ತುಂಗಾ ಡ್ಯಾಮ್ ಭರ್ತಿ, ಗೇಟ್‌ಗಳು ಓಪನ್, ಎಷ್ಟು ನೀರು ಹೊರಬಿಡಲಾಗಿದೆ? ಇಲ್ಲಿದೆ ಮಾಹಿತಿ

ಶಿವಮೊಗ್ಗ : ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು 8 ಕ್ರಸ್ಟ್ ಗೇಟ್‌ಗಳನ್ನು ಮೇಲೆತ್ತಲಾಗಿದೆ. ಪ್ರಸ್ತುತ 18,051 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

ಇದನ್ನೂ ಓದಿ » ಮರ ಕಡಿದು ಓಮಿನಿಗೆ ತುಂಬುವಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ, ಆರೋಪಿ ಬಂಧನ

ಜಲಾಶಯಕ್ಕೆ ಪ್ರಸ್ತುತ 19,708 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಕ್ರಸ್ಟ್ ಗೇಟ್‌ಗಳು ಹಾಗೂ ಪವರ್ ಹೌಸ್ ಮೂಲಕ ಒಟ್ಟು 18,051 ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹೊರಬಿಡಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಪ್ರಸ್ತುತ ನೀರಿನ ಮಟ್ಟ 588.21 ಮೀಟರ್ ತಲುಪಿದೆ. ಜಲಾಶಯವು ಭರ್ತಿಯಾಗಿದೆ. ಒಟ್ಟು 3.24 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.206 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ » ಪಟಗುಪ್ಪ ಸೇತುವೆ ಬಳಿಯ ಗೋ ಕೃತ್ಯದ ಪ್ರಕರಣ, ಹಾನಗಲ್‌ನ ನಾಲ್ವರು ಆರೋಪಿಗಳು ಅರೆಸ್ಟ್‌

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...