥೆ ಶಿವಮೊಗ್ಗದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆಯ ಮೂಲಕ ಶುರುವಾದ ಸಂಸ್ಥೆ ದೇಶ್ ನೀಟ್ ಅಕಾಡೆಮಿ. ಬಡವರು ಹಾಗೂ ಮಧ್ಯಮ ವರ್ಗದ ಮಕ್ಕಳೂ ಕೂಡ ವೈದ್ಯಕೀಯ ಕೋರ್ಸುಗಳಿಗೆ ಹೋಗಬೇಕೆನ್ನುವ ಉದ್ದೇಶವೇ ದೇಶ್ ನೀಟ್ ಅಕಾಡೆಮಿ ಶುರುವಾಗುವುದಕ್ಕೆ ಇನ್ನೊಂದು ಕಾರಣ. ಆ ಉದ್ದೇಶಕ್ಕೆ ಗುರಿ ಸಾಧನೆಗೆ ಮೊದಲ ಬ್ಯಾಚ್ ನಲ್ಲಿ ಶುಭಹಾರೈಕೆ ಸಿಕ್ಕಿದೆ ಎಂದರು.

ಶಿವಮೊಗ್ಗದ ಗಂಧರ್ವ ನಗರದಲ್ಲಿ ಆರಂಭವಾದ ದೇಶ್ ನೀಟ್ ಅಕಾಡೆಮಿಗೆ 2025ಕ್ಕೆ ದಾಖಲಾತಿ ಪಡೆದ 120 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ನೀಟ್ ನಲ್ಲಿ ಅವಕ ಅಂಕ ಪಡೆಯುವ ಮೂಲಕ ವಿವಿಧ ವೈದ್ಯಕೀಯ ಕೋರ್ಸುಗಳಿಗೆ ಸರ್ಕಾರದ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಈ ಪೈಕಿ 39 ವಿದ್ಯಾರ್ಥಿಗಳು ಎಂಬಿಬಿಎಸ್, 17 ವಿದ್ಯಾರ್ತಿಗಳು ಬಿಎಎಂಎಸ್, 10 ವಿದ್ಯಾರ್ಥಿಗಳು ಡಿಡಿಎಸ್ ಹಾಗೂ 3 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸುಗಳಿಗೆ ಆಯ್ಕೆಯಾಗಿದ್ದಾರೆ. ವಿಶೇಷ ವೆಂದರೆ ಎಂಬಿಬಿಎಸ್‌ನಲ್ಲಿ ಆಯ್ಕೆಯಾಗಿರುವ 17 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಶಿವಮೊಗ್ಗದ ಸಿಮ್ಸ್‌ನಲ್ಲಿ ಪ್ರವೇಶ ಪಡೆದಿದ್ದಾರೆ. ಇದು ಅತ್ಯಂತ ಸಂತೋಷ ತಂದಿದೆ ಎಂದರು.

ಉನ್ನತ ಮಟ್ಟದ ಸಾಧನೆಯಿಂದ ಅಕಾಡೆಮಿಗೆ ಕೀರ್ತಿ ತಂದುಕೊಟ್ಟಿರುವ ಹಾಗೂ ವೈದ್ಯಕೀಯ ಕನಸು ಕಂಡು ಶ್ರಮಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಗೆ ಅಕಾಡೆಮಿ ಅಭಿನಂದಿಸುತ್ತದೆ. ಅದರ ಭಾಗವಾಗಿಯೇ ಡಿ.27ರ ಸಂಜೆ 5 ಗಂಟೆಗೆ ಅಕಾಡೆಮಿಯ ಆವರಣದಲ್ಲಿ ದೇಶ್ ಸಿಂಧೂರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಪ್ರಧಾನ ವ್ಯವಸ್ಥಾಪಕ ಎಸ್.ಪ್ರದೀಪ, ಮಾರ್ಕೆಟಿಂಗ್ ಮ್ಯಾನೇಜರ್ ನಾಗರಾಜ್ ಆಚಾರ್, ಪ್ರಾಧ್ಯಾಪಕರುಗಳಾದ ಬ್ರಹ್ಮ ಗಾಯಕ್‌ವಾಡ್, ಗೋವರ್ಧನ್, ಯುಗಂದರ್‌, ಕ್ಯಾಂಪಸ್‌ನ ಕೋ ಆರ್ಡಿನೇಟರ್ ವಿಜಯ್ ಕುಮಾ‌ರ್ ಹಾಜರಿದ್ದರು.

ಇದನ್ನೂ ಓದಿ »ಪಾಲಿಕೆ ನಡೆ ಖಂಡಿಸಿ, ರಾಷ್ಟ್ರ ಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...