ಎಪಿಎಂಸಿ ಗಣಪತಿ ಸಾಂಸ್ಕೃತಿಕ ಕಾರ್ಯಕ್ರಮ, 50 ವರ್ಷಗಳ ಸುಗಮ ಸಂಗೀತ ಸೇವೆಯಲ್ಲಿ ಭದ್ರಾವತಿ ವಾಸು ಸಾಧನೆ ಅಪಾರ : ಪರಶುರಾಮ್

ಶಿವಮೊಗ್ಗ : ಸಂಗೀತ ಕ್ಷೇತ್ರದಲ್ಲಿ ಶ್ರದ್ಧೆ, ಸಾಧನೆ, ಭಕ್ತಿ ಹಾಗೂ ಏಕಾಗ್ರತೆ ಅತ್ಯಂತ ಮುಖ್ಯ. ಸಂಗೀತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅದು ಸಾಧಕನ ಸ್ವತ್ತಾಗಿದೆ ಎಂದು ಗಾಯಕ ಭಾವಗಾನ ತಂಡದ ಆಜೀವ ಸದಸ್ಯ ಪರಶುರಾಮ್ ಹೇಳಿದರು.

ಎಪಿಎಂಸಿ ಗಣಪತಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಭದ್ರಾವತಿ ವಾಸು ಅವರ ಕೊಡುಗೆ ಅಪಾರ. ಅಲ್ಲದೆ ಕಾಂತಾರ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನೀಡಿ ಖ್ಯಾತಿ ಪಡೆದ ಅಜನೀಶ್ ಅವರ ತಂದೆ ಭದ್ರಾವತಿ ಲೋಕನಾಥ್ ಅವರ ಸಾಧನೆಯೂ ವಿಶೇಷವಾಗಿದೆ. ಇಂತಹ ಸಾಧಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್ ಮಾತನಾಡಿ, ಭದ್ರಾವತಿ ವಾಸು ಅವರಿಂದ ಸಾವಿರಾರು ಮಂದಿ ಗಾಯಕರು ತರಬೇತಿ ಪಡೆದು, ಇಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಸಂಗೀತವು ಮನಸ್ಸಿನ ಖಿನ್ನತೆಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದ್ದು, ಪ್ರತಿಯೊಬ್ಬರೂ ಕ್ರಮಬದ್ಧವಾಗಿ ಅಭ್ಯಾಸ ಮಾಡಿ ಸಾಧನೆ ಮಾಡಬೇಕು ಎಂದರು.

ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ಕುಮಾರಿ ಆಧ್ಯ ಮಾತನಾಡಿ, ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಂಸ್ಥೆಯ ಗೌರವವೂ ಹೆಚ್ಚುತ್ತದೆ. ಭದ್ರಾವತಿ ವಾಸು ಅವರ ಸಾಧನೆ ಸ್ಮರಣೀಯವಾಗಿದ್ದು, ಅವರ ಶಿಷ್ಯರಾಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಬಾವಾಗಾನ ತಂಡ ದ ನಿರ್ದೇಶಕರು ಪ್ರಶಾಂತ್ ಹದಡಿ, ಹೇಮಂತ್, ಶುಭ, ಸರ್ವಮಂಗಳ ಮತ್ತು ಭಾವಗಾನ ತಂಡದ ಸದಸ್ಯರು, ಗಾಯಕರು ಹಾಗೂ ಸಂಗೀತಾಸಕ್ತರು ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...