
ಶಿವಮೊಗ್ಗ : ಹೊಳೆಹೊನ್ನೂರು ರಸ್ತೆಯ ರೈಲ್ವೆ ಗೇಟ್ ಹತ್ತಿರದ ಶ್ರೀ ಅರಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಫೆ.15 ರಂದು ಶಿವರಾತ್ರಿ ಪ್ರಯುಕ್ತ ನಾದಮಯ ಶಿವರಾತ್ರಿ ಕಾರ್ಯಕ್ರಮವನ್ನು ಹಲವಾರು ರಾಜ್ಯ ಪ್ರಶಸ್ತಿ ವಿಜೇತರಾದ ದೀಪಿಕಾ ಶ್ರೀಕಾಂತ್ ತಂಡದವರಿಂದ ರಾತ್ರಿ 8.00 ಗಂಟೆಯಿಂದ 12.00 ಗಂಟೆಯವರೆಗೆ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕರ್ನಾಟಕ ಕಲಾಶ್ರೀ, ನಂದಿ ಪ್ರಶಸ್ತಿ ಪುರಸ್ಕೃತರಾದ ಹರಿಕಥಾ ವಿದ್ವಾನ್ ಎ.ಎಸ್.ಶಿವಾನಂದ ಸ್ವಾಮಿ ತಂಡದವರಿಂದ ರಾತ್ರಿ 12.00 ಗಂಟೆಯಿಂದ ಹರಿಕಥೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಂದು ಸಂಜೆ 6.00 ಗಂಟೆಯಿಂದ 8.00 ಗಂಟೆಯವರೆಗೆ ಶ್ರೀ ನಟರಾಜ ನೃತ್ಯ ಕಲಾ ನಿಕೇತನದ ಉದಯಕುಮಾರಿ ವೆಂಕಟರಾಮ ಹಾಗೂ ಅಪರ್ಣ ಕಾರ್ತಿಕ್ ತಂಡದವರಿಂದ ಭರತ ನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಷ್ಟೋತ್ತರ (108), ಶಿವಲಿಂಗ ದರ್ಶನ, ರುದ್ರ ಹೋಮ, ಮಹಾ ರುದ್ರಭಿಷೇಕ ಹಾಗೂ ರಾತ್ರಿ ಪೂರ್ತಿ ಜಾವದ ಪೂಜೆಗಳು ಹಾಗೂ ವಿಶೇಷ ಶಿವ ಪಾರ್ವತಿ ದರ್ಶನ ಇರುತ್ತದೆ.
ಭಕ್ತರಿಗೆ ಪಾನಕ, ಕೋಸಂಬರಿ, ಉಪ್ಪಿಟ್ಟನ್ನು ವಿತರಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಕುಮಾರ್ ಕೋರಿದ್ದಾರೆ.