ಗಣೇಶೋತ್ಸವದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ, ಅನ್ನದಾನವು ಸಮಾಜದಲ್ಲಿ ಸಮಾನತೆಯನ್ನು ಬಿಂಬಿಸುತ್ತದೆ: ರೋ. ಜಿ.ವಿಜಯ್ ಕುಮಾರ್ ಕರೆ

ಶಿವಮೊಗ್ಗ : ಹಸಿವೆಂಬುದು ಪ್ರತಿಯೊಂದು ಜೀವಿಯ ಸಾಮಾನ್ಯ ಅಗತ್ಯವಾಗಿದ್ದು, ಜಾತಿ, ಮತ, ಭೇದವಿಲ್ಲದೆ ಎಲ್ಲರನ್ನೂ ಒಂದೇ ಪಂಕ್ತಿಯಲ್ಲಿ ಕೂರಿಸಿ ಅನ್ನ ಬಡಿಸುವ ಅನ್ನದಾನವು ಸಮಾಜದಲ್ಲಿ ಸಮಾನತೆಯನ್ನು ಬಿಂಬಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ರೋಟೇರಿಯನ್ ಜಿ. ವಿಜಯ್ ಕುಮಾರ್ ಹೇಳಿದರು.

ನಗರದ ಎಪಿಎಂಸಿ ದಿನಸಿ ವರ್ತಕರ ಸಂಘ ಹಾಗೂ ಸ್ನೇಹಿತರ ಬಳಗದ ಸಹಯೋಗದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಆಯೋಜಿಸಲಾಗಿದ್ದ ಗಣೇಶೋತ್ಸವದ ಸಾರ್ವಜನಿಕ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನ್ನದಾನವನ್ನು ಹಿಂದೂ ಧರ್ಮದಲ್ಲಿ ಪವಿತ್ರ ಹಾಗೂ ಪುಣ್ಯ ಕಾರ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಪರಮಾತ್ಮನಿಗೆ ಸೇವೆ ಸಲ್ಲಿಸುವುದಕ್ಕೆ ಸಮಾನವಾಗಿದೆ ಎಂದರು.

ಅನ್ನದಾನಂ ಪರಂ ದಾನಂ. ನಮ್ಮ ಸನಾತನ ಧರ್ಮದಲ್ಲಿ ಅನ್ನದಾನಕ್ಕೆ ಅತ್ಯುನ್ನತ ಸ್ಥಾನವಿದೆ. ಜಗತ್ತಿನಲ್ಲಿ ಬೇರೆ ಯಾವುದೇ ದಾನ ಮಾಡಿದರೂ ಸಂಪೂರ್ಣ ತೃಪ್ತಿ ಹೊಂದದ ಮನುಷ್ಯ, ಅನ್ನದಾನ ಸ್ವೀಕರಿಸಿದಾಗ ಮಾತ್ರ ಮನಸಾರೆ ಸಾಕು, ಹೊಟ್ಟೆ ತುಂಬಿತು ಎಂದು ತೃಪ್ತಿಪಡುತ್ತಾನೆ. ಗಣೇಶನ ಪ್ರಸಾದವನ್ನು ಸ್ವೀಕರಿಸುವ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದಾತ್ತ ಚಿಂತನೆ ಈ ಅನ್ನದಾನದ ಹಿಂದಿದೆ.

ಯಾವ ಮನೆಯಲ್ಲಿ ಹಸಿದವರಿಗೆ ಅನ್ನ ಸಿಗುತ್ತದೆಯೋ, ಅಲ್ಲಿ ದೇವತೆಗಳು ಸದಾ ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ. ಇಂತಹ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಮಂಡಳಿಯ ಪದಾಧಿಕಾರಿಗಳ ಶ್ರಮ ನಿಜಕ್ಕೂ ಶ್ಲಾಘನೀಯ. ಅನ್ನದಾನಕ್ಕೆ ನೆರವಾದ ಪ್ರತಿಯೊಬ್ಬ ದಾನಿಗಳ ಕುಟುಂಬಕ್ಕೂ ಮಹಾಗಣಪತಿಯು ಆಯುಷ್ಯ, ಆರೋಗ್ಯ ಹಾಗೂ ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

– ರೋ. ಜಿ.ವಿಜಯ್ ಕುಮಾರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರು


ವಿಘ್ನ ವಿನಾಶಕನಾದ ಗಣಪತಿಯ ಆರಾಧನೆಯೊಂದಿಗೆ ಆಗಮಿಸುವ ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ನೀಡುವುದು ನಮ್ಮ ಸಮಿತಿಯ ಸೌಭಾಗ್ಯ. ಭಗವಂತನು ನಮಗೆ ನೀಡಿರುವ ಸಂಪತ್ತಿನಲ್ಲಿ ಸಮಾಜದ ಹಸಿದವರಿಗೆ ಅನ್ನ ನೀಡುವುದು ನಿಜವಾದ ದೈವ ಸೇವೆಯಾಗಿದೆ. ಈ ಅನ್ನದಾನ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ತನು, ಮನ, ಧನದ ದಾತರು ಹಾಗೂ ಸ್ವಯಂಸೇವಕರಿಗೆ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾವೆಲ್ಲರೂ ಶಿಸ್ತಿನಿಂದ ಮಹಾಗಣಪತಿಯ ಅನ್ನಪ್ರಸಾದವನ್ನು ಸ್ವೀಕರಿಸಿ, ವಿಘ್ನೇಶ್ವರನ ಕೃಪೆಗೆ ಪಾತ್ರರಾಗೋಣ.

– ಹಾಲಸ್ವಾಮಿ, ಎಪಿಎಂಸಿ ದಿನಸಿ ವರ್ತಕರ ಸಂಘದ ಅಧ್ಯಕ್ಷರು


ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಆರ್. ಮನೋಹರ, ಬಣಕಾರ್, ನಂದನಕುಮಾರ್, ಆನಂದ್, ಎಂ.ಪಿ. ನಾಗರಾಜ್, ಶಿವಣ್ಣ ವಾಲಿ, ಕಿರಣ್, ರಾಮು, ಪವನ್, ತೀರ್ಥಪ್ಪ, ರೋಶನಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...